ಜಿಲ್ಲೆಯಲ್ಲಿ ಮಂಜೂರಾಗಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಮುಕ್ತಾಯಗೊಳಿಸಿ, ಈವರೆಗೆ ಇಲಾಖಾವಾರು ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆದು ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ. ಗೋಪಾಲಯ್ಯ ರವರು ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್19 ಹಿನ್ನಲೆಯಲ್ಲಿ ಈವರೆಗೆ ಅಭಿವೃದ್ಧಿ ಚಟುವಟಿಕೆಗಳು ವಿಳಂಬವಾಗಿದ್ದವು ಆದರೆ ಇನ್ನು ಮುಂದೆ ಎಲ್ಲಾ ಇಲಾಖೆ ಕಾರ್ಯನುಷ್ಠಾನ ತ್ವರಿತವಾಗಿ ನಡೆಸಬೇಕು ಎಂದರು.
ಇಲಾಖಾವಾರು ಪ್ರಗತಿ ಮಾಹಿತಿ ಪಡೆದ ಸಚಿವರು ಮುಂದಿನ ಮೂರು ತಿಂಗಳಲ್ಲಿ ಶೇ. 100 ರಷ್ಟು ಆರ್ಥಿಕ ಹಾಗೂ Àಭೌತಿüಕ ಗುರಿ ಸಾಧನೆಯಾಗಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಹೆಚ್, ಹೆಚ್,ಡಿ ರೇವಣ್ಣ, ಹೆಚ್.ಕೆ ಕುಮಾರಸ್ವಾಮಿ ಸಿ.ಎನ್ ಬಾಲಕೃಷ್ಣ ಕೆ.ಎಸ್ ಲಿಂಗೇಶ್ ಹಾಗೂ ಪ್ರೀತಂಗೌಡ ಅವರು ಬೆಳೆಪರಿಹಾರ ಹಾಗೂ ಕೃಷಿ ಮತ್ತು ತೋಟಗಾರಿಕಾ ಬೆಳೆಹಾನಿ ಮತ್ತು ಇಲಾಖಾ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಸಿದರು.
ಬೆಳೆ ವಿಮಾ ಕಂಪನಿಗಳು ರೈತರನ್ನು ವಂಚಿಸದಂತೆ ಅಧಿಕಾರಿಗಳು ನಿಗಾವಹಿಸಬೇಕು ಬಾಕಿ ಹಣ ಶೀಘ್ರವಾಗಿ ಪಾವತಿಯಾಗಬೇಕು ಫಾಲಿಹೌಸ್ ಅನುಷ್ಠಾನದ ಬಗ್ಗೆ ಛಾಯಾಚಿತ್ರ ಸಹಿತ ವರದಿ ಸಲ್ಲಿಸಬೇಕೆಂದು ಶಾಸಕರು ಒತ್ತಾಯಿಸಿದರು. ಈ ಬಗ್ಗೆ ಮುಂದಿನ ಮೂರಾಲ್ಕು ದಿನಗಳಲ್ಲಿ ಮಾಹಿತಿ ಒದಗಿಸಿ ಹಾಗೂ ಕೃಷಿ ಯಾಂತ್ರೀಕರಣ ಯೋಜನೆಯ ದರಗಳನ್ನು ಪರಿಷ್ಕರಿಸಿ ಎಂದು ಸಚಿವರಾದ ಕೆ ಗೋಪಾಲಯ್ಯ ತಿಳಿಸಿದರು.
ಸಭೆಯಲ್ಲಿ ಹೇಮಾವತಿ ಜಲಾಶಯದ ಯೋಜನೆ, ಎತ್ತಿನ ಹೊಳೆ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನಗಳಿಗೆ ಹಣ ಒದಗಿಸುವದು. ಹಾಗೂ ರೈತರಿಗೆ ಭೂ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ವಿಳಂಬಗಳ ಬಗ್ಗೆ ಶಾಸಕರಾದ ಕೆ,ಎಂ ಶಿವಲಿಂಗೇಗೌಡ, ಕೆ ಎಸ್.ಲಿಂಗೇಶ್, ಹೆಚ್,ಡಿ ರೇವಣ್ಣ, ಹೆಚ್.ಕೆ ಕುಮಾರಸ್ವಾಮಿ, ಸಿ.ಎನ್ ಬಾಲಕೃಷ್ಣ ಅವರು ಪ್ರಸ್ತಾಪಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಭದ್ರಾ ಮೇಲ್ದಂಡೆ ಯೋಜನೆಯ ಲಾಭವನ್ನು ಬೇರೆಡೆಗೆ ಬದಲಿಸುವ ಪ್ರಯತ್ನ ನಡೆದಿದೆ ಅದನ್ನು ತಪ್ಪಿಸಿ ಅರಸೀಕೆರೆ ಜನರ ಸಂಕಷ್ಟ ಬಗೆಹರಿಸಿ ಎಂದು ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಅವರು ಸಚಿವರಿಗೆ ಮನವಿ ಮಾಡಿದರು.
