ಶಾರದ ಕಲಾಸಂಘದಿಂದ ಮನರಂಜಿಸಿದ ನಾಟಕ ಸುಗಮ ಸಂಗೀತ ಜಾನಪದ ಕಾರ್ಯಕ್ರಮ

0

ಹಾಸನದ ವಿಜಯನಗರ ಬಡಾವಣೆಯ ಶ್ರೀ ಶಾರದಾ ಕಲಾಸಂಘದ 11ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನಕದಾಸ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಾಸನ ಶಾರದಾ ಕಲಾಸಂಘ ಇವರ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ವೈವಿಧ್ಯ ಸಾಂಸ್ಕøತಿಕ ಕಾರ್ಯಕ್ರಮವು ಹೆಚ್.ಜಿ.ಗಂಗಾಧರ್, ಅಧ್ಯಕ್ಷರು ಇವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯಿತು.

ಹಾಸನ ಕ್ಷೇತ್ರದ ಶಾಸಕರು ಪ್ರೀತಮ್ ಜೆ.ಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಹಿತಿ ಗೊರೂರು ಅನಂತರಾಜು ಅವರ ಹಾಸನ ತಾಲ್ಲೂಕು ಸಾಂಸ್ಕøತಿಕ ಅವಲೋಕನ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ ಸಾಹಿತ್ಯದ ಓದು ಜ್ಞಾನರ್ಜನೆಯನ್ನು, ಸಂಗೀತ ಮನಸ್ಸಿಗೆ ಖುಷಿ ಶಾಂತಿಯನ್ನು ನೀಡುತ್ತದೆ. ಕರೋನಾ ಕಾರಣದಿಂದ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ಧಕ್ಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿದರೆ ಕಲಾಪ್ರದರ್ಶನಕ್ಕೆ ಅವಕಾಶಗಳಿರುತ್ತವೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಸಹಾಯಕ ನಿರ್ದೇಶಕರು ಡಾ. ಎಂ.ಡಿ.ಸುದರ್ಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇಲಾಖಾ ವತಿಯಿಂದ ವಿಶೇಷ ಘಟಕ ಯೋಜನೆ, ಗಿರಿಜನ ಯೋಜನೆಯಡಿ ಹಾಗೂ ಸಾಮಾನ್ಯ ಯೋಜನೆ, ಹಾಗೂ ನೋಂದಾಯಿತ ಸಂಘ ಸಂಸ್ಥೆಗಳಿಗೆ ಅನುದಾನವನ್ನು ಇಲಾಖೆ ನೀಡಿ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿದೆ ಎಂದರು.
ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಕೆ.ಸಿದ್ದೇಗೌಡರು, ಮಣಿಚನಹಳ್ಳಿ ಗ್ರಾ.ಮಂ.ಅಧ್ಯಕ್ಷರು ಸುಮಿತ್ರ ಹೇಮಂತ್‍ಕುಮಾರ್, ಗ್ರಾ.ಪಂ.ಸದಸ್ಯರುಗಳಾದ ಲೋಹಿತ್ (ಜೀವನ್), ಸುಮಿತ್ರ ಬ್ಯಾಟಾಚಾರ್, ಹಾಸನ ಛಲವಾದಿ ಮಹಾಸಭಾ ಅಧ್ಯಕ್ಷರು ಹೆಚ್.ಪಿ. ಪುಟ್ಟರಾಜು, ಚಲನಚಿತ್ರ ನಟ ಮೈಸೂರು ರಮಾನಂದ್, ರಂಗ ನಿರ್ದೇಶಕ ಎ.ಸಿ.ರಾಜು, ಶಾರದಾ ಕಲಾಸಂಘದ ಅಧ್ಯಕ್ಷರು ಹೆಚ್.ಜಿ.ಗಂಗಾಧರ್, ಸಾಹಿತಿ ಗೊರೂರು ಅನಂತರಾಜು, ಪರಿಸರ ಪ್ರೇಮಿ ಅನುಗನಾಳು ಕೃಷ್ಣಮೂರ್ತಿ, ತಹಸೀಲ್ದಾರ್ ಮಂಜುನಾಥ್, ಮಾಜಿ ಕ.ಸಾ.ಪ. ಹಾಸನ ತಾ. ಅಧ್ಯಕ್ಷ ಗಂಜಲಗೂಡು ಗೋಪಾಲ್ ಮೊದಲಾದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಬೆಂಗಳೂರಿನ ಹೆಜ್ಜೆ ಗೆಜ್ಜೆ ರಂಗತಂಡದವರು ಸಾಮಾಜಿಕ ಕಳಕಳಿಯ ಸಾರಾಯಿ ಸಂಕಟ ಸಾಮಾಜಿಕ ನಾಟಕ ಪ್ರದರ್ಶಿಸಿದರು. ಎ.ಸಿ.ರಾಜು ತಂಡದವರು ರಂಗಗೀತೆ, ಹೆಚ್.ಜಿ.ಗಂಗಾಧರ್ ತಂಡದವರು ಸುಗಮ ಸಂಗೀತ, ದುದ್ದ ಯೋಗೇಂದ್ರ ತಂಡ ತತ್ವಪದ, ಹಾಸನಾಂಬ ಕಲಾಸಂಘ ತಂಡ ಜಾನಪದ ನೃತ್ಯ, ಹೇಮಂತ್‍ಕುಮಾರ್ ಮತ್ತು ಮಂಜುನಾಥ್ ತಂಡ ರಾಜವಿಕ್ರಮ ಪೌರಾಣಿ ನಾಟಕ ದೃಶ್ಯಾವಳಿ, ಜಿ.ಎಸ್.ಕಲಾವತಿ ಮಧುಸೂದನ್‍ರವರಿಂದ ಕನಕದಾಸರ ಕೀರ್ತನೆ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ಮನರಂಜನೆ ನೀಡಿದವು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here