ಕಾರಿನಲ್ಲಿ ಇದ್ದಕ್ಕಿದ್ದಂತೆ ಆದ ಶಾರ್ಟ್ ಸರ್ಕ್ಯೂಟ್ ನಿಂದ ಕಾರು ಬಹುತೇಕ ಕರಕಲು

0

ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಗ್ಗದೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚಿಕ್ಕಬಳ್ಳಾಪುರದ ಯಾತ್ರಿಕರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ ತಮ್ಮ ಊರಿಗೆ ಹೋಗುವ ಸಂದರ್ಭದಲ್ಲಿ ಹೆಗ್ಗದ್ದೆ ಬಳಿ ತಮ್ಮ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರ್ ನ ಮುಂಭಾಗ ಬಹುತೇಕ ಸುಟ್ಟು ಕರಕಲಂತಾಗಿದ್ದು ಸ್ಥಳಕ್ಕೆ ಸಕಲೇಶಪುರ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದ್ದಾರೆ .

ಈ ಶಾರ್ಟ್ ಸರ್ಕ್ಯೂಟ್ ನಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳಾಗಿರುವುದಿಲ್ಲ ಎಂದು ತಿಳಿದು ಬಂದಿದೆ., ಕಾರಿನ ಚಾಲಕ , ಈ ಬೆಂಕಿ ಆಕಸ್ಮಿಕ ಘಟಿಸಲು ಕಾರಣವೇನೆಂದು ತಿಳಿದು ಕೊಳ್ಳುವ ಪ್ರಯತ್ನದಲ್ಲಿದ್ದಾರೆ

LEAVE A REPLY

Please enter your comment!
Please enter your name here