ವಾಸದ ಮನೆಗಳು ಜನನಿಬಿಡ ಪ್ರದೇಶಗಳ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳು ಮತ್ತು ಪೊದೆಗಳನ್ನು ತೆರವುಗೊಳಿಸುಹುದು.
ಕಾಡಾನೆಗಳು ಕಂಡುಬಂದಲ್ಲಿ 24X7 ಕರ್ತವ್ಯ ನಿರ್ವಹಿಸುವಂತಹ ಗಳ ಸಹಾಯವಾಣಿ ಗೆ (8762824594, 8296096323) ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿಯನ್ನು ನೀಡುವುದು.
ಕಾಡಾನೆಗಳನ್ನು ಓಡಿಸುವ ಬರುವ ಅರಣ್ಯ ಇಲಾಖೆಯ ಸಿಬ್ಬಂದಿಗಳ, ಅರಣ್ಯ ಕ್ಷಿಪ್ರ ಕಾರ್ಯಪಡೆ ಸದಸ್ಯರುಗಳೊಂದಿಗೆ ಶಾಂತಿಯುತವಾಗಿ ಹಾಗೂ ಸಂಯಮದಿಂದ ವರ್ತಿಸಿ, ಸಿಬ್ಬಂದಿಗಳಿಗೆ ಕಾಡಾನೆಗಳನ್ನು ಓಡಿಸುವ ಸಂಪೂರ್ಣ ಸಹಕಾರವನ್ನು ನೀಡುವುದು.
ಹಗಲಿನ ವೇಳೆಯಲ್ಲಿ ಸಾರ್ವಜನಿಕರಿಗೆ ಸ್ವಯಂಪ್ರೇರಿತವಾಗಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಮಾಡಬಾರದು, ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಸಿಬ್ಬಂದಿಗಳ ಜೊತೆ ತೆರಳುವುದು, ಕಾಫಿ ಗಿಡಗಳ ಮೇಲೆ ನಿಂತು ನೋಡುವುದು, ಗದ್ದಲ ಮಾಡುವುದು ಕುತೂಹಲಕ್ಕಾಗಿ ಕಲ್ಲುಗಳನ್ನು ಎಸೆಯುವುದನ್ನು ಮಾಡಬಹುದು.
ಆಕಸ್ಮಿಕವಾಗಿ ಕಾಡಾನೆಗಳು ಕಂಡುಬಂದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಿ ಕಾಡಾನೆಗಳ ಚಲನವಲನಗಳನ್ನು ಗಮನಿಸುವುದು. ಹಾಗೂ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡುವುದು.
ಮುಂಜಾನೆ ಸಂಪೂರ್ಣವಾಗಿ ಬೆಳಕು ಬಂದ ನಂತರ ಹೊಲಗದ್ದೆ ಮತ್ತು ತೋಟಗಳಿಗೆ ಕೆಲಸಕ್ಕೆ ಹೋಗುವುದು ಹಾಗೂ ಸಂಜೆ ಸೂರ್ಯಾಸ್ತದ ನಂತರ ಕೆಲಸಕ್ಕೆ ಹೊಲ, ಗದ್ದೆ ಹಾಗೂ ಕಾಫಿ ತೋಟಗಳಿಗೆ ಹೋಗದಿರುವುದು.
ಕಾಡಾನೆಗಳು ತೋಟಗಳಲ್ಲಿ ನಿಂತಿರುವ ಸಮಯದಲ್ಲಿ ಹಾಗೂ ರಸ್ತೆ ದಾಟುವ ಸಂದರ್ಭದಲ್ಲಿ ಕಲ್ಲುಗಳನ್ನು ಎಸೆಯುವುದು, ಪಟಾಕಿಗಳನ್ನು ಸಿಡಿಸುವುದು ಹಾಗೂ ಇತ್ಯಾದಿಗಳನ್ನು ಮಾಡದೆ ನಿಶ್ಯಬ್ದ ವಾಗಿದ್ದು ಕಾಡಾನೆಗಳು ಸ್ಥಳದಿಂದ ತೆರಳುವವರೆಗೂ ಸಂಯಮದಿಂದ ವರ್ತಿಸಿ ನಂತರ ತೆರಳುವುದು.
ಆನೆಗಳಿಗೆ ಅತ್ಯಂತ ಪ್ರಿಯವಾದ ಆಹಾರದ ಬೆಳೆಗಳಾದ ಬಾಳೆ, ಕಬ್ಬು, ಜೋಳ ಮತ್ತು ಇತರೆ ಬೆಳೆಗಳನ್ನು ಮನೆ, ಶಾಲೆ,ದೇವಸ್ಥಾನ ಮತ್ತು ಇತರೆ ಜನನಿಬಿಡ ಪ್ರದೇಶಗಳಿಂದ ನಿರ್ಮೂಲನೆ ಮಾಡುವುದು.
ತೋಟಗಳಿಗೆ/ಹೊಲಗದ್ದೆಗಳಿಗೆ ಕೆಲಸಕ್ಕೆ ತೆರಳುವ ಮುನ್ನ ಮತ್ತು ಕೂಲಿಕಾರರನ್ನು ಕೆಲಸಕ್ಕೆ ಬಿಡುವ ಮೊದಲು ಸಂಪೂರ್ಣವಾಗಿ ಸ್ಥಳವನ್ನು ಪರಿಶೀಲಿಸಿ ತೋಟದಲ್ಲಿ ಕಾಡಾನೆಗಳು ಇಲ್ಲದಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಕೆಲಸಕ್ಕೆ ತೆರಳುವುದು.
ಸಂಜೆಯ ವೇಳೆಯಲ್ಲಿ ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿರುವ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಒಬ್ಬಂಟಿಯಾಗಿ ತೆರಳದೆ, ಗುಂಪುಗಳಲ್ಲಿ ತೆರಳುವುದು.