ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ದಿನದಂದು ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಆರ್. ಗಿರೀಶ್ ಅವರು ತಿಳಿಸಿದ್ದಾರೆ.
ಸನ್ಮಾನಿತರ ವಿವರ: ಕನ್ನಡ ಪರ ಸಂಘಟನೆ ಕ್ಷೇತ್ರದಿಂದ(ನಾಡು) ಹಾಸನದ ಎಸ್.ವಿ.ರಂಗಣ್ಣ ರಸ್ತೆಯಲ್ಲಿ ವಾಸವಿರುವ ಕಲ್ಲಹಳ್ಳಿ ಹರೀಶ(ಹರೀಶ.,ಕೆ.ಎಂ.) ಹಾಗೂ ಅರಸೀಕೆರೆಯ ಶ್ರೀನಿವಾಸ ನಗರದ ಕೆ.ಎಸ್.ಮಂಜುನಾಥ ಬಿನ್ ಸಿದ್ದೇಗೌಡ. ಕನ್ನಡ ಸಾಹಿತ್ಯ ಕ್ಷೇತ್ರ ಕನ್ನಡ ಪರ ಸಂಘಟನೆ(ನುಡಿ)ಯಿಂದ ಸಾಲಗಾಮೆ ಹೋಬಳಿಯ ಅತ್ತಿಹಳ್ಳಿ ಗ್ರಾಮದ ಹಾಡ್ಲಹಳ್ಳಿ ನಾಗರಾಜ ಹಾಗೂ ಹಾಸನ ನಗರದ ಬಸವೇಶ್ವರ ಬಡಾವಣೆಯ ಡಾ. ಸಿ.ಚ.ಯತೀಶ್ವರ.
ಗ್ರಾಮೀಣ ಕಲೆ/ಜಾನಪದ ಕ್ಷೇತ್ರದಿಂದ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ನರಸಿಂಹರಾಜಪುರದ ಡಿ.ಜಿ. ಗುರುನಂಜೇಶ ಬಿನ್ ಗಿರಿಯಪ್ಪ ಹಾಗೂ ಅರಸೀಕೆರೆ ತಾಲ್ಲೂಕಿನ ಕರಗುಂದ ಗ್ರಾಮದ ಕೆ.ಎಸ್ ಉಮಾಪತಿ ಬಿನ್ ಸಿದ್ದಲಿಂಗಪ್ಪ.
ಸಾಂಸ್ಕೃತಿಕ ಕ್ಷೇತ್ರದ ಪೌರಾಣಿಕ ಮತ್ತು ಆಧುನಿಕ ರಂಗಭೂಮಿಯಲ್ಲಿ ಹಾಸನ ತಾಲ್ಲೂಕಿನ ಸಾಲಗಾಮೆ ಹೋಬಳಿಯ ಸೀಗೆ ಗ್ರಾಮದ ಊ.ಐ. ಪಾಲಕ್ಷ ಚಾರ್ ಉ: ಊ.ಐ. ಪರಮೇಶ್ವರಾಚಾರ್ ಬಿನ್. ಊ.ಖ. ಲಿಂಗಾಚಾರ್, ಚನ್ನರಾಯಪಟ್ಟಣ ತಾಲ್ಲೂಕಿನ ಬಂಡೀಹಳ್ಳಿ ಗ್ರಾಮದ ಬಿ.ಎಸ್. ನಾಗರಾಜು ಬಿನ್ ಲೇ. ಸಣ್ಣ ನಿಂಗೇಗೌಡ, ಹಾಸನ ತಾಲ್ಲೂಕಿನ ಚನ್ನಪಟ್ಟಣ ಶಿಕ್ಷಕರ ಬಡಾವಣೆಯ ಕೆ. ರಾಘವೇಂದ್ರ ಕುಮಾರ್, ಹಾಸನದ ಜಯನಗರ ಬಡಾವಣೆಯ ಪೂಜಾ ರಘುನಂದನ್ ಕೋಂ ರಘುನಂದನ್ ಎಸ್.ಎ., ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಅಡಗೂರು ಗ್ರಾಮದ ಎ.ಜಿ. ವಿಶ್ವನಾಥ್ ಬಿನ್. ಗುರುವಯ್ಯ.
ಚಿತ್ರಕಲೆಯಲ್ಲಿ ಅರಸೀಕೆರೆಯ ಚಂದ್ರಕಾಂತ ಕೆ.ಬಿ. ಮತ್ತು ಪತ್ರಿಕೋದ್ಯಮ ಕ್ಷೇತ್ರದಿಂದ ಸುವರ್ಣ ನ್ಯೂಸ್ ವರದಿಗಾರರಾದ ಕೆ.ಎಂ. ಹರೀಶ್ ಅವರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಆರ್. ಗಿರೀಶ್ ಅವರು ತಿಳಿಸಿದ್ದಾರೆ.
ಮೇಲ್ಕಂಡ ಸನ್ಮಾನಿತರು ನವೆಂಬರ್ 1 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಉಪವಿಭಾಗಾಧಿಕಾರಿ ಅವರ ಬಳಿ ವರದಿ ಮಾಡಿಕೊಳ್ಳುವಂತೆ ಕನ್ನಡ ರಾಜ್ಯೋತ್ಸವ ಸನ್ಮಾನ ಸಮಿತಿ ಅಧ್ಯಕ್ಷರು ಹಾಗೂ ಉಪವಿಭಾಗಾಧಿಕಾರಿ ಬಿ.ಎ ಜಗದೀಶ್ ಅವರು ತಿಳಿಸಿದ್ದಾರೆ