ಮಹಾರಾಷ್ಟ್ರ ರಾಜ್ಯದ ಬಾಂಬೆಯಿಂದ ಅಕ್ರಮವಾಗಿ ಮಧ್ಯ ಸಾಗಣೆ ಮಾಡುತ್ತಿದ್ದ ಎರಡು ಬಸ್

0

ಮಹಾರಾಷ್ಟ್ರ ರಾಜ್ಯದ ಬಾಂಬೆಯಿಂದ ಅಕ್ರಮವಾಗಿ ಮಧ್ಯ ಸಾಗಣೆ ಮಾಡುತ್ತಿದ್ದ ಎರಡು ಬಸ್’ಗಳನ್ನು ಮೂಡನಹಳ್ಳಿ ಗ್ರಾಮದ ಸಮೀಪ ಅಬಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
ಕಾವೇರಿ ಟ್ರಾವೆಲ್ಸ್ ಹಾಗೂ ಗಣೇಶ ಟ್ರಾವೆಲ್ಸ್ ನಲ್ಲಿ ಸಾವಿರಾರು ಬೆಲೆಬಾಳುವ ಮದ್ಯವನ್ನು ಬಾಂಬೆಯಿಂದ ಚನ್ನರಾಯಪಟ್ಟಣಕ್ಕೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಕಾವೇರಿ ಟ್ರಾವೆಲ್ಸ್ ಹಾಗೂ ಗಣೇಶ ಟ್ರಾವೆಲ್ಸ್ ಎರಡು ಬಸ್’ಗಳನ್ನು ನಗರ ಠಾಣೆಗೆ ಒಪ್ಪಿಸಲಾಗಿದೆ.


ಕಾವೇರಿ ಟ್ರಾವೆಲ್ಸ್ ನಲ್ಲಿ 10 ಫುಲ್ ಬಾಟಲ್ 12 ಆಫ್ ಬಾಟಲ್ ಗಣೇಶ ಟ್ರಾವೆಲ್ಸ್ ನಲ್ಲಿ ನಾಲ್ಕು ಲೀಟರ್ನ ಬಾಟಲಿಗಳು ಹಾಗೂ ಐದು ಕ್ವಾಟರ್ಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here