ವಿದ್ಯಾರ್ಥಿಗಳಿಗೆ ಕೊಠಡಿಯಲ್ಲಿ ಕೂಡು ಹಾಕಿ ಮನ ಬಂದಂತೆ ವೈರಿನಿಂದ ಹೊಡೆದ ಶಿಕ್ಷಕನ ಮೇಲೆ ಪೋಷಕರಿಂದ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಕಾವಲಿನ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಪಾಠಶಾಲೆಯಲ್ಲಿ ಇಂಥ ಒಂದು ಘೋರ ಘಟನೆ ನಡೆದಿದೆ ಎನ್ನಲಾಗಿದೆ
ಮೊನ್ನೆ ಶನಿವಾರ ( ಸೆ.2 .2023) ಸುಮಾರು ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಸುಫಿಯಾನ್ ,,ಮೊಹಮ್ಮದ್ ಮುಸ್ತಫಾ ,,ಹಾಗೂ ಇನ್ನೂ ಮೂರು ಜನ ವಿದ್ಯಾರ್ಥಿಗಳು ಶಾಲೆ ಕೊಠಡಿಯಲ್ಲಿ ಇದ್ದಂತ ಸಮಯದಲ್ಲಿ ಅಲ್ಲಿಗೆ ಬಂದಂತಹ ಸಮಾಜ ಶಿಕ್ಷಕ ಐದು ಜನ ವಿದ್ಯಾರ್ಥಿಗಳನ್ನು ಇಷ್ಟು ಸಮಯವಾದರೂ ಶಾಲೆಗೆ ಏಕೆ ಹೋಗಲಿಲ್ಲ ಎಂಬ ಪ್ರಶ್ನೆ ಮಾಡಿ ಹಾಗೂ ವಿದ್ಯಾರ್ಥಿಗಳಿಗೆ ನೀವು ಅವಚ್ಯ ಶಬ್ದಗಳಿಂದ ನಿಂದಿಸಿ ಐದು ವಿದ್ಯಾರ್ಥಿಗಳನ್ನು ರಕ್ತ ಇಪ್ಪೆಗಟ್ಟುವ ಹಾಗೆ ಬೆನ್ನುಗಳಿಗೆ ಕೈ ಮತ್ತು ಕಾಲುಗಳಿಗೆ ಹೊಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ
ನಂತರ ವಿದ್ಯಾರ್ಥಿಗಳು ರಾತ್ರಿ ಹೊತ್ತಿನಲ್ಲಿ ಹಾಸ್ಟೆಲಿನ ಕಾಂಪೌಂಡನ್ನು ಹಾರಿ ಹೋಗಿ ತಮ್ಮ ತಮ್ಮ ಪೋಷಕರನ್ನು ವಿಚಾರ ತಿಳಿಸಿದ್ದು ನಂತರ ಪೋಷಕರು ತಿಪಟೂರಿನ ಸರ್ಕಾರಿ ಆಸ್ಪತ್ರೆಗೆ ಎಲ್ಲಿ ಚಿಕಿತ್ಸೆ ಕೊಡಿಸಿ ನಂತರ ಅರಸೀಕೆರೆಯ ಗ್ರಾಮಾಂತರ ಠಾಣೆಯಲ್ಲಿ ಶಿಕ್ಷಕನ ಮೇಲೆ ದೂರನ್ನ ದಾಖಲಿಸಿದ್ದಾರೆ