ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

0

ನ್ಯಾಷನಲ್ ಟೆಸ್ಟಿನಂಗ್ ಏಜೆನ್ಸಿಯವರು 2021-22ರ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿ ಮತ್ತಿ 9ನೇ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ 33 ಸೈನಿಕ ಶಾಲೆಗಳಲ್ಲಿ AISSEE–2021 ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು.
ಸೈನಿಕ ಶಾಲೆಗಳು ಇಂಗ್ಲೀಷ್ ಮಾಧ್ಯಮ ವಸತಿ ಶಾಲೆಗಳಾಗಿCBSC ಅಂಗಸಂಸ್ಥೆಗಳಾಗಿವೆ ಮತ್ತು ಸೈನಿಕ ಶಾಲಾ ಸೊಸೈಟಿಯಿಂದ(ರಕ್ಷಣಾ ಸಚಿವಾಲಯದ ಅಡಿಯಲ್ಲಿ) ಕಾರ್ಯ ನಿರ್ವಹಿಸುತ್ತಿವೆ.ಈ ಶಾಲೆಗಳ ಅಧಿಕಾರಿಗಳನ್ನಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ ಹಾಗೂ ಇತರೆ ಟ್ರೈನಿಂಗ್ ಅಕಾಡೆಮಿಗಳಿಗಾಗಿ ಅಭ್ಯರ್ಥಿಗಳನ್ನು ತಯಾರು ಮಾಡುವವು.

2021ರ ಜನವರಿ 10 ಭಾನುವಾರದಂದು ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆಯು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, ಒ.ಎಂ.ಆರ್. ಶೀಟ್ ಆಧಾರಿತವಾಗಿ ಪರೀಕ್ಷೆ ಪರೀಕ್ಷೆ ನಡೆಯಲಿದೆ.

6ನೇ ತರಗತಿಗೆ ಅಭ್ಯರ್ಥಿಗಳು 2021ರ ಮಾರ್ಚ್ 31 ರಂತೆ 12ರ್ವಗಳ ನಡುವೆ ಇರಬೇಕು. ಬಾಲಕ ಮತ್ತು ಬಾಲಕಿಯರಿಗೆ ಎಲ್ಲಾ ಸೈನಿಕ ಶಾಲೆಗಳಲ್ಲಿ ಪ್ರವೇಶ ತೆರೆದಿರುತ್ತದೆ. 9ನೇ ತರಗತಿಗೆ ಅಭ್ಯರ್ಥಿಗಳು 2021ರ ಮಾರ್ಚ್ 31 ರಂತೆ 13 ಮತ್ತು 15 ವರ್ಷಗಳ ನಡುವೆ ಇರಬೇಕು ಹಾಗೂ ಪ್ರವೇಶ ಸಮಯದಲ್ಲಿ ಒಂದು ಮಾನ್ಯತೆ ಹೊಂದಿರುವ ಶಾಲೆಯಿಂದ 8 ನೇ ತರಗತಿ ತೇರ್ಗಡೆ ಹೊಂದಿರಬೇಕು.
ಪರೀಕ್ಷಾ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 400 ರೂ. ಹಾಗೂ ಇತರರಿಗೆ 550 ರೂ. ಶುಲ್ಕ ಇರುತ್ತದೆ.

ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲವಧಿ, ಮಾಧ್ಯಮ, ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ನಗರಗಳು, ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕಗಳು ಇತ್ಯಾದಿ ಮಾಹಿತಿಗಳು ವೆಬ್‍ಸೈಟ್: www.nta.ac.in ನಲ್ಲಿರುವ ಮಾಹಿತಿ ಕೈಪಿಡಿಯಲ್ಲಿ ಲಭ್ಯವಿದೆ.
2021ರ ಂAISSEE ಪರೀಕ್ಷೆಗಾಗಿ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ವಿವರವಾದ ಮಾಹಿತಿ ಕೈಪಿಡಿಯನ್ನು ಓದಿಕೊಂಡಿರಬೇಕು ಹಾಗೂ ಆನ್‍ಲೈನ್ ಮೂಲಕ ಮಾತ್ರ ವೆಬ್‍ಸೈಟ್:https://aissee.nta.nic.in ಸಹಾಯದಿಂದ ನವೆಂಬರ್ 19 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪರೀಕ್ಷಾ ಶುಲ್ಕವನ್ನೂ ಸಹ ಆನ್‍ಲೈನ್ ಮೂಲಕ ಪೇಮೆಂಟ್ ಗೇಟ್‍ವೇಗಳಾದ ಡೆಬಿಟ್ ಕಾರ್ಡ್, ಕ್ರೆಡಿಟ್ಕಾರ್ಡ್ ಅಥವಾ ಇಂಟರ್‍ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವ್ಯಾಲೆಟ್ ಮೂಲಕ ಪಾವತಿಸುವ ಅವಶ್ಯವಿದೆ ಎಂದು ಎನ್.ಟಿ.ಎ. ಹಿರಿಯ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here