ಜೋಳವನ್ನು ಕೆಎಂಎಫ್ ಮೂಲಕ ನೇರವಾಗಿ ಖರೀದಿ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜೋಳ ಸುರಿದು ಪ್ರತಿಭಟನೆ

0

ಹಾಸನ: ಬರಗಾಲದ ಸಂದರ್ಭದಲ್ಲಿ ಅಲ್ಪಸ್ವಲ್ಪ ಬೆಳೆದಿರುವ ಜೋಳವನ್ನು ಕೆಎಂಎಫ್ ಮೂಲಕ ನೇರವಾಗಿ ಖರೀದಿ ಮಾಡುವಂತೆ ಒತ್ತಾಯಿಸಿ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜೋಳ ಸುರಿದು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೇವಣ್ಣ ಅವರ ನೇತೃತ್ವದಲ್ಲಿ ಜೋಳವನ್ನು ತುಂಬಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಯದರು ಸುರಿದು ಆಕ್ರೋಶ ವ್ಯಕ್ತಪಡಿಸಿದ ಅವರು ದಲ್ಲಾಳಿಗಳ ಮೂಲಕ ಕೆಎಂಎಫ್ ಜೋಳವನ್ನು ಖರೀದಿಸಲು ಮುಂದಾಗುತ್ತದೆ ಅದರ ಬದಲಾಗಿ ನೇರವಾಗಿ ರೈತರಿಂದಲೇ ಖರೀದಿ ಮಾಡುವ ಮೂಲಕ ಅವರ ಸಂಕಷ್ಟದಲ್ಲಿ ನೆರವಾಗಬೇಕು ಎಂದು ಒತ್ತಾಯಿಸಿದರು.

ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಸರ್ಕಾರ ರೈತರನ್ನ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಬರಗಾಲದಿಂದ ರೈತರು ಕತ್ತರಿಸಿ ಹೋಗಿದ್ದಾರೆ ಎಲ್ಲೇ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ ಅಲ್ಪಸಲ್ಪ ಮಳೆಯಲ್ಲಿ ಮತ್ತು ನೀರಾವರಿ ಪ್ರದೇಶದಲ್ಲಿ ಬೆಳೆದಿರುವಂತಹ ರಾಗಿ ಜೋಳವನ್ನು ನೇರವಾಗಿ ಸರ್ಕಾರವೇ ಕೆಎಂಎಫ್ ಮೂಲಕ ಖರೀದಿ ಖರೀದಿಸಬೇಕು ಎಂದು ಆಗ್ರಹಿಸಿದರು. ಪಶು ಆಹಾರ ಉತ್ಪಾದನೆಗೆ ಪ್ರಮುಖವಾಗಿ ಜೋಳ ಬೇಕಾಗುತ್ತದೆ ಇದನ್ನ ದಲ್ಲಾಳಿಗಳ ಮೂಲಕ ಕೆಮೆಸ್ಟ್ ಖರೀದಿ ಮಾಡುತ್ತಾರೆ ಇದರಿಂದ ಕೋಟ್ಯಂತರರು ಹಣ ದಲ್ಲಾಳಿಗಳ ಪಾಲಾಗುತ್ತದೆ ಆದ್ದರಿಂದ ನೇರವಾಗಿಯೇ ರೈತರಿಗೆ ಹೆಚ್ಚಿಗೆ ಹಣ ನೀಡಿ ಖರೀದಿ ಮಾಡಬೇಕು , ಈ ನಿಟ್ಟಿನಲ್ಲಿ ಸರ್ಕಾರ ಆದೇಶ ವರ್ಣಿಸಬೇಕು ಇದರಿಂದ ರೈತರಿಗೆ ನೆರವಾಗಲಿದೆ ಎಂದು ಹೇಳಿದರು. ರೈತರಿಂದ ಖರೀದಿ ಮಾಡುವಂತೆ ನಾನೇ ಮಹಾಮಂಡಲದ ಸಭೆಯಲ್ಲಿ ಪ್ರಸ್ತಾಪ ಮಾಡಿದೆ ಆದರೆ ಇದುವರೆಗೂ ಅದನ್ನು ಮಾಡದೆ ಟೆಂಡರ್ ಕರೆಯಲಾಗುತ್ತಿದೆ ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಹೇಮಾವತಿ ಜಲಾಶಯದಿಂದ ನೀರನ್ನ ಬಿಡಲಾಗಿದೆ ಆದರೆ ಸಲಹಾ ಸಮಿತಿ ಸಭೆಯನ್ನು ಕರೆಯದೆ ಏಕ ಪಕ್ಷಯವಾಗಿ ನಡೆದುಕೊಂಡಿದ್ದಾರೆ. ಈಗ ನೀರಿಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ, ಮಳೆಯೂ ಇಲ್ಲದೆ ಬರಗಾಲದ ಛಾಯೆ ಆವರಿಸಿದ್ದು ಸರ್ಕಾರ ಹೆಚ್ಚಿನ ಪರಿಹಾರವನ್ನ ಘೋಷಣೆ ಮಾಡಬೇಕು ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳನ್ನ ಬರಬೇಡಿ ಆಗ್ರಹಿಸಿದರು ಪ್ರತಿಭಟನೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮುಖಂಡರಾದ ಎಸ್ ದೇವೇಗೌಡ ಸತ್ಯನಾರಾಯಣ್, ದುದ್ಧ ಲಕ್ಷ್ಮಣ್, ಸಿ.ಆರ್. ಶಂಕರ್, ಹೊಂಗರೆ ರಘು, ವಾಸುದೇವ್, ಅಮೀರ್ ಜಾನ್,ಅಕ್ಷ‌, ಕ್ರಾಂತಿ, ಗಂಗಾಧರ್, ಸ್ವಾಮಿಗೌಡ, ಅಗಿಲೆ ಮೊಗಣ್ಣಗೌಡ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here