ನೂತನ ಉಪ ಅರಣ್ಯಾಧಿಕಾರಿ ಅಧಿಕಾರ ಸ್ವೀಕಾರ

0

ಜಿಲ್ಲೆಯ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಸವರಾಜು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜ1 ರಂದು ಸಂಜೆ ಅಧಿಕಾರ ವಹಿಸಿಕೊಂಡ ಕೆ.ಎನ್.ಬಸವರಾಜು ರವರು ಜ 2 ರಂದು ಪರಿಸರ ಪೋಷಕರು, ಪ್ರಗತಿಪರ ಚಿಂತಕರುಗಳೊಂದಿಗೆ ಜಿಲ್ಲೆಯ ಅರಣ್ಯ ಹಾಗೂ, ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಪಡೆದರು.

ಅರಣ್ಯ ಭವನದಲ್ಲಿಂದು ಹೆಮ್ಮಿಗೆ ಮೋಹನ್ ,ಅರ್.ಪಿ ವೆಂಕಟೇಶ್ ಮೂರ್ತಿ, ಕಿಶೋರ್ ಕುಮಾರ್ ಮತ್ತಿತರರಿಂದ ಉಪ ಅರಣ್ಯ ಸಂರಕ್ಷಣಾಧಿಕಾüರಿಯವರು ವಿವರ ಪಡೆದರು.

ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆ, ಚಿರತೆ ಕಾಡು ಕೋಣ ,ಕಪಿಗಳ ಹಾಗೂ ಮತ್ತಿತರ ವನ್ಯ ಜೀವಿಗಳ ಹಾವಳಿ ಬಗ್ಗೆ ವಿವರಿಸಿದ ಪ್ರಗತಿಪರರು ರೈತರಿಗೆ ಅಯಾಯ ವರ್ಷದ ಬೆಳೆ ಹಾನಿ ಪರಿಹಾರ ಆ ವರ್ಷವೇ ದೊರೆಯುವಂತಾಗಬೇಕು ವೈಜ್ಞಾನಿಕ ದರ ನಿಗಧಿಯಾಗಬೇಕು ಎಂದು ಮನವಿ ಮಾಡಿದರು.

ಆಲೂರು ಸಕಲೇಶಪುರ ಭಾಗದ ಆನೆ ಹಾವಳಿ ನಿಯಂತ್ರಣಕ್ಕೆ ಆನೆ ಕಾರಿಡಾರ್ ಸ್ಥಾಪನೆಗೆ ಪ್ರಸ್ತಾವನೆ ಇದ್ದು, ಅದರ ಜಾರಿಯ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.

ಶೀಘ್ರದಲ್ಲೆ ಬೆಳೆಗಾರರು ,ರೈತ ಪ್ರಮುಖರ ಸಭೆ ನಡೆಸಿ ಮಾಹಿತಿ ಪಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ಹಂತಹಂತವಾಗಿ ಇಲಾಖೆಗೆ ಸಂಭಂದಿಸಿದ ಸಮಸ್ಯೆಯನ್ನು ಬಗೆಹರಿಸಲಾಗುವುದು ಹಾಗೂ ಹೆಚ್ಚಿನ ಮಟ್ಟದಲ್ಲಿ ಅರಣ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಗೆಂಡೆ ಕಟ್ಟೆ ಅರಣ್ಯ ಅಭಿವೃದ್ಧಿ ,ಕೆರೆ ,ಉದ್ಯಾನಗಳನ್ನು ಅರಣ್ಯ ಅಭಿವೃದ್ಧಿ ಮತ್ತಿತರ ವಿಷಯಗಳ ಕುರಿvತು ಚರ್ಚೆ ನಡೆಯಿತು.

ಸಭೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೋದ್ ಚಂದ್ರ, ಎ. ಸಿ.ಎಫ್ ಹರೀಶ್, ಹೊಳೆನರಸೀಪುರ, ಅರಕಲಗೂಡು, ಆಲೂರು ವಲಯ ಅರಣ್ಯ ಅಧಿಕಾರಿಗಳು ಹಾಗೂ ಮತ್ತಿತರರು ಹಾಜರಿದ್ದರು .

LEAVE A REPLY

Please enter your comment!
Please enter your name here