ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಸನ ಇವರ ಸಹಯೋಗದೊಂದಿಗೆ ಹಾಸನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ Dr. ತೇಜಸ್ವಿ ಆಡಳಿತಾಧಿಕಾರಿ ಕಾರ್ಲೆ ಆರೋಗ್ಯ ಕೇಂದ್ರ ಇವರಿಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು.
ಪ್ರಸ್ತುತ ಇವರು ಪರಿಸರ ಕಾಳಜಿ ಹೊಂದಿದ್ದು, ಆರೋಗ್ಯ ಕೇಂದ್ರವನ್ನು ಸ್ವಚ್ಛತೆ ಹಾಗೂ ಸುಂದರವಾಗಿ ಮಾರ್ಪಾಡನ್ನು ಮಾಡುವಲ್ಲಿ ಸಫಲರಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಲೆಯಲ್ಲಿ ಮುನ್ನೂರಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಉದಾಹರಣೆ ಹಿಂದೆ ಕೆಲಸಮಾಡುತ್ತಿದ್ದ ಸಮುದಾಯ ಆರೋಗ್ಯ ಮೊಸಳೆಹೊಸಳ್ಳಿ ಸಾಕ್ಷಿಯಾಗಿದೆ. ಪ್ರಸ್ತುತ ಮೊಸಳೆ ಹೊಸಳ್ಳಿ ಆಸ್ಪತ್ರೆಗೆ ಸ್ವಚ್ಛತೆ ಹಾಗೂ ಸೇವೆಯಲ್ಲಿ ರಾಜ್ಯದ ಗಮನ ಸೆಳೆದಿದ್ದು ಇವರ ಕೊಡುಗೆ ಅಪಾರವಾಗಿದೆ.
ಪ್ರಸ್ತುತ ಇವರು ಕಾರ್ಯದರ್ಶಿ ಭಾರತೀಯ ವೈದ್ಯಕೀಯ ಸಂಘ ಹಾಸನ ಹಾಗೂ ರೋಟರಿ ಮಿಡ್ ಟೌನ್ ಹಾಸನ ಕಾರ್ಯನಿರ್ವಹಿಸುತ್ತಿದ್ದಾರೆ.