ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

0

ಹಾಸನ:- ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದಿರುವ 18 ರಿಂದ 55 ವರ್ಷದೊಳಗಿನ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‍ಗಳಿಂದ ಗರಿಷ್ಟ 3,00,000 ರೂ. ಸಾಲ ಮತ್ತು ನಿಗಮದಿಂದ ಎಸ್.ಸಿ, ಎಸ್.ಟಿ ವರ್ಗದವರಿಗೆ ಬ್ಯಾಂಕ್ ಸಾಲದ ಶೇ.50 ರಷ್ಟು ಮತ್ತು ಇತರೆ ವರ್ಗದವರಿಗೆ ಬ್ಯಾಂಕ್ ಸಾಲದ ಶೇ.30 ರಷ್ಟು ಸಹಾಯಧನ ನೀಡಲಾಗುವುದು.
ಆಯ್ಕೆ ಸಮಿತಿಯ ಅಧ್ಯಕ್ಷರು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಒಂದು ವಿಧಾನಸಭೆಗೆ 5 ಗುರಿ ಮಾತ್ರ ನಿಗಧಿಯಾಗಿರುತ್ತದೆ. ಸಾರ್ವಜನಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಉಚಿತವಾಗಿ ಅರ್ಜಿ ಆಹ್ವಾನಿಸಲಾಗಿದೆ.
ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಚೇರಿಗಳಲ್ಲಿ 2020ನೇ ಸೆಪ್ಟೆಂಬರ್ 26ರ ಒಳಗೆ ಅರ್ಜಿ ಪಡೆದು 2020ರ ಅ.10ರೊಳಗೆ ಅದೇ ಕಚೇರಿಯಲ್ಲಿ ಅರ್ಜಿಯನ್ನು ದಾಖಲಾತಿಗಳೊಂದಿಗೆ ಹಿಂತಿರುಗಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಕೋರಿದ್ದಾರೆ.

LEAVE A REPLY

Please enter your comment!
Please enter your name here