ಮಹಿಳಾ-ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಸಿದ್ಧ
ಗರ್ಭಿಣಿಯರಿಗೆ 30: ತಿಂಗಳೊಳಗಿನ ನವಜಾತ ಶಿಶುಗಳಿಗೆ 100 ಐಸಿಯೂ: ಇದು ರಾಜ್ಯದಲ್ಲೇ ಮೊದಲು

0

ಹಾಸನ: ರಾಜ್ಯದಲ್ಲೇ ಹಲವು ವಿಶೇಷತೆ ಜೊತೆಗೆ ಹೈಟೆಕ್ ಸೌಲಭ್ಯವುಳ್ಳ, ಎಲ್ಲಕ್ಕಿಂತ ಮಹಿಳೆಯರು-ಮಕ್ಕಳಿಗಳಿಗಾಗಿಯೇ ಮೀಸಲಾಗಿರುವ
ವಿನೂತನ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ, ಆರೈಕೆಗೆ ನಗರದಲ್ಲಿ ಪ್ರತ್ಯೇಕ ಆಸ್ಪತ್ರೆ ಸಿದ್ಧವಾಗಿದ್ದು, ಇದೇ 13 ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಹೌದು; ಒಟ್ಟು 117.91 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಐದು ಅಂತಸ್ತಿನ ಆಸ್ಪತ್ರೆಯಲ್ಲಿ ಬರೋಬ್ಬರಿ 450 ಬೆಡ್‌ಗಳಿರುವುದು ಗಮನಾರ್ಹ.
ಕಳೆದ 2017-18ನೇ ಸಾಲಿನಲ್ಲಿ ಆರಂಭವಾದ ಕಾಮಗಾರಿ, ನಿರಂತರ ಪ್ರಯತ್ನದ ಫಲವಾಗಿ ಇದೀಗ

ಜನಸೇವೆಗೆ ಅಣಿಯಾಗಿದೆ.
ಈ ಸೌಲಭ್ಯ ರಾಜ್ಯದಲ್ಲಿಯೇ ಮೊದಲು:
ಹಾಲಿ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ರೋಗಿಗಳಿಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ ದೂರದೃಷ್ಟಿಯಿಂದ 450 ಹಾಸಿಗೆಗಳ ದೊಡ್ಡ ಸಾಮರ್ಥ್ಯದ
ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ತುರ್ತು ಚಿಕಿತ್ಸೆಗೆ(ಎಮರ್ಜೆನ್ಸಿ) ಹೆಚ್ಚಿನ ಒತ್ತು ನೀಡಲು ಯೋಜಿಸಲಾಗಿದೆ.
ವಿಶೇಷ ಎಂದರೆ ಗರ್ಭಿಣಿಯರಿಗೆಂದೇ 30 ಬೆಡ್‌ನ ಐಸಿಯೂ ಇದೆ. ಜೊತೆಗೆ 1 ತಿಂಗಳ ಒಳಗಿನ ನವಜಾತ ಶಿಶುಗಳಿಗೆ 100 ಹಾಸಿಗೆಗಳ ಐಸಿಯೂ ಇದೆ. ಎರಡೂ ಐಸಿಯೂ ಪ್ರತ್ಯೇಕವಾಗಿರಲಿದ್ದು, ಇಲ್ಲಿ ಎಸಿ ಸೌಲಭ್ಯವೂ ಇದೆ. ಕಂದಮ್ಮಗಳ ಆರೈಕೆ-ಚಿಕಿತ್ಸೆಗೆ 100 ಹಾಸಿಗೆಗಳ ಐಸಿಯೂ ಇರುವುದು ಇಡೀ ರಾಜ್ಯದಲ್ಲಿ ಹಾಸನ ಆಸ್ಪತ್ರೆಯಲ್ಲೇ ಅತಿಹೆಚ್ಚು ಮತ್ತು ಪ್ರಥಮ ಎನ್ನಲಾಗಿದೆ.

ಹಲವು ರೀತಿಯ ಹೈಟೆಕ್ ಸೌಲಭ್ಯ:

