ನಾನು ಶ್ರೀನಿವಾಸ್ ಗೌಡ , ಹಾಸನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ #hassansp ನನಗೆ ಹಿಂದೊಮ್ಮೆ ಗಂಟಲಿನ ಏನೋ ಬದಲಾವಣೆ ಅನುಭವ ಬಂದ ತಕ್ಷಣ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯದೆ ಮೊದಲು ಹೋಗಿ ಪರೀಕ್ಷೆಗೆ ಮುಂದಾದೆ ಪರೀಕ್ಷೆಯ ವರದಿಯು ಪಾಸಿಟಿವ್ ಬರಬಹುದು ಎಂದು ಅಂದುಕೊಂಡಿರಲಿಲ್ಲ., ಮಾಹಿತಿ ತಿಳಿದ ಮರುಕ್ಷಣವೇ ನಾನು ಮಾಡಿದ ಮೊದಲ ಕೆಲಸ ., ನನ್ನ ಸಂಪರ್ಕದಲ್ಲಿದ್ದ , ನನ್ನ ಸುತ್ತ ಮುತ್ತ ಕರ್ತವ್ಯ ನಿರತರಾಗಿದ್ದ , ಹಾಗೂ
ಸಾರ್ವಜನಿಕರ ಕೆಲವರು ತಮ್ಮ ಅಹವಾಲು ಸಮಸ್ಯೆ ಕೇಳಿ ಬಂದವರ ಬಳಿ ನೀವು ಕೂಡ ಕೋವಿಡ್ ಪರೀಕ್ಷೆಗೆ ಒಳಪಡುವುದು , ಹಾಗೂ
ಕೋವಿಡ್ ನಿಯಮ ಅನುಸಾರ ಪಾಲಿಸಲು ಸೂಚಿಸುವ ಮೂಲಕ ತನ್ನಿಂದ ಕೋವಿಡ್ ಹರಡದಂತೆ ನಾನು ಹೋಂ ಐಸೊಲೇಷನ್ ನಲ್ಲಿ ಸುಮಾರು 14 ದಿನ ಯಾರ ಸಂಪರ್ಕ ಹೊಂದದೆ ನನ್ನ ಕರ್ತವ್ಯದ ಎಲ್ಲ ಸ್ಥಳ ಹಾಗೂ ವಿಷಯಗಳ ಬಗ್ಗೆ ಹಾಸನ ಜಿಲ್ಲೆಯ ಪ್ರತಿಯೊಂದು ಮಾಹಿತಿಗಳ ಫೋನ್ ಮೂಲಕ ಅರಿತುಕೊಂಡು ನಿರಂತರವಾಗಿ ಕಾರ್ಯಪ್ರವೃತ್ತನಾಗಿ ಇರುತ್ತಿದ್ದೆ ,
ಈ ಪ್ರಕ್ರಿಯೆಯಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆ ಹಾಗಲಿಲ್ಲ ., ಕೋವಿಡ್ ಸಂಬಂಧಿಸಿದ ತಪಾಸಣೆಗಳ ಮುಂದುವರೆಸಿ ವೈದ್ಯರ ಸಲಹೆಯ ಚಿಕಿತ್ಸೆಯಿಂದ ಬಹುಬೇಗ ಗುಣಮುಖನಾಗಿ ಹೊರಬಂದು ಕರ್ತವ್ಯಕ್ಕೆ ಹಾಜರಾದೆ , ಹೋಂ ಐಸೋಲೇಶನ್ ನಲ್ಲಿ ನನ್ನ ಹವ್ಯಾಸಗಳು :
• ಪುಸ್ತಕಗಳನ್ನು ಓದುವ ಅಭ್ಯಾಸ ಇರುವುದರಿಂದ ಬಹುತೇಕ ಪುಸ್ತಕ ಓದಿರುವುದು,
