ಹಾಸನ ಜಿಲ್ಲೆ : ಬೇಲೂರು : ಆಟೋ ಕಾರು ನಡುವೆ ಮುಖಾಮುಖಿ ಡಿಕ್ಕಿ. ಸ್ಥಳದಲ್ಲೇ ಆಟೋ ಚಾಲಕ ಸಾವು. ಬಳ್ಳೂರು ಗ್ರಾಮದ ದರ್ಶನ್ (25) ಮೃತ ಆಟೋಚಾಲಕ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹೊಸನಗರ ತಿರುವು ಬಳಿ ಘಟನೆ. ಹಾಸನದಿಂದ ಬೇಲೂರು ಕಡೆಗೆ ತೆರುಳಿದ್ದ ಕಾರು.
ಬೇಲೂರಿನಿಂದ ಹಾಸನದ ಕಡೆಗೆ ಬರುತ್ತಿದ್ದ ಆಟೋ. ದರ್ಶನ್ ಸಹೋದರ ಚೇತನ್ (24) ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ, ಇದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಪೋಷಕರು. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ತಾರೀಕು 11, ಸೋಮವಾರ ಮಧ್ಯಾಹ್ನ ಸುಮಾರು 11.15 ಘಂಟೆಯಲ್ಲಿ ನಡೆದ ಅಪಘಾತ.