ಈ ಕೆಳಕಂಡ ಕೆಲ ರೈಲು ಸೇವೆಯ ರದ್ದತಿ/ಭಾಗಶಃ ರದ್ದತಿ ಮಾಹಿತಿ

0

ರೈಲುಗಳ ಸೇವೆಯಲ್ಲಿ ಬದಲಾವಣೆ

ಕರಜಗಿ ಮತ್ತು ಸವಣೂರು ಭಾಗದಲ್ಲಿ ಸವಣೂರು ಮೊದಲನೇ ಹಂತದ ದ್ವಿಪಥ ಕಾಮಗಾರಿಯ ಸಲುವಾಗಿ ದಿನಾಂಕ 10,02.2022 ರಿಂದ 14.02 2022 ರವರೆಗೆ ಪ್ರಿ ನಾನ್-ಇಂಟರ್‌ಲಾಕಿಂಗ್ ಮತ್ತು ದಿನಾಂಕ 15.02.2022 ರಂದು ನಾನ್-ಇಂಟರ್‌ಲಾಕಿಂಗ್ ಕಾರ್ಯದ ನಿಮಿತ್ತ ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆಯಾಗುವುದು ಎಂದು ನೈರುತ್ಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ,

ರೈಲು ಸೇವೆಯ ರದ್ದತಿ:

ದಿನಾಂಕ 12.02.2022 ರಿಂದ 15.02.2022 ರ ವರೆಗೆ ಅರಸೀಕೆರೆ ಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ.07367 ಅರಸೀಕೆರೆ – ಎಸ್.ಎಸ್.ಎಸ್ ಹುಬ್ಬಳ್ಳಿ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುವುದು,

• 12.02.2022 ರಿಂದ 15.02.2022 ರ ವರೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07368 ಎಸ್.ಎಸ್.ಎಸ್ ಹುಬ್ಬಳ್ಳಿ – ಅರಸೀಕೆರೆ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲಿನ ಸೇವೆಯನ್ನು ರದ್ದುಗೊಳಿಸಲಾಗುವುದು ಎಂದಿದೆ

ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆ ಸಂ.512 ದಿ: 20,01,2022

LEAVE A REPLY

Please enter your comment!
Please enter your name here