ಇಷ್ಟು ನಿಧಾನವಾಗಿ ಈ ಬಸ್ ಚಲಿಸಿದರೆ, ನಾವು ಕಾಲೇಜು ಸೇರೋದು ಯಾವಾಗ, ವಾಪಸ್ ಬರೋದು ಯಾವಾಗ ??

0

ಹಾಸನ : ಸಕಲೇಶಪುರ ಘಟಕಕ್ಕೆ ಸೇರಿದ ಈ ಬಸ್ ಪಾಳ್ಯ ನಲ್ಲೂರು ಮಗ್ಗೆ ಮಾರ್ಗದ ಬಸ್ ಇದಾಗಿದ್ದು ಪ್ರತಿ ನಿತ್ಯವೂ ಹಳೆ ಗಾಡಿ ಗಳನ್ನು ಕೊಟ್ಟು ವಿಧ್ಯಾರ್ಥಿಗಳು ಸರಿ ಆಗಿ ಸಮಯಕ್ಕೆ ಕಾಲೇಜು ತಲುಪುವುದಕ್ಕೆ ಆಗುತ್ತಿಲ್ಲ ಮತ್ತು ಈ ಬಸ್ ಗಳು ಪ್ರತಿ ನಿತ್ಯವೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಡಿಪೋ ಮ್ಯಾನೇಜರ್ ಬಳಿ ಕೇಳಿದರೆ ನಮಗೆ ಸರಿಯಾಗಿ ಸ್ಪಂದಿಸುವುದಿಲ್ಲ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಸ್ಪಂದಿಸುವುದಿಲ್ಲ ಪ್ರತಿನಿತ್ಯವೂ ವಿದ್ಯಾರ್ಥಿ ಗಳಿಗೆ ತೊಂದರೆ ಆಗಿದೆ ಈ ಸಮಸ್ಯೆಯನ್ನು ನಮಗೆ ಬಗೆಹರಿಸಿ ಕೊಡಬೇಕೆಂದು ನಿಮ್ಮಲ್ಲಿ ಕೇಳಿ ಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳು ಹಾಸನ್ ನ್ಯೂಸ್ ತಂಡಕ್ಕೆ ವಿನಂತಿಸಿದ್ದಾರೆ. ಇಲ್ಲ ನಮಗೆ ಘಟಕ ಬದಲಾಯಿಸಿ ಕೊಡಬೇಕು ಇಲ್ಲ ಎಂದರೆ ನಮಗೆ ತೊಂದರೆ ಬಗೆಹರಿಸಿ ಕೊಡಬೇಕು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here