ಹಾಸನ: ಸೌಜನ್ಯ ಅತ್ಯಾಚಾರ, ಕೊಲೆ ಖಂಡಿಸಿ ಬೆಳ್ತಂಗಡಿಯಿಂದ ಪಾದಯಾತ್ರೆ ಪ್ರಾರಂಭಿಸಿ ಬೆಂಗಳೂರಿನ ವಿಧಾನಸೌದದವರೆಗೂ ಸಾಗಲಿದ್ದು, ಹಾಸನ ಮಾರ್ಗವಾಗಿ ಬಂದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಸೌಜನ್ಯ ಎನ್ನುವ ವಿದ್ಯಾರ್ಥಿನಿಯನ್ನು ದಾರುಣವಾಗಿ ಅತ್ಯಾಚಾರ ಮಾಡಿ ಕೊಲೆಮಾಡಲಾಗಿದ್ದು ಇದನ್ನು ಖಂಡಿಸಿ ರಾಜ್ಯಾದ್ಯಾಂತ ಪ್ರತಿಭಟನೆ ನಡೆಯುತ್ತಿದು, ಯಾರು ಇದರಲ್ಲಿ ಪ್ರಮುಖ ಆರೋಪಿಗಳಾಗಿರುತ್ತಾರೆ ಅವರನ್ನು ಕೂಡಲೇ ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಅಲ್ಲದೆ ಅವರನ್ನು ಮಾಡದಂಡನೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ರಾಜ್ಯದ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣರೆಡ್ಡಿ ಅವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದು, ಹಾಸನಕ್ಕೆ ಆಗಮಿಸಿದ್ದು ಅವರನ್ನು ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲಿಸಿ ಬರಮಾಡಿಕೊಂಡರು.
ಇದೆ ವೇಳೆ ಕೆ.ಆರ್.ಎಸ್. ಪಕ್ಷದ ರಾಜ್ಯ ಉಪಾಧ್ಯಕ್ಷ ನಿಂಗೇಗೌಡ ಮಾತನಾಡಿ, ಸೌಜನ್ಯ ಪ್ರಕರಣಕ್ಕೆ ೧೩ ತುಂಬಿದರೂ ಸಹ ಈ ಕೊಲೆಯ ಬಗ್ಗೆ ಇಲ್ಲಿಯವರೆಗೂ ಯಾರೂ ದ್ವನಿ ಎತ್ತುತ್ತಿಲ್ಲ.ಅಲ್ಲದೆ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದ್ದು ನಮ್ಮ ಹೋರಾಟ ಯಾವುದೇ ಧರ್ಮ ಅಥವಾ ವ್ಯಕ್ತಿಯ ಪರವಾಗಿ ಅಲ್ಲ. ನಮ್ಮ ಅಕ್ಕತಂಗಿಯರ ವಿರುದ್ಧ ಆಗುತ್ತಿರುವ ಅನ್ಯಾಯದ ದೌರ್ಜನ್ಯ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ.
ನಮ್ಮ ರಾಜ್ಯಧ್ಯಕ್ಷರ ನೇತೃತ್ವದಲ್ಲಿ ೧೪ ದಿನಗಳ ಕಾಲ ೩೩೦ ಕಿಮೀವರೆಗೂ ಈ ಘೋರ ಹತ್ಯೆ ಖಂಡಿಸಿ ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ.ಹಾಗೂ ನಮ್ಮ ರಾಜ್ಯಧ್ಯಕ್ಷರು ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಸ್ತದವರೆಗೂ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಕೊನೆಯ ದಿನದ ಪಾದಯಾತ್ರೆ ದಿನ ೧೦ ಸಾವಿರ ಜನ ಸಾರ್ವಜನಿಕ ಸಭೆಯಲ್ಲಿ ಅಂದು ತಮ್ಮ ಮೌನವನ್ನು ಮುರಿದು ಇದರ ಬಗ್ಗೆ ಧ್ವನಿ ಎತ್ತಲಿದ್ದಾರೆ. ಸರ್ಕಾರ ಹಾಗೂ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಾಗೂ ಪೊಲೀಸ್ ಇಲಾಖೆ ವಿರುದ್ಧ ನಾವು ಧ್ವನಿ ಎತ್ತಲಿದ್ದು.
ನಮ್ಮ ಕೂಗು ಒಂದೇ ಸೌಜನ್ಯಳ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಮರು ತನಿಖೆಯಾಗಬೇಕು.ಈ ಪ್ರಕರಣಕ್ಕೆ ಸೂಕ್ತ ತನಿಖೆ ಮಾಡಲು ಮಹಿಳಾ ಸುರಕ್ಷ ಆಯೋಗ ಸ್ಥಾಪನೆಯಾಗಬೇಕು.ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ತನಿಖಾಧಿಕಾರಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು.ಎಲ್ಲಾ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ತನಿಖೆ ಮಾಡುವ ಮೂಲಕ ನಿಗದಿತ ಸಮಯಕ್ಕೆ ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಅಲ್ಲದೆ ಈ ಒಂದು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನುಗಳು ಸಹ ಕಣ್ಮುಚ್ಚಿ ಕುಳಿತುಕೊಂಡಿದ್ದು, ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಕಠಿಣ ಶಿಕ್ಷೆ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಇದೇ ವೇಳೆ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ, ದೀಪಕ್, ರಘುಪತಿ ಭಟ್, ಎಸ್. ಮೂರ್ತಿ, ಆದೇಶ್, ಹರ್ಷವರ್ದನ್, ರಿಯಾಜ್, ಸಚಿನ್, ಸುನೀಲ್, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯದರ್ಶಿ ಸುನಿತಾ ರೋಜಾರಿಯೋ, ತಾಲೂಕು ಅಧ್ಯಕ್ಷ ರಮೇಶ್ ಬೂವನಹಳ್ಳಿ, ಕಾರ್ಯದರ್ಶಿ ಸಂತೋಷ್ ಇತರರು ಉಪಸ್ಥಿತರಿದ್ದರು.