ಮತದಾರ ಜಾಗೃತಿ ಚಟುವಟಿಕೆಗೆ ಸೂಚನೆ

0

ಹಾಸನ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮತದಾರ ಜಾಗೃತಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಕುರಿತು ಜಿಲ್ಲಾ ಸ್ವೀಪ್ ಸಮಿತಿ‌ ಅಧ್ಯಕ್ಷರೂ ಅಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಬಿ
ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಸ್ವೀಪ್ ಸಮಿತಿ‌ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿ‌ ಸ್ವೀಪ್ ಚಟುವಟಿಕೆಗಳಿಗೆ ಪ್ರತ್ಯೇಕ ಅನುದಾನ ಲಭ್ಯವಿಲ್ಲ ಇಲಾಖೆಗಳಲ್ಲಿ ಐ.ಇ.ಸಿ ಚಟುವಟಿಕೆಗಳಿಗೆ ಮೀಸಲಿರುವ ಅನುದಾನವನ್ನು ಬಳಸಿ ಜಾಗೃತಿ ಮೂಡಿಸಬೇಕಿದೆ ಎಂದು ಅವರು ಹೇಳಿದರು.

ಬೀದಿನಾಟಕ ,ಹೆದ್ದಾರಿ ಫಲಕಗಳ ಅಳವಡಿಕೆ .ಕೆ.ಎಸ್ ಅರ್.ಟಿ.ಸಿ ಬಸ್ ಗಳಲ್ಲಿ‌ ಸ್ಟಿಕರ್ ಅಳವಡಿಕೆ,ಗ್ರಾಮ ಪಂಚಾಯಿತಿ ಹಂತಗಳಲ್ಲಿ ಆಟೋ ಪ್ರಚಾರದ ಮೂಲಕ ಹಾಗೂ ಪೋಸ್ಟರ್ ಸ್ಟಿಕರ್ ಗಳ ಅಳವಡಿಕೆ ಮಾಡುವ ಮೂಲಕ‌ ಜಾಗೃತಿ ಮೂಡಿಸಲು ಅವರು ಸೂಚಿಸಿದರು.

ಡಿಜಿಟಲ್ ಮಾಧ್ಯಮಗಳನ್ನೂ ಬಳಕೆ ಮಾಡಿಕೊಂಡು ,ನೈತಿಕ‌ ಮತದಾನ ,ಕಡ್ಡಾಯ ಮತದಾನ ,ವಿಕಲ ಚೇತನರಿಗೆ ಇರುವ ಸೌಲಭ್ಯಗಳು ಹಾಗೂ ಕೋವಿಡ್ ಪಾಸಿಟಿವ್ ಇರುವ ಮತದಾರರ ಮತದಾನಕ್ಕೆ ಇರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್ ,ಮುಖ್ಯ ಯೋಜನಾಧಿಕಾರಿ ನಾಗರಾಜ್,ಜಿಲ್ಲಾ ಸ್ವೀಪ್ ಸಮಿತಿ‌ ಸದಸ್ಯ ಕಾರ್ಯದರ್ಶಿ ವಿನೋದ್ ಚಂದ್ರ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here