• ಸಾಮಾಜಿಕ ಸಂದೇಶ ಸಿನಿಮಾಗಳ ನೋಡುವುದು, • ಹಳೆಯ ಸ್ನೇಹಿತರೊಡನೆ ಸಂವಾದ ಇರುತ್ತಿತ್ತು , ಆದರೆ ಕುಟುಂಬಸ್ಥರೊಂದಿಗೆ ಫೋನ್ ಮೂಲಕ ಮಾತನಾಡುವುದಷ್ಟೆ ಇದ್ದದ್ದು ಅಲ್ಪ ಬೇಸರ ವಿಷಯ ಸಹಜ !, ಫೋನಿನ ಮೂಲಕ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದ್ದ ಐಸೊಲೇಷನ್ ಇದ್ದ ಅವಧಿಯಲ್ಲಿ ನೆಮ್ಮದಿ ನೀಡಿದೆ
ಫೋನ್‍ನಲ್ಲಿ ಚೆಸ್ ಆಡುವುದು ಮೆದುಳಿನ ಚುರುಕುವಿಕೆ ಕಾಪಾಡಿದ್ದರೆ , ಬೆಳಗಿನ ಧ್ಯಾನ ,ಯೋಗ ಇಡೀದಿನ ಕ್ರೀಯಾಶೀಲವಾಗಿರಲು ಸಹಕರಿಸುತ್ತಿತ್ತು .,
• ಕೋವಿಡ್ ಗೆದ್ದು ಬಂದ ನನಗೆ ಎಲ್ಲರಲ್ಲಿ ಹಂಚಿಕೊಳ್ಳಬೇಕು ಎಂಬು ವಿಷಯ ಎಂದರೆ ಅದು ” ಸಕಾರಾತ್ಮಕ ” ಸದಾ ಯೋಜಿಸಿಕೊಳ್ಳವುದು ಅದರಂತೆ ಇರುವುದು ನನ್ನ ಮನದಾಳದ ಕಿರು ಸಂದೇಶ ಎಲ್ಲರಿಗು
• ಕೋವಿಡ್ ನಿಯಮಗಳನ್ನು ಪಾಲಿಸಿ, ಅಂತರ ಕಾಯ್ದುಕೊಳ್ಳಿ , ಕಡ್ಡಾಯವಾಗಿ ಮಾಸ್ಕ್ ಧರಿಸಿ , ಲಸಿಕೆ ಪಡೆದುಕೊಳ್ಳಿ , ಕೈಗಳನ್ನು ಸ್ವಚ್ಛಗೊಳಿಸುತ್ತಿರಿ , ನೆಗೆಟಿವ್ ಚಿಂತನೆಗಳ ಮಾಡಬೇಡಿ , ಕೊರೊನಾ ಹರಡದಂತೆ ತಡೆಯಬಹುದು – ಧನ್ಯವಾದಗಳು
ಪಾಸಿಟಿವ್ ಬಂದ ಮೇಲೂ ನೀವು ನಿಮ್ಮ ಬಗ್ಗೆ ನಿಗಾವಹಿಸದಿದ್ದರೆ
• ಸಮಸ್ಯೆ ಉಲ್ಬಣಗೊಳ್ಳುತ್ತದೆ
• ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ
• ವೈದ್ಯರ ಸಲಹೆ ಮರೆಯಬೇಡಿ
• ಒಳ್ಳೆಯ ವಿಚಾರಗಳ ಬಗ್ಗೆ ಫೋನ್ ನಲ್ಲಿ ಸಮಾಲೋಚಿಸಿ ,
• Depression ಒಳಗಾಗಬೇಡಿ ,
ಆಗ ನೋಡಿ ಸೋಂಕಿನಿಂದ ಖಂಡಿತವಾಗಿಯು ಗುಣಮುಖರಾಗುವಿರಿ
– ಆರ್.ಶ್ರೀನಿವಾಸಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
(#hassansp #hassanpolice #srinivasgowda #hassannews