Home Health/Beauty Tips ಉಪವಾಸ ನಿಜವಾಗಲೂ ಆರೋಗ್ಯಕರವಾ??? 

ಉಪವಾಸ ನಿಜವಾಗಲೂ ಆರೋಗ್ಯಕರವಾ??? 

0

ಉಪವಾಸ, ಇದರ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ.  ಹಲವಾರು ವಿವಿಧ ರೀತಿಯ ಉಪವಾಸಗಳ ಬಗ್ಗೆಯೂ ಕೇಳಿದ್ದೇವೆ. ಕೆಲವರಿಗೆ ಇದು ಮೂಢನಂಬಿಕೆ ಎಂದು ಸಂಶಯವಿದೆ, ಉಪವಾಸ ನಿಜವಾಗಲೂ ಆರೋಗ್ಯಕರವಾ???

ಯಾರಿಗಾದರೂ ಈ ಪ್ರಶ್ನೆ ಮೂಡಿದ್ದರೆ ನಿಮಗೆ  ಉತ್ತರ ಇಲ್ಲಿದೆ.

ದೇವರನ್ನು ನೆನೆದು ದೇವರು ವರ ನೀಡಲು ಹಲವಾರು ಜನ ಉಪವಾಸ ಮಾಡುತ್ತಾರೆ. ಆದರೆ ಇದು ಒಂದು ಹಂತಕ್ಕೆ ಬಹಳ ಉಪಯೋಗಕಾರಿ.

        
  ಉಪವಾಸ ಮಾಡುವುದರಿಂದ ನಮ್ಮ ದೇಹದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಇದು ನಿಮ್ಮ ದೇಹದಲ್ಲಿರುವ ರಕ್ತದ ಪ್ರಮಾಣ ಏರುಪೇರಾಗದೆ ನೋಡಿಕೊಳ್ಳುತ್ತದೆ. ಇದು ನಮ್ಮ ದೇಹದ ಇನ್ಸುಲಿನ್ ರೆಸಿಸ್ಟೆನ್ಸ್ ಮತವನ್ನು ಕಡಿಮೆಗೊಳಿಸಿ ಒಳ್ಳೆಯ ಆರೋಗ್ಯ ನೀಡುತ್ತದೆ.         

       ಉಪವಾಸ ಮಾಡುವುದರಿಂದ ದೇಹದ ತೂಕವನ್ನೂ ಬಹಳ ಸುಲಭವಾಗಿ ಇಳಿಸಬಹುದು ಇದು ನಮ್ಮ ಸ್ನಾಯುಗಳಿಗೆ ( muscle) ಶಕ್ತಿ ನೀಡುತ್ತದೆ. ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ.

ಇಂಟರ್ಮಿಟ್ಟೆಂಟ್ ಫ್ಯಾಸ್ಟಿಂಗ್  ಇತೀಚಿನ ದಿನದಲ್ಲಿ ಬಹಳ ಪ್ರಸಿದ್ಧವಾಗಿದೆ ಈ ಅಭ್ಯಾಸದ ಪ್ರಕಾರ 16 ಗಂಟೆಗಳು ಉಪವಾಸದಲ್ಲಿ ಇರಬೇಕು. ಇದರ ಪ್ರಕಾರ ನಿಮ್ಮ ಆಹಾರ ಪದ್ಧತಿಯನ್ನು 8 ಗಂಟೆಗಳವರೆಗೆ ನಿರ್ಬಂಧಿಸುವುದು, ಉದಾಹರಣೆಗೆ ತಿಂಡಿಯನ್ನು ತಿನ್ನದೇ ನೇರವಾಗಿ ಊಟ 1 ಗಂಟೆಗೆ ಮಾಡಿ 9 ಗಂಟೆಯೊಳಗೆ ಊಟ ಮಾಡುವುದು. ಈ ಫಾಸ್ಟಿಂಗ್ ನಲ್ಲಿ ಇನ್ನೂ ಹಲವಾರು ರೀತಿಗಳಿವೆ.

ಉಪವಾಸವನ್ನು ಮಾಡುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಡಯಾಬಿಟಿಸ್ , ದೇಹದ ಸಕ್ಕರೆ ಮಟ್ಟ ಕಡಿಮೆ ಇದ್ದವರು ಪ್ರಕಾಶ ಮಾಡದಿರುವುದು ಒಳ್ಳೆಯದು ಹಾಗೆ ಉಪವಾಸ ಮಾಡುವಾಗ ಸದಾ ನೀರನ್ನು ಸೇವಿಸುವುದು ಬಹಳ ಒಳ್ಳೆಯ ಅಭ್ಯಾಸ.

ನಿಮ್ಮ ಅರೋಗ್ಯ ನಿಮ್ಮ ಜವಾಬ್ದಾರಿ.
– ತನ್ವಿ. ಬಿ

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: