ಹಾಸನ: ಹಳೆ ದ್ವೇಷದ ಹಿನ್ನೆಯಲ್ಲಿ ಚಲಿಸುತ್ತಿದ್ದ ದ್ವೀಚಕ್ರ ವಾಹನ ತಡೆದು ಹಾಡುಹಗಲೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ಮದ್ಯಾಹ್ನ ನಗರದ 80 ಫಿಟ್ ರಸ್ತೆ ರಸ್ತೆ ಮಧ್ಯೆಯೇ ನಡೆದಿದೆ.
ಬಿಡಿ ಹೂವನ್ನು ಬೈಕಿನಲ್ಲಿ ಕೊಂಡೂಯ್ಯುತ್ತಿದ್ದ ಭರತ್ ಎಂಬುವನೆ ಕೊಲೆಯಾದ ದುರ್ಧೇವಿ ಎಂದು ತಿಳಿದು ಬಂದಿದೆ. ಸಂತೇಪೇಟೆ ಬಳಿಯಿಂದ 80 ಫಿಟ್ ರಸ್ತೆಯಲ್ಲಿ ರಾಜಕುಮಾರ್ ನಗರ ರಸ್ತೆ ಬಳಿ ಬೈಕ್ ನಲ್ಲಿ ಚಲಿಸುತ್ತಿದ್ದಾಗ ಗುಂಪೊಂದು ಆತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಈವೇಳೆ ಆತನ ತಲೆ ಸೀಳಿ ಹೋಗಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕೊಲೆಯಾದ ಭರತ್ ಎಂಬುವನು ಹಿಂದೆ ಕೆಂಚ ಲೋಕಿ ಮರ್ಡರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಪುಡಿ ರೌಡಿ ಎಂದು ತಿಳಿದು ಬಂದಿದೆ.
https://m.facebook.com/story.php?story_fbid=3909679765808595&id=195025720607370
ಸ್ಥಳಕ್ಕಾಗಮಿಸಿದ ಪೆನ್ಷನ್ ಮೊಹಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳುಲ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಂದು ಕಡೆ ಕೊರೋನಾ ಮಹಮಾರಿ ಆವರಿಸಿ ಪ್ರತಿನಿತ್ಯ ಸಾವು-ಬದುಕಿನ ನಡುವೆ ನರಳಿ ಜೀವ ಉಳಿಸಿಕೊಳ್ಳಲು ಮುಂದಾದರೇ, ಇಲ್ಲಿ ಇರುವ ಜೀವವನ್ನೆ ತೆಗೆಯುವಷ್ಟು ಕಟುಕರಾಗಿದ್ದಾರೆ.
Video link click here : https://m.facebook.com/story.php?story_fbid=3909679765808595&id=195025720607370