ಈ ಆಸ್ಪತ್ರೆಯ ಪ್ರಮುಖ ಉದ್ದೇಶ ಮತ್ತು ಆಶಯ ತಾಯಿ-ಶಿಶುವಿನ ಮರಣ ಪ್ರಮಾಣ ದರ ಕಡಿಮೆ ಮಾಡುವುದು. ಇದಕ್ಕಾಗಿಯೇ ಅನೇಕ ರೀತಿಯ ಹೈಟೆಕ್ ಸೌಲಭ್ಯ ಇಲ್ಲಿವೆ. ಹೈಟೆಕ್ ಓಟಿ(ಲ್ಯಾಮಿನಾರ್ ಓಟಿ) ಸೌಲಭ್ಯ ಇಲ್ಲಿದೆ. ಇನ್‌ಫೆಕ್ಷನ್ ಆದಷ್ಟೂ ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ಮಾಡ್ಯುಲಾರ್ ಓಟಿ ವ್ಯವಸ್ಥೆ ಮಾಡಲಾಗಿದೆ. ಇದು ವೈದ್ಯಕೀಯ ಲೋಕದಲ್ಲಿ ಇತ್ತೀಚಿನ ಹೊಸ ವಿಧಾನ ಎಂದು ಹಿಮ್ಸ್ ನಿರ್ದೇಶಕರಾದ ಡಾ.ಬಿ.ಸಿ.ರವಿಕುಮಾರ್ ತಿಳಿಸಿದರು. ಹಾಗೆಯೇ ಲೇಬರ್ ರೂಂ.ಗಳೂ ಕೂಡ ಅತ್ಯಾಧುನಿಕ ಮತ್ತು ವಿಶಾಲವಾಗಿವೆ. ಒಟ್ಟಾರೆ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಏನೆಲ್ಲಾ ಸೌಲಭ್ಯ ಸಿಗಲಿವೆಯೋ, ಅವೆಲ್ಲವೂ ಅವೆಲ್ಲವೂ ಹೊಸ ಆಸ್ಪತ್ರೆಯಲ್ಲಿ ದೊರೆಯಲಿವೆ. ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ತೊಂದರೆ ಆಗದೆ ಎಲ್ಲಾ ರೀತಿಯ ಸೌಲಭ್ಯ ದೊರಕಿಸಿಕೊಡಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು.
ಒಟ್ಟಿನಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಮುಚ್ಛಯದಲ್ಲೇ ಮತ್ತೊಂದು ಹೊಸ ಆಸ್ಪತ್ರೆ

ಸೇವೆಗೆ ಅಣಿಯಾಗುತ್ತಿರುವುದು ಒಂದೇ ಆವರಣದಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಸಿಗಲು ಅನುಕೂಲವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೋಗಿಗಳ ಅಲೆದಾಟ ತಪ್ಪಲಿದೆ.

ಪ್ಯಾರಚೂಟ್ ಟ್ಯೂಬ್ ಸಿಸ್ಟಂನ್ನು ವಿನೂತನ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಈವರೆಗೆ ವಾರ್ಡ್ ಮತ್ತು ಓಪಿಡಿಗಳಿಂದ ವಿವಿಧ ಸ್ಯಾಂಪಲ್‌ಗಳನ್ನು ಸಿಬ್ಬಂದಿ ಮೂಲಕ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೆವು. ಇದರಿಂದ ರಿಸಲ್ಟ್ ತಡವಾಗುತ್ತಿತ್ತು ಮತ್ತು ಮ್ಯಾನ್‌ಪವರ್ ವ್ಯರ್ಥವಾಗುತ್ತಿತ್ತು. ಇದೀಗ ಯೋಜಿತ ರೀತಿಯಲ್ಲಿ ರಾಜ್ಯದ್ಲಲೇ ವಿಶೇಷ ಎನಿಸಿರುವ ಹೊಸ ವಿಧಾನದ ಯಂತ್ರ ಅಳವಡಿಸಲಾಗಿದೆ. ಇದರಿಂದ ಬೇರೆ ಬೇರೆ ವಿಭಾಗಗಳಿಂದ ಪರೀಕ್ಷೆಗೆ ಒಳಪಡುವ ಸ್ಯಾಂಪಲ್ಸ್ ನೇರವಾಗಿ ಪ್ರಯೋಗಾಲಯಗಳಿಗೆ ರವಾನೆಯಾಗಲಿದೆ.
-ಡಾ.ಬಿ.ಸಿ.ರವಿಕುಮಾರ್, ಹಿಮ್ಸ್ ನಿರ್ದೇಶಕ.

