ಸಕಲೇಶಪುರ : ತಾಲೂಕಿನ ಇಬ್ಬಡಿ ಸುಳ್ಳಕ್ಕಿ ವೃತ್ತದ ಬಳಿ ಇಂದು ಬೆಳಿಗ್ಗೆ ಟಾಟಾ ಎಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಸಹಳ್ಳಿ ಗ್ರಾಮದ ಜಗದೀಶ್ (45) ಮೃತಪಟ್ಟ ದುರ್ದೈವಿಯಾಗಿದ್ದಾರೆ.ಮೃತ ಜಗದೀಶ್ ಮತ್ತು ಪುತ್ರ ಪ್ರೀತಮ್ ಬೈಕಿನಲ್ಲಿ ಸಕಲೇಶಪುರ ಕಡೆಯಿಂದ ಮನೆಗೆ ಹಿಂದಿರುಗುವಾಗ ಎದುರುಗಡೆಯಿಂದ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಜಗದೀಶ್ ಸ್ಥಳದಲ್ಲಿ ಮೃತಪಟ್ಟಿದ್ದು ಪುತ್ರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.