ಹಾಸನ : ಯೂನಿಯನ್ ಬ್ಯಾಂಕ್ ನೌಕರನಿಂದ 40 ಲಕ್ಷ ರೂ ವಂಚನೆ , 40 ಗ್ರಾಹಕರಿಗೆ ಒಟ್ಟು 40 ಲಕ್ಷ ರೂ ವಂಚನೆ ಮಾಡಿರುವ ಬ್ಯಾಂಕ್‌ನ ಹೊರಗುತ್ತಿಗೆ ನೌಕರ , ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಆನೆಕೆರೆ ಗ್ರಾಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಘಟನೆ, ಹೊರಗುತ್ತಿಗೆ ಆಧಾರ ಮೇಲೆ ಬಿಸಿನೆಸ್ ಕರೆಸ್ಪಾಂಡೆನ್ಸ್ (ಬಿಸಿ) ಆಗಿ ಕೆಲಸ ಮಾಡಿಕೊಂಡಿದ್ದ, ಎಂ.ಟಿ.ಜಯರಾಂ.ದಂಡಿಗನಹಳ್ಳಿ ಹೋಬಳಿಯ ಮಾಳೇನಹಳ್ಳಿ ಗ್ರಾಮದ ವಾಸಿ, ಆನೆಕೆರೆ ಗ್ರಾಮದ ಕಾಳಪ್ಪ ಎಂಬುವವರು ತಮ್ಮ ಉಳಿತಾಯ ಖಾತೆಯ ಪುಸ್ತಕವನ್ನು ಎಂಟ್ರಿ ಮಾಡಿಸಿದಾಗ ಡ್ರಾ ಆಗಿದ್ದ 50 ಸಾವಿರ ರೂ ಹಣ.
ಕೂಡಲೇ ಉಳಿತಾಯ ಖಾತೆಯ ಸ್ಟೇಟ್‌ಮೆಂಟ್ ರೆಫೆರೆನ್ಸ್ ನಂಬರ್ ಪರಿಶೀಲಿಸಿದಾಗ ಬಿಸಿನೆಸ್ ಕರೆಸ್ಪಾಂಡೆನ್ಸ್ ಡಿವೈಎಸ್‌ನಿಂದ ಡ್ರಾ ಮಾಡಿರುವುದು ಬೆಳಕಿಗೆ. ಎಲ್ಲರ ಖಾತೆಗಳನ್ನು ಪರಿಶೀಲಿಸಿದಾಗ 40 ಜನ ಬ್ಯಾಂಕ್ ಗ್ರಾಹಕರಿಗೆ ವಂಚನೆ ಮಾಡಿರುವುದು ಪತ್ತೆ, ನಲವತ್ತು ಜನರಿಗೆ ಒಟ್ಟು 40 ಲಕ್ಷ ರೂ ವಂಚಿಸಿರುವ ಎಂ.ಟಿ.ಜಯರಾಂ, ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು