ರಾಷ್ಟ್ರೀಯ ವಿಪತ್ತು ನಿಧಿಯಿಂದ ಮೃತ ಕುಟುಂಬಗಳಿಗೆ ನೆರವು ನೀಡದಿದ್ರೆ
ಸುಪ್ರಿಂ ಕೋರ್ಟ್ ಮೊರೆ: ಹೆಚ್.ಡಿ. ರೇವಣ್ಣ ಎಚ್ಚರಿಕೆ

0

ಹಾಸನ: ಕೊರೋನಾದಿಂದ ಇದುವರೆಗೂ ಮೃತ ಪಟ್ಟ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ನಿಧಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರವು ನೆರವು ನೀಡದಿದ್ದರೇ ಸುಪ್ರಿಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕುವನ್ನು ರಾಷ್ಟ್ರೀಯ ವಿಪತ್ತು ಸಾಂಕ್ರಾಮಿಕ ರೋಗವೆಂದು ಕೇಂದ್ರವೇ ಘೋಷಣೆ ಮಾಡಿರುವಾಗ ರಾಷ್ಟ್ರೀಯ ವಿಪತ್ತು ನಿಧಿಯಿಂದ ಕೇಂದ್ರವು ಮೃತ ಕುಟುಂಬಕ್ಕೆ ೫ ಲಕ್ಷ ಮತ್ತು ರಾಜ್ಯದಿಂದ ೧ ಲಕ್ಷ ರೂಗಳನ್ನು ಕೊಡಬೇಕು. ಇಲ್ಲವಾದರೇ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ. ಕಾನೂನಿನಲ್ಲಿ ಹೇಳಿರುವಂತೆ ಹಣ ಕೊಡಬೇಕು. ನಾಡಿದ್ದು ಮುಖ್ಯಮಂತ್ರಿಗಳು ಹಾಸನಕ್ಕೆ ಬರುತ್ತಿದ್ದು, ಈವೇಳೆ ನಮ್ಮ ಡಿಮ್ಯಾಂಡನ್ನು ಅವರ ಮುಂದೆ ಇಡಲಾಗುವುದು ಎಂದರು. ಜೂನ್.೧೧ ರಂದು ಹಾಸನಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಏನು ಮಾಡುತ್ತಾರೆ ನೋಡೋಣಾ.. ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ ಒಟ್ಟು ೧೮ ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ ೧೮ ವರ್ಷ ಮೇಲ್ಪಟ್ಟವರು ೧೩ ಲಕ್ಷ ಜನರು ಇದ್ದಾರೆ. ಮೊದಲ ಡೋಸ್ ಪಡೆದವರು ೩ ಲಕ್ಷದ ೫೮ ಸಾವಿರ ಜನರು, ೨ನೇ ಡೋಸ್ ನೀಡಿರುವುದು ೧ ಲಕ್ಷದ ೭೨ ಸಾವಿರ ಜನರು, ಜಿಲ್ಲೆಯಲ್ಲಿರುವ ಒಟ್ಟು ಲಸಿಕೆ ೨೬ ಸಾವಿರ ಎಂದು ಅಂಕಿ-ಅಂಶ ನೀಡಿದರು. ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಜಿಲ್ಲೆಯಲ್ಲಿ ಶೇಕಡ ೧೨ ರಷ್ಟು ಮಾತ್ರ ಲಸಿಕೆ ಕೊಡಲಾಗಿದೆ ಎಂದ ಅವರು, ಇಂತಹ ತೀವ್ರ ಸಾಂಕ್ರಮಿಕ ಇದ್ದರೂ ಎಲ್ಲಾರಿಗೂ ಲಸಿಕೆ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿದೆ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ೧ ಸಾವಿರಕ್ಕಿಂತ ಹೆಚ್ಚು ಜನರು ಸಾವನಪ್ಪಿದ್ದು, ದಿನಕ್ಕೆ ಹೆಚ್ಚು ಎಂದರೇ ೩೦ ಜನರು, ಕನಿಷ್ಠ ೧೦ ಜನರು ಮೃತಗೊಂಡು ಎರಡನೆ ಅಲೆಯಲ್ಲಿ ೬೧೫ ಜನ ತೀರಿಹೋಗಿದ್ದಾರೆ. ಹೆಚ್ಚು ಜನರು ಸಾವನಪ್ಪಿದರೂ ಕಡಿಮೆ ಅಂಕಿ-ಅಂಶ ಕೊಡುತ್ತಿರುವುದಾಗಿ ದೂರಿದರು.

ಕೇಂದ್ರವು ದೀಪಾವಳಿವರೆಗೂ ೫ ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದು, ಯಾರು ಬಡವರು ಇದ್ದಾರೆ ಅವರು ಮನೆ ಬಾಡಿಗೆಯೇ ೨ ಸಾವಿರ ರೂ ಕಟ್ಟಿ ಇನ್ನು ಕರೆಂಟ್ ಬಿಲ್ ೫೦೦ ಕೊಡಬೇಕು. ಇವನ್ನೆಲ್ಲಾ ಗಮನಿಸಿ ಸರಕಾರವು ಕನಿಷ್ಟ ೧೦ ಸಾವಿರ ರೂಗಳಾದರೂ ಕೊಡಬೇಕೆ ವರತು ಭಿಕ್ಷುಕರಂತೆ ಕಾಣಬಾರದು. ಲೂಟಿ ಕಡಿಮೆ ಮಾಡಿ ಜನರನ್ನು ಉಳಿಸಬೇಕು ಎಂದರು.
ಇದೆ ವೇಳೆ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಲಿಂಗೇಶ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here