ಸಕಲೇಶಪುರ ತಾಲ್ಲೂಕಿನ ಆಜಾದ್ ರಸ್ತೆಯಲ್ಲಿರುವ ಮೀನು ಮಾರುಕಟ್ಟೆಯನ್ನು ಪುರಸಭೆ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ

0

ಪುರಸಭೆ ಮಳಿಗೆಯನ್ನು ಹಲವಾರು ವರ್ಷಗಳಿಂದ ನವೀಕರಣ ಮಾಡುವುದಕ್ಕು ಬಿಡದೆ ತನ್ನ ಕಬ್ಜದಲ್ಲಿ ಇಟ್ಟು ಕೊಂಡಿದ್ದರು ಎನ್ನಲಾದ ಪ್ರಕರಣ ; ಮೀನು ಮಾರುಕಟ್ಟೆ ಯನ್ನು ಪುರಸಭೆ ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ

ಹಾಸನ : ದಿನಾಂಕ 25.08.2023 ರಂದು, ಪಟ್ಟಣದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಮಾಡಿದರು.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಆಜಾದ್ ರಸ್ತೆಯಲ್ಲಿರುವ ಪುರಸಭೆ ಮಳಿಗೆಯನ್ನು ಹಲವಾರು ವರ್ಷಗಳಿಂದ ನವೀಕರಣ ಮಾಡುವುದಕ್ಕು ಬಿಡದೆ ತನ್ನ ಕಬ್ಜದಲ್ಲಿ ಇಟ್ಟು ಕೊಂಡಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿ, ಕೋರ್ಟನಲ್ಲು ಕೇಸ್ ಪುರಸಭೆಯ ಪರವಾಗಿ ಆಗಿತ್ತು. ಆದರೂ ಖಾಸಗಿ ವ್ಯಕ್ತಿ ಇದನ್ನು ಅತಿಕ್ರಮಣ ಮಾಡಿಕೊಂಡಿದ್ದರು. ಇದರ ನವೀಕರಣಕ್ಕು, ಟೆಂಡರ್ ಆಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಲು ಸ್ಥಳಕ್ಕೆ ಬಂದಾಗಲೆಲ್ಲ ಇವರು ವಿರೋಧ ವ್ಯಕ್ತ ಪಡಿಸುತಿದ್ದರು ಎಂದು ತಿಳಿದು ಬಂದಿದೆ.

ಕೊನೆಗು ಪುರಸಭೆ ಅಧಿಕಾರಿಗಳು, ಸದರಿ ಮಳಿಗೆಯನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.ಇಂಜಿನಿಯರ್ ಕವಿತ, ಆರೋಗ್ಯ ನಿರೀಕ್ಷಕರಾದ ಧಾನವೇಂದ್ರ, ಆರೋಗ್ಯ ಶಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಇದ್ದರು.

LEAVE A REPLY

Please enter your comment!
Please enter your name here