ಫಾರೆಸ್ಟ್ ನಾಗರಾಜು ಪ್ರಕೃತಿಯ ಮಡಿಲಿನಲ್ಲಿ ಲೀನವಾಗಿದ್ದು, ಗಣ್ಯಮಾನ್ಯರು ತೀವ್ರ ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ

0

ಬೇಲೂರು: ತಮ್ಮ ಸರಳತೆ, ಸೌಜನ್ಯ ಮತ್ತು ಸನ್ನಡತೆ ಮೂಲಕ ತಾಲ್ಲೂಕಿನ ಜನ ಮೆಚ್ಚುಗೆ ಪಡೆದ ಫಾರೆಸ್ಟ್ ನಾಗರಾಜು ಯಾವುದೇ ಶುಭ-ಸಮಾರಂಭಗಳು ಇರಲಿ ಪರಿಸರ ಪೂರಕ ಸೇವಾ ಚಟುವಟಿಕೆ ನಡೆಸುತ್ತಾ ಪರಿಸರ ಪ್ರೇಮಿ ಎಂದೇ ಖ್ಯಾತಿ ಪಡೆದ ಫಾರೆಸ್ಟ್ ನಾಗರಾಜು ಪ್ರಕೃತಿಯ ಮಡಿಲಿನಲ್ಲಿ ಲೀನವಾಗಿದ್ದು, ಗಣ್ಯಮಾನ್ಯರು ತೀವ್ರ ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ.

ಮೂಲತಃ ಕಲ್ಲಿನಕೊಟೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನವರಾದ ಪಾರೆಸ್ಟ್ ನಾಗರಾಜು, ಶಿಲ್ಪಕಲಾ ನಾಡು ಬೇಲೂರಿನಲ್ಲಿ ಬದುಕು ಕಟ್ಟಿಕೊಂಡವರು ಅರಣ್ಯ ಇಲಾಖೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಾ ಪರಿಸರದ ಬಗ್ಗೆ ವಿಶೇಷವಾದ ಕಾಳಜಿ ಹೊಂದುವ ಮೂಲಕ ತಾಲ್ಲೂಕಿನಲ್ಲಿ ನಡೆಯುವ ಸಭೆ-ಸಮಾರಂಭ,ಮದುವೆ, ನಾಮಕರಣ ಇನ್ನಿತರ ಶುಭ ಸಮಾರಂಭಗಳಿಗೆ ಕಾಡು ಜಾತಿ ಮತ್ತು ಹಣ್ಣಿನ ಗಿಡಗಳನ್ನು ಉಡುಗರೆಯಾಗಿ ನೀಡುವ ವಾಡಿಕೆಗೆ ಮುನ್ನುಡಿ ಬರೆದವರು. ಅಧುನಿಕ ಕಾಲಘಟ್ಟದಲ್ಲಿ ಪರಿಸರ ಮೇಲಿನ ದಬ್ಬಾಳಿಕೆಯನ್ನು ಕಂಡು ಸ್ವತಃ ಬೇಲೂರಿನಲ್ಲಿ ಗ್ರೀನರಿ ಟ್ರಸ್ಟ್ ಎಂಬ ಸಂಸ್ಥೆಯ ಹುಟ್ಟಿಗೆ ಕಾರಣವಾದ ಇವರು ಪಟ್ಟಣದ ಬಹುತೇಕ ಕಡೆಗಳಲ್ಲಿ ರಾಷ್ಟ್ರೀಯ ಹಬ್ಬಗಳ ನೆನಪಿಗೆ ಮತ್ತು ರಾಷ್ಟ್ರಭಕ್ತರ ಸವಿನೆನಪಿಗೆ ಗಿಡಗಳನ್ನು ನೆಟ್ಟು ಪೋಷಣೆ ಮುಂದಾದ ಅವರು ಪರಿಸರ ಪ್ರೀಯ ಕೆಲಸದಲ್ಲಿ ನಿಸ್ವಾರ್ಥ ಸೇವೆಗೈದ ಬೇಲೂರಿನ ಪರಸರ ಪ್ರೇಮಿ ಪಾರೆಸ್ಟ್ ನಾಗರಾಜು ಎಂದು ಜನಮೆಚ್ಚುಗೆ ಪಡೆದಿದ್ದಾರೆ. ಇವರು ಹಲವು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದು, ಇವರ ನಿಧನಕ್ಕೆ ಎಲ್ಲಾ ಸಂಘ-ಸಂಸ್ಥೆಗಳು ಮತ್ತು ಕನ್ನಡ ಪರ ಸಂಘಟನೆಗಳು ಕಂಬನಿ ಮಿಡಿದಿದ್ದಾರೆ.

ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಕೆ.ಸುರೇಶ್, ಬೇಲೂರು ತಹಸೀಲ್ದಾರ ಎಂ.ಮಮತ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಪೈಂಟ್ ರವಿ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೋ ಹೊರತು ಆತನ ದುರಾಸೆಯನ್ನಲ್ಲ? ಎಂಬ ರಾಷ್ಟ್ರಪಿತ ಮಹಾತ್ಮ ಗಾಂಧಿಜಿರವರ ನುಡಿಮುತ್ತಿನಂತೆ ಪ್ರಕೃತಿ ಮಾತೆಗೆ ತನ್ನದೆಯಾದ ಕೊಡುಗೆ ನೀಡಬೇಕೆಂದು ಸದಾ ಒಂದಲ್ಲ ಒಂದು ರೀತಿಯಲ್ಲಿ ಪರಿಸರ ಪ್ರಿಯ ಕೆಲಸದ ನಡುವೆ ಗುರುತಿಸಿಕೊಂಡಿದ್ದ ಪರಿಸರ ಪ್ರೀಯ ಸರಳ ವ್ಯಕ್ತಿತ್ವದ ಬೇಲೂರಿನ ಬಿ.ವಿ.ನಾಗರಾಜ್ ಅವರ ನಿಧಾನ ತಾಲ್ಲೂಕಿಗೆ ತುಂಬಲರಾದ ನಷ್ಟವಾಗಿದೆ.

ಕಲ್ಲಿನ ಕೋಟೆ ಚಿತ್ರದರ್ಗದ ಚಳ್ಳಕೆರೆಯಲ್ಲಿನ ತ೦ದೆ ವೆಂಕಟಸ್ವಾಮಿ, ತಾಯಿ ನರಸಮ್ಮ ಇವರ ಸುಪತ್ರರಾಗಿ ದಿನಾಂಕ-10-04-1969 ರಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಮುಗಿಸಿ, ಉದ್ಯೋಗಕ್ಕಾಗಿ ಬೇಲೂರಿಗೆ ವಲಸೆ ಬಂದು ಹಳೇಬೀಡಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ. ಸದ್ಯ ಅರಣ್ಯ ಇಲಾಖೆಯಲ್ಲಿ ವೀಕ್ಷಕರಾಗಿ ವೃತ್ತಿ ನಡೆಸುತ್ತಿದ್ದರು. ಪ್ರವೃತ್ತಿಯಾಗಿ ನಿಸರ್ಗದ ಸೇವೆ ಕಡೆ ಮುಂದಾಗಿ 2011 ರಲ್ಲಿ ಗ್ರೀನರಿ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಪರಿಸರ ಪೂರಕವಾದ ಕಾರ್ಯಗಳನ್ನು ನಡೆಸಿ ತಾಲ್ಲೂಕಿನ ಜನ ಮೆಚ್ಚುಗೆ ಪಡೆದುಕೊಂಡಿದ್ದರು.

ಭಾರತ ಜ್ಞಾನ ವಿಜ್ಞಾನ ಸಮಿತಿ,ಹಸಿರು ಭೂಮಿ ಪ್ರತಿಷ್ಠಾನ ಸೇರಿದಂತೆ ನಾನಾ ಜನಪರ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸುವ ಮೂಲಕ ಪರಿಸರ ಕೆಲಸಗಳಿಗೆ ಹೆಚ್ಚಿನ ಅಧ್ಯತೆ ನೀಡುತ್ತಾ ಬಂದಿದ್ದು. ಇವರ ಅಸಾಮಾನ್ಯ ಸೇವಾಕಾರ್ಯವನ್ನು ಗುರುತಿಸಿ ಬೇಲೂರಿನ ಪ್ರತಿಷ್ಟಿತ ವೈಡಿಡಿ ಪ್ರಥಮ ದರ್ಜೆ ಕಾಲೇಜು ‘ವೈಡಿಡಿ ವರ್ಷದ ವ್ಯಕ್ತಿ? ಪ್ರಶಸ್ತಿ ನೀಡಿ ಗೌರವಿಸಲಾಗುತ್ತು.

ವಿಶೇಷವಾಗಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕನವರ ಪ್ರಶಸ್ತಿಗೂ ಭಾಜನರಾಗಿದ್ದರು. ಹತ್ತಾರು ಸಂಘ ಸಂಸ್ಥೆಗಳಿಂದ ಗೌರವ ಅಭಿನಂದನೆ ಭಾಜನರಾಗಿದ್ದರು. ಕಳೆದ ತಿಂಗಳಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಸಂತಾಪ : ಶಾಸಕ ಹೆಚ್‌.ಕೆ ಸುರೇಶ್‌, ತಾಲ್ಲೂಕು ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ರೈತ ಸಂಘ, ಗ್ರೀನರಿ ಟ್ರಸ್ಟ್, ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಅಧ್ಯಕ್ಷರು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ

LEAVE A REPLY

Please enter your comment!
Please enter your name here