ಸಕಲೇಶಪುರ : ನಗರದ ಬಾಳೆಗದ್ದೆಯಲ್ಲಿ ನೆಲೆಸಿರುವ ಬಸವರಾಜು ಅವರ ಮನೆಯಲ್ಲಿ ವಿಶೇಷವಾಗಿ 101ಗಣಪತಿ ಮೂರ್ತಿ ಯನ್ನು ಪ್ರತಿಷ್ಟಾಪಿಸಲಾಗಿದೆ.ಫ್ಲವರ್ ಡೆಕೊರೇಷನ್ ವೃತ್ತಿಯಲ್ಲಿರುವ ಬಸವರಾಜ್ ಅವರು ಈ ಬಾರಿ ತಮ್ಮ ಮನೆಯಲ್ಲಿ ವಿಶೇಷವಾಗಿ ನೂರಾಒಂದು ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದರೊಂದಿಗೆ ಸಕಲೇಶಪುರ ಪಟ್ಟಣದ ಜನರಿಗೆ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಈ ವಿಶೇಷ 101 ಗಣೇಶನ ನೋಡಲು ಸ್ನೇಹಿತ ವರ್ಗದವರು,ನೆಂಟರು ಹಾಗೂ ಪಟ್ಟಣದ ಜನರು ಆಗಮಿಸುತ್ತಿರುವುದು ಸಂತಸ ತಂದಿದೆ. ಎನ್ನುತ್ತಾರೆ ಬಾಳೆಗದ್ದೆಯ ಫ್ಲವರ್ ಡೆಕೋರೇಷನ್ ಬಸವರಾಜ್.ಈ ಸಂದರ್ಭದಲ್ಲಿ ಪುಷ್ಪಾವತಿ ಮಂಜು ಪ್ರಿಯ ಮನು ನಾಗು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು