ರೋಟರಿ ಕ್ಲಬ್ ಆಫ್ ಹಾಸನ್ ರೋಯಲ್ಸ್ ವತಿಯಿಂದ ಬಂದಿನಿವಾಸಿಗಳಿಗೆ ಆರೋಗ್ಯ ಬಾಗ್ಯ ಕಾರ್ಯಕ್ರಮ

0

ಜಿಲ್ಲಾ ಕೇಂದ್ರ ಕಾರ ಗೃಹದಲ್ಲಿ ನಡೆದ ಆರೋಗ್ಯ ಭಾಗ್ಯ ಕಾರ್ಯಕ್ರಮದಲ್ಲಿ ರೋಟರಿ ರಾಯಲ್ ಸಂಸ್ಥೆ ವತಿಯಿಂದ ಬಂದಿ ನಿವಾಸಿಗಳಿಗೆ ಆರೋಗ್ಯದ ಮಹತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಮನೋರೋಗ ತಜ್ಞರಾದ ಡಾಕ್ಟರ್ ಸಂತೋಷ ಅವರು ಭಾಗವಹಿಸಿದ್ದರು .

ಅವರು ಹಲವಾರು ತಪ್ಪುಗಳನ್ನು ಮಾಡಿ ಬಂದಿಯಾಗಿರುವ ಬಂದಿವಾಸಿಗಳಿಗೆ ಆಗುವ ಒತ್ತಡ ಮತ್ತು ಅದರಿಂದ ಒರಬರುವ ಬಗೆಯನ್ನು ವಿವರಿಸಿದರು ಹಾಗೂ ಕೆಲವು ಬಂದಿವಾಸಿಗಳ ಜೊತೆ ಆಪ್ತ ಸಮಾಲೋಚನೆ ಮಾಡಿ ಸಲಹೆ ಸೂಚನೆ ನೀಡಿದರು ಸಮಾರಂಭದಲ್ಲಿ ನ್ಯಾಯಾಧೀಶರಾದ ಬಸವರಾಜ ರವರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಉತ್ತಮಜೀವನ ನೆಡೆಸಿ ಎಂದು ಬಂದಿವಾಸಿಗಳಿಗೆ ತಿಳಿಸಿದರು.

ಜಿಲ್ಲಾ ಕೇಂದ್ರ ಕಾರಾಗೃಹದ ಅಧಿಕಾರಿ ಓಂಬೈಶಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ರಾಯಲ್ ಸಂಸ್ಥೆಯ ಅಧ್ಯಕ್ಷರಾದ ರೋಟೇರಿಯನ್ ಯೋಗಿಶ್ ಅವರು ಕಾರ್ಯದರ್ಶಿ ರೋಟೇರಿಯನ್ ವಿಕ್ರಮ್ ರವರು ಹಾಗೂ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಸಮಾರಂಭವನ್ನು ರೋಟೇರಿಯನ್ ಹಾಗೂ ವಕೀಲರು ಆದ ಮನು ಎಸ್‌ಆರ್‌ ಅವರು ನಡೆಸಿಕೊಟ್ಟರು. ಹಲವು ಬಂದಿ ನಿವಾಸಿಗಳಿಗೆ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಹಿರಿಯ ವೈದ್ಯರಾದ ಹಾಗೂ ರೋಟರಿಯ ಹಿರಿಯ ಸದಸ್ಯರಾದ ಡಾಕ್ಟರ್ ಲೋಹಿತ್ ಹಾಗೂ ಅವರ ಸಿಬ್ಬಂದಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ನೆಡೆಸಲಾಯಿತು.

LEAVE A REPLY

Please enter your comment!
Please enter your name here