ಶಾಸಕರಾದ ಹೆಚ್. ಕೆ ಕುಮಾರಸ್ವಾಮಿ ಅವರು ಮಾತನಾಡಿ ಎತ್ತಿನಹಳ್ಳದಿಂದ ಬಯಲು ಸೀಮೆಗೆ ನೀರು ಪೂರೈಸುವ ಯೋಜನೆ ಕಾಮಗಾರಿಯಿಂದ ತಮ್ಮ ಕ್ಷೇತ್ರದ ರಸ್ತೆಗಳು ಹದಗೆಟ್ಟಿವೆ ಇವುಗಳ ಅಭಿವೃದ್ದಿಗೆ ಈ ಹಿಂದೆ ಭರವಸೆ ನೀಡಿದಂತೆ ಹೆಚ್ಚುವರಿಯಾಗಿ ಅನುದಾನ ನಿಡಬೇಕು ಎಂದರು.
ಸಚಿವರಾದ ಕೆ ಗೋಪಲಯ್ಯ ಅವರು ಮಾತನಾಡಿ ನೀರಾವರಿ ವಿಯಷಗಳಿಗೆ ಸಂಭದಿಸಿದಂತೆ ಡಿ.6ರೊಳಗೆ ಪ್ರತ್ಯೇಕ ಸಭೆ ನಡೆಸಲಾಗುವುದು ರೈತರ ಭೂ ಪರಿಹಾರ ಹಾಗೂ ಅನುಧಾನ ಬೀಡುಗಡೆ ಕಾರ್ಯ ಮತ್ತತಿರ ವಿಷóಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ವಿವಿಧ ಯೋಜನೆಗಳಿಗೆ ಹಲವು ವರ್ಷದಿಂದಲೂ ಭೂಸ್ವಾಧೀüನ ವಿಳಂಬವಾಗಿದೆ ಅವುಗಳ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎತ್ತಿನ ಹೊಳೆ ಯೋಜನೆಗೆ ರೈತರಿಂದ ನೇರ ಭೂಮಿ ಖರೀದಿಗೆ ಕ್ರಮವಹಿಸಲಾಗಿದೆ ಒಂದು ವೇಳೆ ಜಮೀನು ಬಿಟ್ಟುಕೊಡದ್ದಿರೆ ಭೂಸ್ವಾಧೀನ ಪ್ರತಿಕ್ರಿಯೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಆರೋಗ್ಯ ಸೇವೆಗಳ ಸುಧಾರಣೆ ಕುರಿತು ಶಾಸಕರಾದ ಹೆಚ್.ಡಿ ರೇವಣ್ಣ ಹೆಚ್.ಕೆ ಕುಮಾರಸ್ವಾಮಿ, ಪ್ರೀತಂಗೌಡ ಸಿ ಎನ್ ಬಾಲಕೃಷ್ಣ, ಕೆ.ಎಂ ಶಿವಲಿಂಗೇಗೌಡ, ಅವರು ಮಾತನಾಡಿ ತಾಲ್ಲೂಕು ಆಸ್ವತ್ರೆಗಳಲ್ಲಿ ಡಯಾಲಿಸಿಸ್ ಸೇವೆ ಸರಿಯಾಗಿ ಸಿಗುತ್ತಿಲ್ಲ ಅಲ್ಲದೆ ಗುತ್ತಿಗೆ ಪಡೆದ ಸಂಸ್ಥೆ ಸಾರ್ವಜಕರಿಂದ ಹಣ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಲ್ಲಾ ಆಸ್ಪತ್ರೆಗಳಲ್ಲಿ ಲ್ಯಾಬ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಲ್ಯಾಬ್ ತಜ್ಞರನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಬೇಕು, 108 ಅಂಬುಲೆನ್ಸ್ ಖಾಸಗಿ ಆಸ್ಪತ್ರೆಗೆಳಿಗೆ ರೋಗಿಗಳನ್ನು ಕರೆದೊಯ್ಯುವುದು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಿನ 10 ದಿನಗಳ ಒಳಗಾಗಿ ಲ್ಯಾಬ್ ಟೆಕ್ನಿಷನ್‍ಗಳ ನೇಮಕಾತಿ ಪ್ರಕ್ರಿಯೆ ಮಾಡಿವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಸಾವಿರಾರು ಮಂದಿಗೆ ಸಾಮಾಜಿಕ ಭದ್ರತೆ ಯೋಜನೆಯ ಪಿಂಚಣಿ ಬರುತ್ತಿಲ್ಲ ಶೀಘ್ರದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಎಂದು ಸಮಸ್ಯೆ ಶಾಸಕರಾದ ಹೆಚ್.ಡಿ ರೇವಣ್ಣ ಕೆ,ಎಂ ಶಿವಲಿಂಗೇಗೇಗೌಡ ಸಿ,ಎನ್ ಬಾಲಕೃಷ್ಣ ಒತ್ತಾಯಿಸಿದರು.
