ಹಾಸನ : ಜಿಲ್ಲೆಯಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲ ಆವರಿಸಿದೆ ಸರ್ಕಾರ ತಕ್ಷಣವೇ ಎಲ್ಲಾ ತಾಲೂ ಕುಗಳನ್ನ ಬರಪಟ್ಟಿಗೆ ಸೇರಿಸಬೇಕು ಇಲ್ಲವಾದರೆ ಅ. 9ರಿಂದ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಅನಿ ರ್ದಿಷ್ಟ ಅವಧಿ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣದ) ಜಿಲ್ಲಾಧ್ಯಕ್ಷ ಸಿಡಿ ಮನು ಕುಮಾರ್ ಎಚ್ಚರಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚಿಗೆ 195 ತಾಲೂ ಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಿದೆ. ಅದರಲ್ಲಿ 161 ತೀವ್ರ ಬರಪೀಡಿತ, 24 ಸಾಧಾರಣ ಪಟ್ಟಿಗೆ ಸೇರಿಸಿದೆ. ಇದರಲ್ಲಿ ಅರಕಲಗೂಡು ತೀವ್ರ ಬರಗಾಲದ ಪಟ್ಟಿಯಲ್ಲಿದ್ದರೆ ಸಕಲೇಶಪುರ, ಹೊಳೆನರಸೀಪುರ ಚನ್ನರಾಯಪಟ್ಟಣ, ಬೇಲೂರು ತಾಲೂಕುಗಳು ಸಾಧಾರಣ ಪಟ್ಟಿಯಲ್ಲಿವೆ.
ಆದರೆ ಅರಸೀಕೆರೆ ಮತ್ತು ಹಾಸನ, ಆಲೂರು ತಾಲೂಕು ನಿರ್ಲಕ್ಷ್ಯ ಮಾಡಿದ್ದು, ಕೂಡಲೇ ಇವುಗಳನ್ನು ಬರ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿಗಳು ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದ್ದರಿಂದ ಈ ರೀತಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಇದಕ್ಕೆ ಸೂಕ್ತಕ್ರಮ ಸಭೆ ನಡೆಸಿ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾ ಗುವುದು ಎಂದು ಎಚ್ಚರಿಸಿದರು. ಮುಂಗಾರು ಕೈ ಕೊಟ್ಟಿರುವು ದರಿಂದ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ಭರ್ತಿ ಯಾಗಿಲ್ಲ ಆದರೆ ಇದ್ದ ನೀರನ್ನು ಒತ್ತಾಯಿಸಿದರು ಜಿಲ್ಲೆಯ ಜನರಿಗೆ ಕೊಡದೆ ತಮಿಳುನಾಡಿಗೆ ಹರಿಸಿದರು ಇದರಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕೀಲಾಗಿದ್ದಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳನ್ನ ಬರಪೀಡಿತ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದ್ದರು ಕೂಡ ಅವರು ಜಿಲ್ಲೆಗೆ ಆಗಮಿಸದೆ ಕಾಣೆಯಾಗಿದ್ದಾರೆ ಆರಂಭದಲ್ಲಿ ನಂತರ ನಾಪತ್ತೆಯಾ ಗಿದ್ದಾರೆ ಹಾಸನಂಬ ದರ್ಶನ ಮಹೋತ್ಸವ ಸೇರಿದಂತೆ ಇನ್ನಿತರೆ ಪೂರ್ವ ಸಿದ್ಧತೆಗಳು ಆಗಬೇಕಾಗಿದೆ ಆದರೆ ಇದರಿಂದ ತೀವ್ರ ಹಿನ್ನಡೆ ಉಂಟಾಗುತ್ತಿದೆ ತಕ್ಷಣವೇ ಸರ್ಕಾರ ಉಸ್ತುವಾರಿ ಸಚಿವರನ್ನ ಬದಲಾವಣೆ ಮಾಡಬೇಕು ಎಂದರು.