ಹಾಸನ ಕ್ಷೇತ್ರದಲ್ಲಿ ಪ್ರವಾಸಿ ಮಂದಿರದ ನೂತನ ಕಟ್ಟಡ, ಹೊಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ, ಟ್ರಾಫಿಕ್ ಸ್ಟೇಷನ್, ವಿದ್ಯಾರ್ಥಿ
ನಿಲಯಗಳು ಸೇರಿದಂತೆ ತಮ್ಮ ಅವಧಿಯಲ್ಲಿ ಆಗಿರುವ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಹಾಗೂ ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಮಾ.13 ರಂದು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸೇರಿದಂತೆ ಆಯಾ ಖಾತೆಗಳ
ಸಚಿವರು ಆಗಮಿಸಲಿದ್ದಾರೆ. ನನ್ನ ಕ್ಷೇತ್ರದ ಹಾಗೂ ಜಿಲ್ಲೆ ಮತ್ತು ಹೊರ ಜಿಲ್ಲೆಯ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಕ್ಕೆ ಜನತೆ ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು.
-ಪ್ರೀತಂ ಜೆ.ಗೌಡ, ಸ್ಥಳೀಯ ಶಾಸಕ

ಹಾಸನ: ರಾಜ್ಯದಲ್ಲೇ ಹಲವು ವಿಶೇಷತೆ ಜೊತೆಗೆ ಹೈಟೆಕ್ ಸೌಲಭ್ಯವುಳ್ಳ, ಎಲ್ಲಕ್ಕಿಂತ ಮಹಿಳೆಯರು-ಮಕ್ಕಳಿಗಳಿಗಾಗಿಯೇ ಮೀಸಲಾಗಿರುವ
ವಿನೂತನ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ, ಆರೈಕೆಗೆ ನಗರದಲ್ಲಿ ಪ್ರತ್ಯೇಕ ಆಸ್ಪತ್ರೆ ಸಿದ್ಧವಾಗಿದ್ದು, ಇದೇ 13 ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಹೌದು; ಒಟ್ಟು 117.91 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಐದು ಅಂತಸ್ತಿನ ಆಸ್ಪತ್ರೆಯಲ್ಲಿ ಬರೋಬ್ಬರಿ 450 ಬೆಡ್‌ಗಳಿರುವುದು ಗಮನಾರ್ಹ.

ಕಳೆದ 2017-18ನೇ ಸಾಲಿನಲ್ಲಿ ಆರಂಭವಾದ ಕಾಮಗಾರಿ, ಜಿಲ್ಲೆಯ ನಾಯಕರ ಮುತುವರ್ಜಿ ಹಾಗೂ ನಿರಂತರ ಪ್ರಯತ್ನದ ಫಲವಾಗಿ ಇದೀಗ ಜನಸೇವೆಗೆ ಅಣಿಯಾಗಿದೆ.

ಈ ಸೌಲಭ್ಯ ರಾಜ್ಯದಲ್ಲಿಯೇ ಮೊದಲು:

ಹಾಲಿ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ರೋಗಿಗಳಿಗೆ ಸಾಕಾಗುತ್ತಿರಲಿಲ್ಲ. ಹಾಗಾಗಿ ದೂರದೃಷ್ಟಿಯಿಂದ 450 ಹಾಸಿಗೆಗಳ ದೊಡ್ಡ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ತುರ್ತು ಚಿಕಿತ್ಸೆಗೆ(ಎಮರ್ಜೆನ್ಸಿ) ಹೆಚ್ಚಿನ ಒತ್ತು ನೀಡಲು ಯೋಜಿಸಲಾಗಿದೆ.
ವಿಶೇಷ ಎಂದರೆ ಗರ್ಭಿಣಿಯರಿಗೆಂದೇ 30 ಬೆಡ್‌ನ ಐಸಿಯೂ ಇದೆ. ಜೊತೆಗೆ 1 ತಿಂಗಳ ಒಳಗಿನ ನವಜಾತ ಶಿಶುಗಳಿಗೆ 100 ಹಾಸಿಗೆಗಳ ಐಸಿಯೂ ಇದೆ. ಎರಡೂ ಐಸಿಯೂ ಪ್ರತ್ಯೇಕವಾಗಿರಲಿದ್ದು, ಇಲ್ಲಿ ಎಸಿ ಸೌಲಭ್ಯವೂ ಇದೆ. ಕಂದಮ್ಮಗಳ ಆರೈಕೆ-ಚಿಕಿತ್ಸೆಗೆ 100 ಹಾಸಿಗೆಗಳ ಐಸಿಯೂ ಇರುವುದು ಇಡೀ ರಾಜ್ಯದಲ್ಲಿ ಹಾಸನ ಆಸ್ಪತ್ರೆಯಲ್ಲೇ ಅತಿಹೆಚ್ಚು ಮತ್ತು ಪ್ರಥಮ ಎನ್ನಲಾಗಿದೆ.

ಹಲವು ರೀತಿಯ ಹೈಟೆಕ್ ಸೌಲಭ್ಯ: ಈ ಆಸ್ಪತ್ರೆಯ ಪ್ರಮುಖ ಉದ್ದೇಶ ಮತ್ತು ಆಶಯ ತಾಯಿ-ಶಿಶುವಿನ ಮರಣ ಪ್ರಮಾಣ ದರ ಕಡಿಮೆ ಮಾಡುವುದು. ಇದಕ್ಕಾಗಿಯೇ ಅನೇಕ ರೀತಿಯ ಹೈಟೆಕ್ ಸೌಲಭ್ಯ ಇಲ್ಲಿವೆ. ಹೈಟೆಕ್ ಓಟಿ(ಲ್ಯಾಮಿನಾರ್ ಓಟಿ) ಸೌಲಭ್ಯ ಇಲ್ಲಿದೆ. ಇನ್‌ಫೆಕ್ಷನ್ ಆದಷ್ಟೂ ಕಡಿಮೆಯಾಗಬೇಕು ಎಂಬ ಉದ್ದೇಶದಿಂದ ಮಾಡ್ಯುಲಾರ್ ಓಟಿ ವ್ಯವಸ್ಥೆ ಮಾಡಲಾಗಿದೆ. ಇದು ವೈದ್ಯಕೀಯ ಲೋಕದಲ್ಲಿ ಇತ್ತೀಚಿನ ಹೊಸ ವಿಧಾನ ಎಂದು ಹಿಮ್ಸ್ ನಿರ್ದೇಶಕರಾದ ಡಾ.ಬಿ.ಸಿ.ರವಿಕುಮಾರ್ ತಿಳಿಸಿದರು. ಹಾಗೆಯೇ ಲೇಬರ್ ರೂಂ.ಗಳೂ ಕೂಡ ಅತ್ಯಾಧುನಿಕ ಮತ್ತು ವಿಶಾಲವಾಗಿವೆ. ಒಟ್ಟಾರೆ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಏನೆಲ್ಲಾ ಸೌಲಭ್ಯ ಸಿಗಲಿವೆಯೋ, ಅವೆಲ್ಲವೂ ಅವೆಲ್ಲವೂ ಹೊಸ ಆಸ್ಪತ್ರೆಯಲ್ಲಿ ದೊರೆಯಲಿವೆ. ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ತೊಂದರೆ ಆಗದೆ ಎಲ್ಲಾ ರೀತಿಯ ಸೌಲಭ್ಯ ದೊರಕಿಸಿಕೊಡಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು.

ಒಟ್ಟಿನಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಮುಚ್ಛಯದಲ್ಲೇ ಮತ್ತೊಂದು ಹೊಸ ಆಸ್ಪತ್ರೆ ಸೇವೆಗೆ ಅಣಿಯಾಗುತ್ತಿರುವುದು ಒಂದೇ ಆವರಣದಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಸಿಗಲು ಅನುಕೂಲವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೋಗಿಗಳ ಅಲೆದಾಟ ತಪ್ಪಲಿದೆ.

ಪ್ಯಾರಚೂಟ್ ಟ್ಯೂಬ್ ಸಿಸ್ಟಂನ್ನು ವಿನೂತನ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಈವರೆಗೆ ವಾರ್ಡ್ ಮತ್ತು ಓಪಿಡಿಗಳಿಂದ ವಿವಿಧ ಸ್ಯಾಂಪಲ್‌ಗಳನ್ನು ಸಿಬ್ಬಂದಿ ಮೂಲಕ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೆವು. ಇದರಿಂದ ರಿಸಲ್ಟ್ ತಡವಾಗುತ್ತಿತ್ತು ಮತ್ತು ಮ್ಯಾನ್‌ಪವರ್ ವ್ಯರ್ಥವಾಗುತ್ತಿತ್ತು. ಇದೀಗ ಯೋಜಿತ ರೀತಿಯಲ್ಲಿ ರಾಜ್ಯದ್ಲಲೇ ವಿಶೇಷ ಎನಿಸಿರುವ ಹೊಸ ವಿಧಾನದ ಯಂತ್ರ ಅಳವಡಿಸಲಾಗಿದೆ. ಇದರಿಂದ ಬೇರೆ ಬೇರೆ ವಿಭಾಗಗಳಿಂದ ಪರೀಕ್ಷೆಗೆ ಒಳಪಡುವ ಸ್ಯಾಂಪಲ್ಸ್ ನೇರವಾಗಿ ಪ್ರಯೋಗಾಲಯಗಳಿಗೆ ರವಾನೆಯಾಗಲಿದೆ.
-ಡಾ.ಬಿ.ಸಿ.ರವಿಕುಮಾರ್, ಹಿಮ್ಸ್ ನಿರ್ದೇಶಕ.

LEAVE A REPLY

Please enter your comment!
Please enter your name here