ಯುವಕರೇ ನಾಚುವಂತೆ ಇಳಿ ವಯಸ್ಸಿನಲ್ಲಿ ತನಗೆ ಬಂದ ಕೋವಿಡ್ ವೈರಸ್ ನಿಂದ ಗುಣಮುಖರಾಗಿ ಬಂದ ಯುವಕರಿಗೆ ಸಂದೇಶ ನೀಡಿದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕ್ಯಾನಳ್ಳಿ ಗ್ರಾಮದ ದೇವಿರಮ್ಮ (96ವರ್ಷ ವಯಸ್ಸು) ಕಳೆದ ವಾರ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಧೃಡ ಪಟ್ಟಿತ್ತು ., ಕುಟುಂಬ ಸದಸ್ಯರು ಆದ ಮಕ್ಕಳು , ಮೊಮ್ಮಕ್ಕಳು , ಮರಿ ಮೊಮ್ಮಕ್ಕಳು ಗಾಬರಿಗೊಂಡರು , ಅವರಿಗೆಲ್ಲ ಅಜ್ಜಿಯೇ ಧೈರ್ಯ ತುಂಬಿ ‘ ನಾನ್ ಉಷಾರಾಗ್ ಬತೀನ್ ಮಗ ಚಿಂತೆ ಮಾಡ್ಬೇಡಿ ‘ ಅನ್ಕಂತ ಹೋದೋರು , ಇವತ್ತು ಮೇ 29 ಶನಿವಾರ ಮಧ್ಯಾಹ್ನ ಸಕಲೇಶಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಕ್ರಾಫರ್ಡ್ ನಿಂದ ಗುಣಮುಖರಾಗಿ ಹೊರಬಂದು ವಿಡಿಯೋ
ಮೂಲಕ ಸಂದೇಶ ಕೊಟ್ಟು , ಯಾರು ಪ್ಯಾನಿಕ್ ಆಗೋದು ಅವಶ್ಯಕತೆ ಇಲ್ಲ ನಿಮ್ಮ ಎಚ್ಚರಿಕೆ ನಿಮ್ಮಲ್ಲಿರಲಿ , ಮಾಸ್ ಹಾಕಳಿ , ಜಾಸ್ತಿ ಜನ ಸೇರ್ಕಬೇಡಿ , ಡಾಕ್ಟ್ರು ಹೇಳ್ದಂಗ್ ಕೇಳಿ ! ಅಂತ ಸಮಾಜದ ಯುವ ಕಣ್ಮಣಿಗಳಿಗೆ ಸಂದೇಶ ಕೊಟ್ಟಿದ್ದು ವಿಶೇಷವಾಗಿತ್ತು
#hassannews ಸಖತ್ newzz ಮಗ
#hassan district no.1 social media page