ಗ್ರಾಮೀಣ ಭಾಗದ ಕೆರೆಗಳಿಗೆ ನೀರು ತರಲು ಶ್ರಮಿಸಿದವರನ್ನು ಸ್ಥಳೀಯರು ನೆನಪಿಸಿಕೊಳ್ಳಬೇಕು ಎಂದು ಲೋಕಸಭಾ ಸದ್ಯಸರಾದ ಪ್ರಜ್ವಲ್ ರೇವಣ್ಣ ಅವರು ತಿಳಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ಮತ್ತಿಘಟ್ಟ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ ನುಗ್ಗೆಹಳ್ಳಿ ಭಾಗದಲ್ಲಿ ಕೆರೆಗೆ ನೀರು ತುಂಬಲು ಸ್ಥಳೀಯ ಜನ ಪ್ರತಿನಿಧಿಗಳು ,ರೈತರ ಹೋರಾಟ ಮಾಡಿ ನೀರು ತಂದಿದ್ದಾರೆ. ಶ್ರವಣಬೆಳಗೊಳ ಹೋಬಳಿಯನ್ನು ನೀರಾವರಿ ಆಗಿ ಮಾಡಬೇಕೆಂಬ ಶಾಸಕರ ಕನಸು ನನಸಾಗಿದೆ . ಕೆರೆಗೆ ನೀರು ಕೊಟ್ಟಾಗ ಮಾತ್ರ ರೈತರಿಗೆ ಶಕ್ತಿ ಕೊಟ್ಟಂತಾಗುತ್ತದೆ ಎಂದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಜನಿವಾರ ಕೆರೆ ಅಮಾನಿಕೆರೆ ಎಡದಂಡೆ ಯಿಂದ ಬೊಮ್ಮೇನಹಳ್ಳಿ ಮೂಲಕ ಮತ್ತಿಘಟ್ಟ ಕೆರೆಗೆ ನೀರು ತಂದಿದ್ದೇವೆ. ಮಾಜಿ ಸಚಿವ ದಿವಂಗತ ಶ್ರೀಕಂಠಯ್ಯನವರ ಕಾಲದಲ್ಲಿ ಸರ್ವೆ ಕಾರ್ಯ ನಡೆದಿತ್ತು ಆದ್ದರಿಂದ ಈ ಕಾರ್ಯಕ್ರಮದಲ್ಲಿ ಶ್ರೀಕಂಠಯ್ಯನವರನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಜನಿವಾರ ಅಮಾನಿಕೆರೆಯಂದ 25 ಕೆರೆ ತುಂಬುವ ಯೋಜನೆ ಇದಾಗಿದ್ದು ಸುತ್ತಮುತ್ತಲಿನ ಭಾಗದ ರೈತರಿಗೆ ಬಹಳ ಅನುಕೂಲವಾಗಲಿದ್ದು, ಸಕಾಲದಲ್ಲಿ ಜಮೀನಿನನ್ನು ಬಿಟ್ಟುಕೊಟ್ಟು ನೆರವಾದ ಎಲ್ಲಾ ಭೂಮಾಲೀಕರಿಗೆ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ಯೋಜನೆ ವಿವಿಧ ಹಂತಗಳಲ್ಲಿ ಈ ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್. ಡಿ ಕುಮಾರಸ್ವಾಮಿ ಹಾಗೂ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪ ಅವರು ಅನುದಾನ ಒದಗಿಸಿ ನೆರವಾಗಿದ್ದಾರೆ ಜೊತೆಗೆ ಸ್ಥಳೀಯ ರೈತ ಮುಖಂಡರನ್ನೂ ನೆನೆಯುವುದು ಅವಶ್ಯಕವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಂ. ಎ ಗೋಪಾಲಸ್ವಾಮಿ ಅವರು ಮಾತನಾಡಿ ಏತ ನೀರಾವರಿ 60 ಕೆರೆಗಳಿಗೆ ನೀರು ಒದಗಿಸಲಾಗಿದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಣ ಭರಿಸಿದ್ದು.ಈ ಯೋಜನೆಯಿಂದ ರೈತರಿಗೆ ನೆಮ್ಮದಿ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕ್ ಪಂಚಾಯತ್ ಅಧ್ಯಕ್ಷರಾದ ಶಾಮಲಾರಾಮಣ್ಣ ಜಿಲ್ಲಾ ಪಂಚಾಯತ್ ಸದಸ್ಯರ ಮಂಜಣ್ಣ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂಬಿಕಾರಾಮಣ್ಣ ವಿವಿಧ ಅಧಿಕಾರಿಗಳು ,ಮತ್ತಿಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು
Home Hassan Taluks Channarayapattana ಕೆರೆಗೆ ನೀರು ತುಂಬಿಸಲು ಶ್ರಮ ವಹಿಸಿದವರನ್ನು ನೆನೆಯಬೇಕು – ಸಂಸದ ಪ್ರಜ್ವಲ್ ರೇವಣ್ಣ