ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಅರಸೀಕೆರೆ ರೈಲ್ವೆ ನಿಲ್ದಾಣ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಭಿನಂದನೆ ಸಲ್ಲಿಸಿದರು

0

ಅರಸೀಕೆರೆ ನಗರದ ರೈಲ್ವೆ ನಿಲ್ದಾಣಕ್ಕೆ ಇಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಅಮೃತ ಭಾರತ ಯೋಜನೆಯಡಿ 34 ಕೋಟಿ ರೂ.ವೆಚ್ಚದಲ್ಲಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಹಾಗೂ ನವೀಕರಿಸುತ್ತಿರುವ ಕಾಮಗಾರಿ ಕುರಿತು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಸಾರ್ವಜನಿಕರಿಂದ ಕಾಳನ ಕೊಪ್ಪಲ್ ಸುಬ್ರಹ್ಮಣ್ಯ ನಗರ ಕಾಲು ಸೇತುವೆ, ಗೋಡ್ಸಡ್ ರೋಡ್ ಹಾಗೂ ರೈಲ್ವೆ ನಿಲ್ದಾಣ ಮಧ್ಯೆ ಸಾರ್ವಜನಿಕರು ಓಡಾಡಲು ಅಡ್ಡಗೋಡೆ ತರುವಿಗೆ ಅವಿಜ್ಞಾನವಾಗಿ ಕಟ್ಟಿರುವ ಅಂಡರ್ ಬ್ರಿಡ್ಜ್ ಗಳ ಬಗ್ಗೆ ಪರಿಶೀಲನೆ

ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಸಮಸ್ಯೆಗಳ ತಿಳಿದುಕೊಂಡರು. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ವಿಷ್ಣು ಭೂಷಣ್, ಭರತ್ ತಿವಾರಿ, ಲೋಹಿತ್ ಈಶ್ವರ್, ಬಶೀರ್, ಭರತ್ ಕುಮಾರ್ ಸಿಂಗ್, ಜೆಡಿಎಸ್ ಮುಖಂಡರುಗಳಾದ ಗಂಗಾಧರ್, ಸೈಯದ್ ಸಿಕಂದರ್, ಜಾಕೀರ್, ಇನ್ನು ಹಲವಾರು ಮುಖಂಡರು ಉಪಸ್ಥಿದ್ದರು.

LEAVE A REPLY

Please enter your comment!
Please enter your name here