ರಾಷ್ಟ್ರೀಯ ಮತದಾರರ ದಿನಾಚರಣೆ: ಸ್ಪರ್ಧೆ ಏರ್ಪಡಿಸಲು ಸೂಚನೆ

0

ರಾಷ್ಟ್ರೀಯ ಮತದಾನ ದಿವಸದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನೇರವಾಗಿ ಹಾಗೂ ಆನ್‍ಲೈನ್ ಮೂಲಕ ನಡೆಸುವ ಕುರಿತು ರಾಜ್ಯ ಚುನಾವಣಾ ಆಯೋಗದ ಅಪರ ಚುನಾವಣಾ ಆಯುಕ್ತರಾದ ಅಜಯ್ ನಾಗಭೂಷಣ್ ಹಾಗೂ ರಾಜ್ಯ ನೋಡಲ್ ಅಧಿಕಾರಿಗಳಾದ (ಸ್ವೀಪ್) ಪಿ.ಎಸ್. ವಸ್ತ್ರದ್ ಅವರು ಎಲ್ಲಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಮತದಾರರ ಜಾಗೃತಿ ಚಟುವಟಿಕೆಗಳಲ್ಲಿ ಶಾಲಾ, ಕಾಲೇಜು ಹಂತದ ಚುನಾವಣಾ ಶಿಕ್ಷಣ ಕ್ಲಬ್‍ಗಳು ಪರಿಣಾಮಕಾರಿಯಾಗಿವೆ. ಕೋವಿಡ್-19 ಹಿನ್ನಲೆಯಲ್ಲಿ ತರಗತಿಗಳು ಇಲ್ಲಿವರೆಗೆ ಪ್ರಾರಂಭವಾಗಿರಲ್ಲಿಲ್ಲ, ಈಗ ಲಭ್ಯವಿರುವ ಎಲ್ಲಾ ರೀತಿಯ ನವಮಾಧ್ಯಮಗಳ, ತಂತ್ರಜ್ಞಾನಗಳ ಮೂಲಕವೂ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣ ನೀಡುವುದು ಅಗತ್ಯವಿದೆ ಎಂದು ಅಜಯ್ ನಾಗಭೂಷಣ್ ಮತ್ತು ಪಿ.ಎಸ್. ವಸ್ತ್ರದ್ ಅವರು ತಿಳಿಸಿದರು.
ಶಾಲೆ, ಪದವಿ ಪೂರ್ವ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜುಗಳು, ಪದವಿ ಸ್ನಾತಕೋತ್ತರ, ಪದವಿ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ವಿವಿಧ ಹಂತದಲ್ಲಿ ಪ್ರಬಂಧ ಸ್ವರ್ಧೆ, ಭಿತ್ತಿಪತ್ರ, ಕೊಲಾಜ್ ಮತ್ತು ರಸ ಪ್ರಶ್ನೆ ಸ್ಪರ್ಧೆ ಏರ್ಪಡಿಸುವಂತೆ ಅವರು ಸೂಚಿಸಿದರು.
ಕೋವಿಡ್-19 ಸಂದರ್ಭದಲ್ಲಿ ಆನ್‍ಲೈನ್ ಮೂಲಕ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಡೆಸುವ ಅಗತ್ಯ ಹಾಗೂ ಸ್ವರೂಪ, ಆನ್‍ಲೈನ್ ಮೂಲಕ ಪ್ರಬಂಧ ಸ್ವರ್ಧೆ, ಪೋಸ್ಟರ್ ತಯಾರಿಕೆ , ಕೊಲಾಜ್ ತಯಾರಿಕೆ ಮತ್ತು ರಸಪ್ರಶ್ನೆ, ಸ್ಪರ್ಧೆ ಏರ್ಪಡಿಸುವುದು ಮತ್ತಿತರ ಚಟುವಟಿಕೆಗಳನ್ನು ನಡೆಸುವಂತೆ ಅವರು ಸೂಚಿಸಿದರು.
18 ವರ್ಷ ತುಂಬಿದ ಯುವಕರನ್ನು, ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ನೋಟಾ ಅವಕಾಶ ಬಳಕೆಯ ವಿಧಾನ, ವಿಲಕಚೇತನ ಮತದಾರರಿಗೆ ಇರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕೋವಿಡ್-19 ಹಿನ್ನಲೆಯಲ್ಲಿ 2020-21ನೇ ಸಾಲಿನ ಮತದಾರರ ಸಾಕ್ಷರತಾ ಸಂಘಗಳ ಚಟುವಟಿಕೆಗಳು. ಮತದಾರ ಸಂಘಗಳ ಮೂಲಕ ನೂತನ ಮತದಾರರ ನೋಂದಣಿ ಪ್ರಕ್ರಿಯೆ ಕುರಿತು ಸೂಚನೆಗಳುನ್ನು ನೀಡಿದರು,
ರಾಜ್ಯಮಟ್ಟದ ತರಬೇತುದಾರರು ಈ ವರ್ಷದ ಮತದಾರರ ಸಂಘಗಳ ಚಟುವಟಿಕೆಗಳ ಮತ್ತು ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಆನ್‍ಲೈನ್ ಮೂಲಕ ನಡೆಯುತ್ತಿರುವ ಮತದಾರರ ಸಂಘಗಳ ಚಟುವಟಿಕೆಗಳ ವಿವರಣೆ ನೀಡಿದರು.
ಚಟುವಟಿಕೆಗಳು ಮತ್ತು ಸ್ಪರ್ಧೆಗಳ ಹಿಮ್ಮಾಹಿತಿ ಮತ್ತು ದಾಖಲೀಕರಣ ಗೂಗಲ್ ಸ್ಪ್ರೆಡ್‍ಶೀಟ್‍ನಲ್ಲಿ ಕಾಯಕ್ರಮಗಳ ಹಾಗೂ ವಿಜೇತರಾದವರ ವಿವರಗಳನ್ನು ಅಪ್‍ಡೇಟ್ ಮಾಡುವ ಕುರಿತು ಮಾಹಿತಿ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಹಾಸನ ಜಿಲ್ಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲು ಮಾಡಿಕೊಂಡಿರುವ ಸಿದ್ದತೆಗಳ ಬಗ್ಗೆ ವಿವರ ನೀಡಿ ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here