ಹಾಸನ ನಗರಸಭಾ ವ್ಯಾಪ್ತಿ !, ಹಾಸನ ನಗರಸಭಾ ಆಯುಕ್ತರು , ವಿದ್ಯತ್ ನಗರ ಸಭಾ ಸದಸ್ಯರು ಮತ್ತು ಜಿಲ್ಲಾಡಳಿತಕ್ಕೆ ಈ ಮೂಲಕ ಮನವಿ ಮಾಡುವುದೇನೆಂದರೆ ;, ತಾವು ಈ ವಿಡಿಯೋ ದಲ್ಲಿ ನೋಡುತ್ತಿರುವ ದೃಶ್ಯ ಹಾಸನ ನಗರದ ಆಕಾಶವಾಣಿ ಮುಂಭಾಗದ ವಿದ್ಯುತ್ ನಗರದ ಖಾಲಿ ಸೈಟ್ ನದ್ದು , ಇಲ್ಲಿ ಮಾಲೀಕರ ನಿರ್ಲಕ್ಷ್ಯ ಕ್ಕೆ ಒಳಗಾಗಿ ಅನವಶ್ಯ ಗಿಡಗಂಟೆಗಳು ಬೆಳೆದುಕೊಂಡು ಮಳೆ ಬಂದಾಗಲೆಲ್ಲ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿ ಸುತ್ತ ಮುತ್ತಲಿ ಬಡಾವಣಾ ಸಾರ್ವಜನಿಕ ಕರಿಗೆ ತೊಂದರೆಯಾಗಿದೆ .,
ಅಪರಿಚಿತ ವ್ಯಕ್ತಿಗಳ ಆಗಮನದಿಂದ ಈ ಸ್ಥಳ ದಲ್ಲಿ ಅನೈತಿಕ ಚಟುವಟಿಕೆ ನಡೆಯುವ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಸ್ಥಳೀಯ ರು ಹಾಸನ್ ನ್ಯೂಸ್ ತಂಡಕ್ಕೆ ಮನವಿ ಮಾಡಿರುತ್ತಾರೆ . ,
ಅಪಾಯಕಾರಿ ಬೆಳವಣಿಗೆಗೆ ಆಹ್ವಾನ ನೀಡದೆ ಈ ಸ್ಥಳವನ್ನು ಸ್ವಚ್ಛ ಗೊಳಿಸಲು ವ್ಯವಸ್ಥೆ ಮಾಡಿಕೊಟ್ಟು ಸ್ವಾಸ್ಥ್ಯ ಕಾಪಾಡುವಲ್ಲಿ ಅನುವುಮಾಡಿಕೊಡಬೇಕೆಂದು ಆಗ್ರಹಿಸುತ್ತಿದೇವೆ !! 🙏