ಹಾಸನದ ಡಿ.ಎ.ಆರ್ ಮೈದಾನದಲ್ಲಿ ಸಂದರ್ಶನ (ದೈಹಿಕ ಪರೀಕ್ಷೆ)

0

ಹಾಸನ : ಜಿಲ್ಲೆಯ ಗೃಹರಕ್ಷಕ ಘಟಕ ಹಾಗೂ ಉಪ ಘಟಕಗಳಲ್ಲಿ ಖಾಲಿ ಇರುವ ಸ್ವಯಂಸೇವಕ ಗೃಹರಕ್ಷಕ ಗೌರವ ಸದಸ್ಯ ಸ್ಥಾನಗಳಿಗೆ ಸೇರ ಬಯಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 14 ರಂದು ಬೆಳಗ್ಗೆ 10 ಗಂಟೆಗೆ ಹಾಸನದ ಡಿ.ಎ.ಆರ್ ಮೈದಾನದಲ್ಲಿ ಸಂದರ್ಶನ (ದೈಹಿಕ ಪರೀಕ್ಷೆ) ಏರ್ಪಡಿಸಲಾಗಿದೆ ಎಂದು ಜಿಲ್ಲಾ ಗೃಹರಕ್ಷಕ ಆಯ್ಕೆ ಸಮಿತಿ ಹಾಗೂ ಸದಸ್ಯ ಕಾರ್ಯದರ್ಶಿಯವರು ತಿಳಿಸಿದ್ದಾರೆ.

ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದು ತಮ್ಮ ಸ್ವಂತ ಖರ್ಚಿನಲ್ಲಿ ಜನ್ಮದಿನಾಂಕದ ಮೂಲ ಪ್ರಮಾಣಪತ್ರ ಹಾಗೂ ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಮಾಂಡೆಂಟ್ ಜಿಲ್ಲಾ ಗೃಹರಕ್ಷಕದಳದ ಕಾರ್ಯಾಲಯ ಅಗ್ನಿಶಾಮಕ ಠಾಣೆ ಅವರಣ ಹಾಸನ 573201 ದೂರವಾಣಿಸಂಖ್ಯೆ 08172 240690 ಗೆ ಸಂಪರ್ಕಿಸಬಹುದಾಗಿದೆ.

ಹಾಸನದ ಇತರೆ ಉದ್ಯೋಗ ಮಾಹಿತಿಗಾಗಿ ಮುಂದಿನ ವರದಿಗಳ ಗಮನಿಸುತ್ತಿರಿ : ಧನ್ಯವಾದಗಳು

LEAVE A REPLY

Please enter your comment!
Please enter your name here