ಹಜರತ್ ಮುಹಮ್ಮದ್ ಪೈಗಂಬರ್ ರವರ ಜನುಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಿಸಲಾಯಿತು

0

ಅರಸೀಕೆರೆ: ಇಂದು ನಗರದ ಸುನ್ನಿ ದಾವತೇ ಇಸ್ಲಾಮಿಯ ವಿದ್ಯಾರ್ಥಿ ಘಟಕವಾದ ಎಸ್ ಡಿ ಐ ಉಮಿದ್ ವಿಂಗ್ ವತಿಯಿಂದ ಹಜರತ್ ಮುಹಮ್ಮದ್ ಪೈಗಂಬರ್ ರವರ ಜನುಮದಿನದ ಪ್ರಯುಕ್ತ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಪ್ರದೀಪ್ ರವರು ಯುವಕರ ಸಮಾಜಮುಖಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಡಿ ಐ ಉಮಿದ್ ವಿಂಗ್ ನಾ ಅರಸೀಕೆರೆ ಘಟಕದ ಕಾರ್ಯದರ್ಶಿಯಾದ ಮೊಹಮ್ಮದ್ ಶಾಜ್ ಮಾತನಾಡಿ ನಮ್ಮ ಪ್ರವಾದಿಯವರು ರೋಗಿಗಳನ್ನು ಭೇಟಿ ಮಾಡಿ ಅವರ ಯೋಗ ಕ್ಷೇಮದ ಬಗ್ಗೆ ವಿಚಾರಿಸುತ್ತಿದ್ದರು.

ಇದೇ ಬರುವ ಗುರುವಾರದಂದು ಪ್ರವಾದಿ ರವರ ಜನುಮದಿನವಿರುವ ಕಾರಣ ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ನಮ್ಮ ಯುವಕರ ತಂಡದಿಂದ ರೋಗಿಗಳಿಗೆ ಹಣ್ಣು ಹಂಪಲುಗಳು ವಿತರಿಸುತ್ತಿದೆವೆ ಎಂದು ತಿಳಿಸಿದರು. ನಂತರ ಎಲ್ಲಾ ಯುವಕರು ಸೇರಿ ಪ್ರತಿ ವಾರ್ಡಿಗೆ ಹೋಗಿ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಐ ಉಮಿದ್ ವಿಂಗ್ ನಾ ಎಲ್ಲಾ ಪದಾಧಿಕಾರಿಗಳು ಅರಸೀಕೆರೆ ಸುನ್ನಿ ದಾವತೇ ಇಸ್ಲಾಮಿಯ ಮುಖ್ಯಸ್ಥರಾದ ಸೈಯದ್ ಅಲಿ ಜಾನ್, ಶಫೀಕ್, ಮೊಹಮ್ಮದ್ ಮುಬಾರಕ್, ಶಬ್ಬೀರ,ಸಲ್ಮಾನ್, ಇರ್ಶದ, ಸಾದಾತ್ ಶಾದಿ ಮಹಲ್ ಕಮಿಟಿಯ ಅಧ್ಯಕ್ಷರಾದ ಬಾಬು ಉಪಾಧ್ಯಕ್ಷರಾದ ಫಯಾಜ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗ ಮತ್ತು ಇನ್ನು ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here