ತಂದೆ ತಾಯಿಗಳಿಲ್ಲದಂತೆ ರಸ್ತೆ ಮಾಡಿದ ಹಿಂದಿನ ಶಾಸಕರು

0

ಮಸೀದಿಗಳಲ್ಲಿ ಮುಸಲ್ಮಾನರಿಗೆ ಕೃತಜ್ಞತೆ ಹೇಳಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ

ಹಾಸನ: ಯಾವ ಅನುಧಾನ ಇಲ್ಲದಿದ್ದರೂ ಹಿಂದಿನ ಅವಧಿಯ ಶಾಸಕರು ಸುಮ್ಮನೆ ರಸ್ತೆ ಕೆರೆದು ಒಂದು ರೀತಿ ತಂದೆ ತಾಯಿ ಇಲ್ಲದ ರಸ್ತೆ ಮಾಡಿರುವುದಾಗಿ ಸಂಸದರಾದ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ. ನಗರದ ಹೊಸಲೈನ್ ರಸ್ತೆ ಬಳಿ ಇರುವ ಇಂದಾದಿಯಾ ಮದರಸ ಮಸೀದಿ ಮತ್ತು ಪೆನ್ಷನ್ ಮೊಹಲ್ಲಾದ ಪೊಲೀಸ್ ಠಾಣೆ ಬಳಿ ಇರುವ ಬಾರ್ ಲೈನ್ ಮಸೀದಿಗೆ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ಜೊತೆ ಆಗಮಿಸಿ ಇಲ್ಲಿನ ಶಾಸಕರ ಗೆಲುವಿಗೆ ಕಾರಣದರಾದ ಮುಸಲ್ಮಾನರಿಗೆ ಕೃತಜ್ಷತೆ ಹೇಳಿ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಎಲ್ಲಾ ರಸ್ತೆಗಳನ್ನು ಪರಿಶೀಲಿಸಲಾಗುತ್ತಿದ್ದು, ಕೆಲವು ಭಾಗಗಳಲ್ಲಿ ಸುಮ್ಮನೆ ಏಕಾಏಕಿ ರಸ್ತೆಗಳ ಮಾಡಿದ್ದು, ಅದಕ್ಕೆ ಯಾವ ಅನುಧಾನವಿಲ್ಲ.

ತಂದೆ ತಾಯಿ ಇಲ್ಲದ ರಸ್ತೆಗಳ ಮಾಡಿದ್ದಾರೆ. ಜನರಿಗೆ ಒಂದು ಕಣ್ಣು ಹೊರೆಸುವ ಕೆಲಸ ಮಾಡಿ, ಅದಕ್ಕೆ ಯಾವುದೇ ಆಧಾರವಿಲ್ಲದೆ ಅನುಧಾನವು ಇಲ್ಲ. ಸುಮ್ಮನೆ ಮಾಡಿ ಕೆರೆದು ಬಿಟ್ಟು ಹೋಗಿರುವಂತಹ ಕೆಲಸ ಮಾಡಿದ್ದು, ಚನ್ನಾಗಿರುವಂತಹ ರಸ್ತೆಗಳನ್ನು ಕೂಡ ಕೆರೆದು ಹೋಗಿದ್ದು, ಅದೊಂದು ದುರಂತದ ವಿಚಾರ. ಅವುಗಳನ್ನೆಲ್ಲಾ ಬದಿಗಿಟ್ಟು ಹಳೆಯದಲ್ಲ ಮುಗಿದಿದ್ದು, ಹೊಸ ನೀರು ಹರಿಯುವ ಕೆಲಸ ಹಾಸನ ತಾಲೂಕಿನಲ್ಲಿ ಆಗಬೇಕಾಗಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಒಬ್ಬ ಯುವಕರು ಕೂಡ ನಮ್ಮ ಜೊತೆ ಕೈಜೋಡಿಸುವ ಕೆಲಸ ಮಾಡಬೇಕಾಗಿದೆ. ಸಂಸದನಾಗಿ ಮತ್ತು ಶಾಸಕರಾಗಿಯೂ ಕೂಡ ಯುವಕರಾಗಿದ್ದೇವೆ.

ಖಂಡಿತವಾಗಿಯೂ ಮನೆ ಮನೆ ಮಾತಾಡುವ ಮತ್ತು ಎಲ್ಲಾ ಮನೆ ಮಕ್ಕಳಾಗಿ ಅಭಿವೃದ್ಧಿ ಕೆಲಸ ಮಾಡುವುದಾಗಿ ವಿಶ್ವಾಸವ್ಯಕ್ತಪಡಿಸಿದರು. ಲೋಕಾಸಭೆ ಚುನಾವಣೆ ತಯಾರಿ ಎಂತಲ್ಲ. ನಾವೇನು ಈ ಫೀಲ್ಡ್ ನಿಂದ ಆಚೆ ಹೋಗುವಂತರಲ್ಲ. ವರ್ಷದ ೩೬೫ ದಿನಗಳ ಕಾಲ ಜನರ ಜೊತೆ ಇದ್ದುಕೊಂಡು ಜನ ಸಮಸ್ಯೆಯಲ್ಲಿ ಭಾಗಿಯಾಗುತ್ತಾ ಬಂದಿದ್ದೇವೆ. ಇಲ್ಲಿ ಯಾವುದೆ ಒಂದು ಚುನಾವಣೆ ಪ್ರಕ್ರಿಯೆಗಾಗಿ ಹೋರಾಟ ಮಾಡುವ ಪ್ರಶ್ನೆಯಲ್ಲ. ಲೋಕಾಸಭೆ ಚುಣಾವಣೆ ಇನ್ನು ಎಂಟರಿಂದ ಒಂಬತ್ತು ತಿಂಗಳು ಇದ್ದು, ಅದರ ಬಗ್ಗೆ ಯಾವ ಯೋಚನೆ ಮಾಡುತ್ತಿಲ್ಲ.

ಹಾಸನ ತಾಲೂಕಿನಲ್ಲಿ ಅದ್ಧೂರಿಯಾದ ಜಯವನ್ನು ತಂದುಕೊಟ್ಟಿದ್ದಾರೆ ನಮ್ಮ ಹೋರಾಟದಲ್ಲಿ ಎಲ್ಲಾರೂ ಕೂಡ ಹಾಸನದ ಜನತೆ ನಮ್ಮನ್ನು ಕೈ ಹಿಡಿದಿದ್ದು, ಅವರಿಗೆಲ್ಲರಿಗೂ ಕೂಡ ಕೃತಜ್ಞತೆ ಹೇಳಿ ಆಶೀರ್ವಾದ ಪಡೆದು ಮತ್ತೊಮ್ಮೆ ಅವರ ವಿಶ್ವಾಸವನ್ನುಗಳಿಸಲಾಗುವುದು ಎಂದರು. ಎಂ.ಎಲ್.ಎ. ಚುನಾವಣೆ ಆದ ಮೇಲೆ ಮುಸಲ್ಮಾನರ ಮುಖ್ಯಸ್ಥರುಗಳನ್ನು ಮತ್ತು ಗುರುಗಳನ್ನು ಹಾಗೂ ಮುಖಂಡರುಗಳರನ್ನು ಇದುವರೆಗೂ ಭೇಟಿ ಆಗುವುದಕ್ಕೆ ಆಗಿರಲಿಲ್ಲ. ಕಳೆದ ಹಾಸನ ತಾಲೂಕಿನ ಚುನಾವಣೆ ಒಂದು ಹೋರಾಟದ ಚುನಾವಣೆ.

ಅಂತಹ ಸಂದರ್ಭದಲ್ಲಿ ಮುಸಲ್ಮಾನ ಬಾಂಧವರು ಆಶೀರ್ವಾದ ಮಾಡಿ ಒಂದು ಶಾಸಕ ಸ್ಥಾನವನ್ನು ಗೆಲ್ಲಿಸಿಕೊಟ್ಟು ಹೆಚ್.ಪಿ. ಸ್ವರೂಪ್ ಅವರನ್ನು ಗೆಲ್ಲಿಸಿ ನಮಗೆ ಒಂದು ಒಳ್ಳೆಯ ಜಯವನು ಕೊಟ್ಟಿದ್ದಾರೆ. ಎಲ್ಲಾ ಮುಖಂಡರುಗಳನ್ನು ಭೇಟಿ ಮಾಡಿಕೊಂಡು ಅವರ ಬಳಿ ಸಣ್ಣ ಪುಟ್ಟ ವಿಚಾರಗಳು ಇದ್ದರೇ, ಏನಾದರೂ ಸಮಸ್ಯೆಗಳು ಇದ್ದರೇ ತಿಳಿದುಕೊಂಡು ಆಶೀರ್ವಾದ ಪಡೆಯಲು ಬಂದಿದ್ದೇವೆ ಎಂದರು. ಪ್ರತಿ ಶುಕ್ರವಾರದಂದು ಮಸೀದಿಗಳನ್ನು ಭೇಟಿ ಮಾಡಿ ಗುರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಆ ಭಾಗದಲ್ಲಿ ಎಲ್ಲಾ ಮುಸಲ್ಮಾನರ ವಿಶ್ವಾಸಕ್ಕೆ ಪಡೆದು ಅವರ ಕೆಲಸ ಏನೆ ಇದ್ದರೂ ಮುಂದಿನ ದಿನಗಳಲ್ಲಿ ಏನೆ ಕೆಲಸ ಇದ್ದರೇ ಆ ಕೆಲಸ ಮಾಡಿಕೊಡುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here