ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಎತ್ತಿದ ಕೈ!

0

ಭಾರತೀಯರ ಊಟದಲ್ಲಿ ಮೊಸರು ಇಲ್ಲದೆ ಊಟ ಮುಗಿಯುವುದಿಲ್ಲ. ಬಡವರಿಂದ ಶ್ರೀಮಂತರ ಊಟದಲ್ಲೂ ಮಜ್ಜಿಗೆ ಅಥವ ಮೊಸರು ಖಚಿತವಾದ ಒಂದು ಪದಾರ್ಥ. ಹಲವರಿಗೆ ಮೊಸರನ್ನ ಇದ್ದರೆ ಸಾಕು ಯಾವ ತಿಂಡಿಯೂ  ಬೇಕಾಗಿಲ್ಲ. ನೀವು ಮೊಸರು ಪ್ರಿಯರೇ?

ಮೊಸರಿನ ಪ್ರಯೋಜನಗಳು
        
• ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:
                   ಮೊಸರು ನಮ್ಮ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಅದಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಇಂದ ಆಗುವ ಒತ್ತಡವನ್ನು ಕಡಿಮೆ ಮಾಡುತ್ತದೆ,ಇದರಿಂದ ನಮ್ಮ ಹೃದಯ ಆರೋಗ್ಯವಾಗಿರುತ್ತದೆ.

• ಜೀರ್ಣಕ್ರಿಯೆಗೆ ಸಹಾಯಕಾರಿ:
                ಮಾಸರನ್ನು ಊಟದ ನಂತರವೇ ತಿನಲ್ಲೂ ಮುಖ್ಯವಾದ ಕಾರಣವೆಂದರೆ ಇದು ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ. ಇದರಲ್ಲಿ ಜಠರರಸ ಮತ್ತು ಕರುಳಿನ ರಸಗಳು ಇತರ ಆಹಾರಗಳನ್ನು ಜೀರ್ಣ ಕರಿಸಿಕೊಳ್ಳಲು ಉಪಯೋಗಕಾರಿ. ಅತಿ ಅಡುಗೆಗಳಲ್ಲಿ ಮಸಾಲೆ ಪದಾರ್ಥಗಳು ಹೆಚ್ಚು ಬಳಸುವುದರಿಂದ ಊಟದ ನಂತರ ಮೊಸರು ಸೇವಿಸಿದರೆ ನಮ್ಮ ಜೀರ್ಣಕ್ರಿಯೆ ಬಹಳ ಸುಲಭವಾಗುತ್ತದೆ.

• ಮೂಳೆಗಳನ್ನು ಬಲಶಾಲಿಯಾಗಿ ಮಾಡುತ್ತದೆ:
                 ಸಿರಿ ನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವುದರಿಂದ ಇದು ನಮ್ಮ ಮೂಳೆಗಳಿಗೆ ಮತ್ತು ಹಲ್ಲುಗಳಿಗೆ ಬಹಳ ಉಪಯೋಗಕಾರಿ ಕ್ಯಾಲ್ಸಿಯಂ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವವರು ಮೊಸರನ್ನು ಸೇವಿಸಿದರೆ ಈ ತೊಂದರೆಯಿಂದ ಬಹಳ ಸುಲಭವಾಗಿ ನಿವಾರಣೆ ಪಡೆಯಬಹುದು.

• ಕಾಂತಿಯುಕ್ತವಾದ ಚರ್ಮವನ್ನು ಪಡೆಯಬಹುದು:

                     ಮೊಸರನ್ನು ನಿಂಬೆರಸದೊಂದಿಗೆ ಸೇರಿಸಿ ಚರ್ಮದ ಮೇಲೆ ಹಚ್ಚಿಕೊಂಡರೆ ಚರ್ಮದಲ್ಲಿರುವ ಕೀಟಾಣುಗಳು, ಕಪ್ಪು ಕಲೆಗಳು ಬಹಳ ಸುಲಭವಾಗಿ ತೊಲಗಿ.ನಮ್ಮ ಚರ್ಮಕ್ಕೆ ಹೊಳಪು ನೀಡುತ್ತದೆ.

• ಕೂದಲಿನ ಆರೋಗ್ಯವನ್ನು ಕಾಪಾಡುತದ್ದೆ.
                 ಹಲವರು ತಲೆಹೊಟ್ಟಿನ ಸಮಸ್ಯೆಯಿಂದ ಅನುಭವಿಸುತ್ತಿರುತ್ತಾರೆ. ತಲೆಹೊಟ್ಟನ್ನು ಮೊಸರಿನಿಂದ ತಡೆಗಟ್ಟಬಹುದು. ತಲೆ ಹುಟ್ಟಿರುವ ಕಡೆಯೇ ಮೊಸರನ್ನು ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಿಕೊಂಡರೆ ತಲೆಹೊಟ್ಟು ಬಹಳ ವೇಗವಾಗಿ ಮಾಯವಾಗುತ್ತದೆ.


            ಮೊಸರು  ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯೋಗಕಾರಿ. ಹಾಗಾಗಿ ಮೊಸರನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಲು ಮರೆಯಬೇಡಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
                                                  – ತನ್ವಿ. ಬಿ

LEAVE A REPLY

Please enter your comment!
Please enter your name here