ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಸನ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ರೋಟರಿ ಮಿಡ್ ಟೌನ್ ಹಾಸನ ಇವರ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಸನ ಶಾಖೆಯಲ್ಲಿ ಉಪಶಮನ ಆರೈಕೆ ಕಾರ್ಯಕ್ರಮದ ಹಾಸನ ತಾಲ್ಲೂಕಿನ ಆಯ್ದ 30 ಫಲಾನುಭವಿಗಳಿಗೆ, 473 ರೂ ಬೆಲೆಯ, ಒಟ್ಟು 30 ದವಸ ದಾನ್ಯದ ಕಿಟ್ ವಿತರಿಸಲಾಯಿತು.
ಕೊರೋನಾ ಸೋಂಕು ಎಲ್ಲಾ ಕಡೆ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಲಾಕ್‍ಡೌನ್ ಘೋಷಿಸಿದ್ದು ಈ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಕ್ಯಾನ್ಸರ್, ಸ್ಟ್ರೋಕ್ (ಪಾಶ್ರ್ವವಾಯು) ಹೆಚ್.ಐ.ವಿ/ಏಡ್ಸ್, ಕಿಡ್ನಿ ತೊಂದರೆ, ಹೃದಯ ರೋಗ, ಪಾರ್ಕಿನ್‍ಸನ್, ಗ್ಯಾಂಗ್ರಿನ್ ಮುಂತಾದ ದೀರ್ಘಕಾಲಿಕ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳು ದವಸ ಧಾನ್ಯದ ಕಿಟ್ ಸದುಪಯೋಗವನ್ನು ಪಡೆದು ಆರೋಗ್ಯ ಸುಧಾರಣೆ ಮಾಡಿಕೊಳ್ಳುವಂತೆ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಹಾಸನ ಶಾಖೆಯ ಜಿಲ್ಲಾ ಸಂಯೋಜಕರಾದ ಯೋಗನಾಥ್ ಎಂ. ಹೆಚ್ ತಿಳಿಸಿದ್ದಾರೆ. ಬಡ ರೋಗಿಗಳಿಗೆ ದವಸ ದಾನ್ಯದ ಕಿಟ್ ನೀಡಲು ಸಹಕರಿಸಿದ ಹಾಸನ ನಗರದ ಸಂತೆಪೇಟೆಯ ಪ್ರಾವಿಜನ್ ಸ್ಟೋರ್ ಮಾಲೀಕರಿಗೆ ಮತ್ತು ರೋಟರಿ ಮಿಡ್ ಟೌನ್ ಸಂಸ್ಥೆಗೆ ಈ ಸಂದರ್ಭದಲ್ಲಿ ಕೃತಜ್ಞತೆ ತಿಳಿಸಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೋನಾ ಕಾಯಿಲೆ ಒಬ್ಬರಿಂದ ಮತ್ತೋಬ್ಬರಿಗೆ ಹರುಡುವುದನ್ನು ತಡೆಗಟ್ಟಬಹುದು ಈ ನಿಟ್ಟಿನಲ್ಲಿ ಎಲ್ಲರೂ ಜಾಗ್ರತೆಯಿಂದ ಇದ್ದರೇ ಕೊರೋನಾ ಕಾಯಿಲೆ ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.