ಶಾಸಕರಾಗಿ ಇರಲು ಅವರಿಗೆ ಅರ್ಹತೆ ಇಲ್ಲ ‘ – ಶಾಸಕ ಸಿ.ಎನ್‌‌.ಬಾಲಕೃಷ್ಣ ಅವರ ಮೇಲೆ ಮಾಜಿ ಎಂ.ಎಲ್.ಸಿ. ಎಂ.ಗೋಪಾಲಸ್ವಾಮಿ

0

ಚನ್ನರಾಯಪಟ್ಟಣ: ತಾಲೂಕಿನ ಸಹಕಾರಿ ವ್ಯವಸ್ಥೆಯು ತುಂಬಾ ಹದಗೆಟ್ಟಿದೆ ಇದಕ್ಕೆಲ್ಲ ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣರವರೇ ನೇರ ಹೊಣೆಗಾರರು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಆರೋಪಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿ ಮಾಳೇನಹಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನಾ ಕಾರ್ಯಕ್ರಮ ಮತ್ತು ಕಾಂಗ್ರೆಸ್ ಸರ್ಕಾರದ ನೂರು ದಿನ ಪೂರೈಸಿ ನುಡಿದಂತೆ ನಡೆದಿರುವ ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕುರಿತು ಮಾತನಾಡಿ ತಾಲೂಕಿನ ಸಹಕಾರಿ ವ್ಯವಸ್ಥೆಯು ತುಂಬಾ ಹದಗೆಟ್ಟಿದೆ ಇದಕ್ಕೆಲ್ಲ ಸ್ಥಳೀಯ ಶಾಸಕ ಸಿ.ಎನ್ ಬಾಲಕೃಷ್ಣರವರೇ ನೇರ ಹೊಣೆಗಾರರು ಏಕೆಂದರೆ ಎಲ್ಲಾ ಸಹಕಾರಿ ಇಲಾಖೆಯ ಕಾರ್ಯದರ್ಶಿಗಳಿಂದ ಹಿಡಿದು ಡಿ ಗ್ರೂಪ್ ನೌಕರರವರೆಗೆ ಶಾಸಕರು ಹೇಳಿದ ಹಾಗೆ ಕೇಳಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ

ಶಾಸಕ ಬಾಲಕೃಷ್ಣ ರವರ ಮಾತು ಎಂದಿಗೂ ತಪ್ಪದಂತೆ ಹಾಗೂ ಅವರು ಹಾಕಿರುವ ಗೆರೆಯನ್ನು ಎಂದಿಗೂ ದಾಟದಂತೆ ಎಲ್ಲಾ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ ಕೂಡಲೇ ಸಹಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನಿಲ್ಲಿಸಬೇಕು ಇಲ್ಲದೆ ಹೋದಲ್ಲಿ ಮುಂದೊಂದು ದಿನ ಇಂತಹ ಅಧಿಕಾರಿಗಳಿಗೆ ತಕ್ಕ ಪಾಠವನ್ನು ಕಲಿಸಲಾಗುವುದು, ಅದೇ ರೀತಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಗ್ರಾಮಗಳಿಗೆ ತೆರಳಿ ಪಡಿತರವನ್ನು ವಿತರಿಸಲು ಹತ್ತು ರೂಪಾಯಿ ಹಣವನ್ನು ನೀಡುವಂತೆ ಸಾರ್ವಜನಿಕರಿಗೆ ತಿಳಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಶಾಸಕರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ಮನಗಣಬೇಕು

ನ್ಯಾಯ ಬೆಲೆ ಅಂಗಡಿಗಳ ಮೂಲಕ ಹಣ ವಸೂಲಿ ಮಾಡುತ್ತಿರುವುದು ಮತ್ತು ಪ್ರತಿ ಕಾಡುದಾರರಿಂದ ಒಂದು ಕೆಜಿ ಅಕ್ಕಿಯನ್ನು ವಸೂಲಿ ಮಾಡುತ್ತಿರುವುದನ್ನು ನೋಡಿದರೆ ಇದರಲ್ಲಿ ಶಾಸಕರ ಪಾತ್ರ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ,ಆದ್ದರಿಂದ ಪಡಿತರ ಚೀಟಿದಾರರು ಯಾವುದೇ ಕಾರಣಕ್ಕೂ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಒಂದು ಕೆಜಿ ಅಕ್ಕಿನಾಗಲಿ ಅಥವಾ ಹತ್ತು ರೂಪಾಯಿ ಹಣವನ್ನಾಗಲಿ ನೀಡಬೇಡಿ ,ಹಾಗೇನಾದರೂ ಅಕ್ಕಿಯನ್ನು ಹಿಡಿದುಕೊಂಡರೆ ಮತ್ತು ಹಣವನ್ನು ಕೇಳಿದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಸಾರ್ವಜನಿಕರಿಗೆ ಸಲಹೆ ನೀಡಿದರು, ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಕೆ ಮಂಜೇಗೌಡ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ ಶಂಕರ್. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ಯುವರಾಜ್ ಮಕಾನ್ ವಿನೋದ್ ,ಗ್ರಾಮ ಪಂಚಾಯತಿ ಸದಸ್ಯ ಎಂ ಎಲ್.ಹರೀಶ್ ಇನ್ನು ಮುಂತಾದವರ ಹಾಜರಿದ್ದರು

LEAVE A REPLY

Please enter your comment!
Please enter your name here