ಗ್ರಾ.ಪಂ ಚುನಾವಣೆ ಹಿನ್ನಲೆ : ಸಂತೆ ಜಾತ್ರೆಗಳು ನಿಷೇಧ

0

ಹಾಸನ ಜಿಲ್ಲೆಯಲ್ಲಿ ಡಿ.22 ಮತ್ತು ಡಿ.27 ಕರ್ನಾಟಕ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಮೊದಲನೇ ಹಾಗೂ ಎರಡನೇ ಹಂತದಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ವ್ಯಾಪ್ತಿಯಲ್ಲಿ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಸಾರ್ವಜನಿಕ ಚುನಾವಣೆಯ ಮತದಾನ ಕಾರ್ಯವನ್ನು ಸುಗಮವಾಗಿ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಡಿ.22 ರಂದು ಅರಕಲಗೂಡು ತಾಲ್ಲೂಕಿನಲ್ಲಿ ನಡೆಯುವ ಕೇರಳಾಪುರ ಸಂತೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹಿರಿಸಾವೆ, ನುಗ್ಗೆಹಳ್ಳಿ, ದಿಡಿಗ, ಅಕ್ಕನಹಳ್ಳಿ, ಹಾಗೂ ಡಿ. 27 ರಂದು ಹೊಳೆನರಸಿಪುರ ತಾಲ್ಲೂಕಿನ ಹಳೇಕೋಟೆ, ಹಳ್ಳಿ ಮೈಸೂರು, ಅಗ್ರಹಾರ ಗೇಟ್ ಸಂತೆ, ಅರಸೀನಕೆರೆ ತಾಲ್ಲೂಕಿನ ಕಾಟೀಕೆರೆ, ಕಣಕಟ್ಟೆ, ಕಲ್ಲುಸಾದರಹಳ್ಳಿ, ಎಸ್. ಮಾಕನಹಳ್ಳಿ, ಜಾವಗಲ್ ಮತ್ತು ಆಲೂರು ತಾಲ್ಲೂಕಿನಲ್ಲಿ ಪಾಳ್ಯ, ತಾಳೂರು, ಬೇಲೂರು ತಾಲ್ಲೂಕಿನಲ್ಲಿ ಹನಿಕೆ ಗ್ರಾಮಗಳಲ್ಲಿ ಸಂತೆ ಮತ್ತು ಜಾತ್ರೆ ನಡೆಯುವುದನ್ನು ನಿಷೇಧಿಸಲಾಗಿದೆ.
**************

LEAVE A REPLY

Please enter your comment!
Please enter your name here