ಹಾಸನ : ಮಣಿಪುರದಲ್ಲಿ ನಡೆದ ಹಿಂಸಾಚಾರ ಖಂಡಿಸಿ ಹಾಗೂ ಬುಡಕಟು ಕ್ರೈಸ್ತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಮೆರವಣಿಯನ್ನು ನಡೆಸಿ ಜಿಲ್ಲಾಡಳಿತ್ಕೆ ಮನವಿ ಸಲ್ಲಿಸಿದಿರು.
ಕಳೆದ ೩ ತಿಂಗಳಿನಿಂದ ನಮ್ಮ ದೇಶದ ಚಿಕ್ಕ ರಾಜ್ಯವಾದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯಲ್ಲಿ ಕುಕ್ಕಿ ಸಮುದಾಯದ ನೂರಾರು ಜನರು ಸಾವನ್ನಪ್ಪಿದ್ದಾರೆ. ನೂರಾರು ಪ್ರಾರ್ಥನಾ ಮಂದಿರಗಳು ಬೆಂಕಿಗಾಹುತಿಯಾಗಿವೆ. ಅನೇಕ ಹೆಣ್ಣು ಮಕ್ಕಳು ಅತ್ಯಚಾರಕ್ಕೀಡಾಗಿದ್ದಾರೆ. ರಾಜ್ಯವಾದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಹಿನ್ನೆಲೆಯಲ್ಲಿ ಇಂದಿಗೂ ಜೀವ ಭಯದಿಂದ ಸಾವಿರಾರು ಜನರು ವಲಸೆಹೋಗಿದ್ದಾರೆ. ಕೆಲವರು ಗುಡ್ಡಗಾಡುಗಳಲ್ಲಿ ಜೀವ ಭಯದಿಂದ ತಲೆ ಮರೆಸಿಕೊಂಡಿದ್ದಾರೆ. ಇಷ್ಟು ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿದ್ದರೂ ಈ ರಾಜ್ಯದಲ್ಲಿ ನ್ಯಾಯವು ಕಣ್ಮರೆಯಾಗಿದೆ. ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಕೆಲವೆ ಕೆಲವರ ಮೇಲೆ ಎಫ್.ಐ.ಆರ್. ಆಗಿದೆ. ಆದರೆ ಅವರಲ್ಲಿ ಬಂಧಿಸಿರುವುದು ಕೆಲವರನ್ನು ಮಾತ್ರ ಕಳೆದ ೨೦ ದಿನಗಳಲ್ಲಿ ವೈರಲ್ ಆದ ಸ್ತ್ರೀಯರ ಬೆತ್ತಲೆ ಮೆರವಣಿಗೆ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇಲ್ಲಿನ ಸರ್ಕಾರದ ನಿರ್ಲಕ್ಷ ದೇಶದ ಪ್ರಧಾನಿಯವರ ಮೌನವನ್ನು ನೋಡಿದರೆ ನಾವು ಯಾವ ದೇಶದಲ್ಲಿ ಬದುಕುತ್ತಿದ್ದೇವೆಂಬ ಕಳವಳ ಪ್ರತಿ ನಾಗರೀಕರಲ್ಲಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆಗೆ ಸರ್ಕಾರ ಉತ್ತರಸಲಾಗದೆ ತೊಳಲಾಡುತ್ತಿದೆ. ಸಂಸತ್ತಿನಲ್ಲಿ ಮಣಿಪುರದ ಹಿಂಸಾತ್ಮಕ ಘಟನೆಗಳ ಚರ್ಚೆಗೆ ಆಳುವ ಸರ್ಕಾರ ನಿರ್ಲಕ್ಷವಹಿಸಿದೆ. ಇಂತಹ ದುಸ್ಥಿಯಲ್ಲಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಉಳುವಿಗಾಗಿ ನಮ್ಮ ಹೋರಾಟವಾಗಿದೆ ಎಂದರು. ಕೇಂದ್ರ ಸರಕಾರವು ಕೂಡಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಬುಡಕಟ್ಟು ಕ್ರೈಸ್ತ ಸಮುದಾಯದ ಮೇಲಿನ ದೌರ್ಜನ್ಯ ನಿಲ್ಲಿಸಬೇಕು ಎಂದರು. ಈ ರಾಜ್ಯದಲ್ಲಿ ಹಿಂಸಚಾರಕ್ಕೆ ಒಳಗಾಗಿರುವ ಮಹಿಳೆಯರನ್ನು ಮತ್ತು ಮಕ್ಕಳನ್ನು ರಕ್ಷಣೆ ಮಾಡಬೇಕು. ಆಸ್ತಿ ಹಾಗೂ ಪ್ರಾಣಗಳನ್ನು ಕಳೆದುಕೊಂಡಿರುವ ಪ್ರತಿ ಕುಟುಂಬಕ್ಕೆ ಒಂದು ಕೋಟಿ ರೂಗಳ ಪರಿಹಾರ ಘೋಷಣೆ ಮಾಡಿ ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.