ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಹಾಸನ ನಗರದಲ್ಲಿಂದು ಕೋವಿಡ್-19 ನಿಂದ ಇತ್ತೀಚೆಗೆ ತಂದೆ ಹಾಗೂ ಶಿಕ್ಷಕಿ ವೃತ್ತಿ ಮಾಡುತ್ತಿದ್ದ ತಾಯಿಯನ್ನ ಕಳೆದುಕೊಂಡು ಏಕಾಂಗಿಯಾಗಿರುವ ಯುವಕನ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಅಧಿಕಾರಿಗಳೊಂದಿಗೆ ಮೃತರ ಮನೆಗೆ ಭೇಟಿ ನೀಡಿದ ಸಚಿವರು ಮೃತರ ಏಕೈಕ ಪುತ್ರ ಧೀಮಂತ ಅವರಿಗೆ ಸಾಂತ್ವಾನ ಹೇಳಿದರು.
ಸರ್ಕಾರದಿಂದ ಬರಬೇಕಾಗಿರುವ ಎಲ್ಲಾ ರೀತಿಯ ಪರಿಹಾರ ಹಣವನ್ನು ಒದಗಿಸಲಾಗುವುದು. ಅಲ್ಲದೆ ಅನುಕಂಪದ ಆದಾರದ ಮೇಲೆ ಮಗನಿಗೆ ಉದ್ಯೋಗ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಪರಿಹಾರ ಹಾಗೂ ಇತರ ಬರಬೇಕಿರುವ ಹಣವನ್ನು ಶೀಘ್ರವೇ ಒದಗಿಸುವ ಜೊತೆಗೆ ಅನುಕಂಪದ ಅಧಾರದ ಮೇಲೆ ಉದ್ಯೋಗ ಕ್ಕೆ ಯುವಕನನ್ನು ಅಲೆದಾಡಿಸದೆ ಶೀಘ್ರವೇ ಕಡತ ಸಿದ್ದ ಪಡಿಸಿ ಸರ್ಕಾರಕ್ಕೆ ಪ್ರಸ್ರಾವನೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ್ ಹಾಗೂ ಮತ್ತಿತರರು ಹಾಜರಿದ್ದರು.