ಕೊಡಲೇ ಏರಿಯನ್ನು ದುರಸ್ತಿಪಡಿಸಬೇಕು ಎಂದು ಗ್ರಾಮಸ್ಥರು ಮನವಿ

0

ಹಾಸನ / ಬೇಲೂರು !, ಕಳೆದ 2ವರ್ಷದ ಹಿಂದೆ ಬೇಲೂರು ತಾಲ್ಲೂಕಿನ ಹನಿಕೆಸಂತೆಯ ಗ್ರಾಮದ ಕೆರೆ ಏರಿಯನ್ನು ಅಗಲಗೊಳಿಸಿ ಡಾಂಬರೀಕರಣ ಮಾಡಲಾಗಿತ್ತು. ಈ ಸಾಲಿನಲ್ಲಿ ಸುರಿದ ಯಥೇಚ್ಛ ಮಳೆಗೆ ಕೆರೆ ಭರ್ತಿಯಾಗಿದೆ , ಅಲ್ಲದೆ ಕೆರೆ ಏರಿ ಸುಮಾರುವ50ಕ್ಕು ಹೆಚ್ಚು ಅಡಿ ಉದ್ದ, 6 ಅಡಿ ಅಗಲ ಕುಸಿದಿದೆ. ಬೇಲೂರು ಸುತ್ತಮುತ್ತಲಿನ ವಾಹನ ಸವಾರರು ಈ ಏರಿಯ ಮೇಲೆ ಸಂಚರಿಸುವಾಗ ತುಸು ಎಚ್ಚರ ಇರಲಿ !! ಏರಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.

° ಕೆರೆ ಏರಿಯನ್ನು ವಿಸ್ತರಿಸುವಾಗ , ತೂಬಿಗೆ ಬಲಿಷ್ಠ ಕಾಂಕ್ರೀಟ್ ಹಾಕದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುರು ಸಾಧ್ಯತೆ ಇರೋದ್ರಿಂದ ಕೆರೆ ಏರಿ ಕುಸಿಯುತ್ತಿದೆ. ಕೊಡಲೇ ಏರಿಯನ್ನು ದುರಸ್ತಿಪಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ 🙏

LEAVE A REPLY

Please enter your comment!
Please enter your name here