ಹಾಸನ : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಹಿಂಬಾಲಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಿತ್ತು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಮಂಗಳಾಪುರ ಬಳಿ ನಡೆದಿದೆ. , ಫೆ.23ರ ಮಧ್ಯಾಹ್ನ ಮಂಗಳಾಪುರ ರಸ್ತೆಯಲ್ಲಿರುವ ಎರಘಟ್ಟ ಕೆರೆ ಹತ್ತಿರ ಗಂಡಸಿಯ ಪಾರ್ವತಮ್ಮ ಎಂಬುವರು ನಡೆದುಕೊಂಡು ಹೋಗುತ್ತಿದ್ದರು. , ಅದೇ ವೇಳೆ
ನಡೆದು ಬರುತ್ತಿದ್ದ ಅಂದಾಜು 25 ರಿಂದ 30 ವರ್ಷದ ಯುವಕ ಹಿಂದೆ ಯಿಂದ ಹಿಂಬಾಲಿಸಿ ಪಾರ್ವತಮ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೀಳಲು ಪ್ರಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ಕೂಡ ಪ್ರತಿರೋಧ ವ್ಯಕ್ತಪಡಿಸಿ ವಿರೋಧಿಸಿದಾಗ ಆಕೆಯ ತಲೆ ಜುಟ್ಟುಹಿಡಿದು ಕೆಳಕ್ಕೆ ಬೀಳಿಸಿ, ಎಡ ಕೈ ಬೆರಳನ್ನು
ಕಚ್ಚಿ ಕೊರಳಿಗೆ ಕೈ ಹಾಕಿ 17 ಗ್ರಾಂ ತೂಕದ 85 ಸಾವಿರ ಮೌಲ್ಯದ ಚಿನ್ನದ ಸರ ಕಿತ್ತು ಓಮಿನಿ ಕಾರಿನಲ್ಲಿ ಪರಾರಿಯಾಗಿದ್ದಾನೆ.