ಜಿಲ್ಲೆಯ ಹಂತದಲ್ಲಿ ಬಹುತೇಕ ಎಲ್ಲವನ್ನು ಅಪ್‍ಡೆಟ್ ಮಾಡಲಾಗಿದ್ದು ನಿರ್ದೇಶನಾಲಯದಿಂದ ಶೀಘ್ರವೇ ಹಣಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂದಪಟ್ಟ ನಿರ್ದೇಶನಾಲಯದ ಅಧಿಕಾರಿಗಳನ್ನು ತಾವೇ ಭೇಟಿ ಮಾಡಿ ಸಮಸ್ಯೆ ಬಗೆ ಹರಿಸಲಾಗುವುದು ಎಂದರು.
ಹಾಸನ-ಸಕಲೇಶಪುರ ಮಧ್ಯದ ರಸ್ತೆ ದುರಸ್ತಿ ಮರು ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದು ಸಹಿಸಲಾಗದು ಇನ್ನೊಂದು ವಾರದಲ್ಲಿ ಪೂರ್ತಿ ರಸ್ತೆ ಸುಗಮ ಸಂಚಾರಕ್ಕೆ ಸಿದ್ದವಾಗಬೇಕು ಇಲ್ಲದಿದ್ದರೆ ಅಪಘಾತಗಳು ನಡೆದರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನೆ ಹೊಣೆ ಮಾಡಿ ಎಂದು ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಅಂಗನವಾಡಿ ಮತ್ತಿತ್ತರ ಕಟ್ಟಡ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕು ಹಣ ಇದ್ದರೂ ಕೆಲಸ ಮಾಡದೆ ಇದ್ದರೆ ಅಧಿಕಾರಿಗಳೇ ಜವಾಬ್ದಾರಾಗಬೇಕಾಗುತ್ತದೆ ಎಂದು ಸಚಿವರು ಸೂಚಿಸಿದರು.
ನಗರ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಮೂಲಭೂತ ಸೌಕರ್ಯ ಹೊಂದಿದ್ದರೆ ಮಾತ್ರ ಹೊಸ ಲೇಔಟ್‍ಅನುಮತಿ ನೀಡಬೇಕು ಎಂದು ಶಾಸಕರು ಒತ್ತಾಯಿಸಿದರು.
ನಾಗರೀಕ ಸೌಲಭ್ಯಗಳಿಗೆ ಜಾಗ ಬಿಟ್ಟಿರುವುದನ್ನು ರಸ್ತೆ ಹಾಗೂ ಮೋರಿಗಳು ಇತರ ಕಾಮಗಾರಿ ಸಮರ್ಪಕವಾಗಿದೆಯೇ ಎಂಬುದನ್ನು ಗಮನಿಸಿ ನಂತರ ಅನುಮತಿ ನೀಡಿ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್, ಅಪರ ಜಿಲ್ಲಾಧಿಕಾರಿ ಬಿ,ಎನ್ ನಂದಿನಿ ಮತ್ತಿತರರು ಹಾಜರಿದ್ದರು