ಆಲೂರು : ಮಗಳ ಮದುವೆ ವಿವಾಹದ ಸಂಬಂಧ ದಂಪತಿಗಳಿಬ್ಬರೂ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಲ್ಲೂರು ಪುರು ಗ್ರಾಮದಲ್ಲಿ ನಡೆದಿದೆ.
ಬಲ್ಲೂರು ಪುರ ಗ್ರಾಮದ ಪುಟ್ಟರಾಜು (58) ಮತ್ತು ಅವರ ಪತ್ನಿ ಕಾಂತಮ್ಮ (53) ವರ್ಷ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳಾಗಿದ್ದು.
ಮಗಳ ವಿವಾಹದ ಸಂಬಂಧ ಇಂದು ನಡೆಯಬೇಕಿದ್ದ ಮದುವೆ ಎಂಗೇಜ್ಮೆಂಟ್ ನ್ನ ಮಗಳು ನಿರಾಕರಿಸಿದ್ದ ಹಿನ್ನಲೇ ಮನನೊಂದ ದಂಪತಿಗಳಿಬ್ಬರು ಮನೆಯ ದನದ ಕೊಟ್ಟಿಗೆಯಲ್ಲಿ ಒಟ್ಟಿಗೆ ನೇಣು ಬಿಗಿದು ಕೊಂಡು ಮೃತಪಟ್ಟಿರುತ್ತರೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ. ಆಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೆಂಕತೇಶ್. ಸಬ್ ಇನ್ಸ್ಪೆಕ್ಟರ್ ಮಂಜುನಾಥ ನಾಯ್ಕ್ ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.