ಹಾಸನ ಜಿಲ್ಲೆಯಲ್ಲಿ ಬ್ಯಾನರ್/ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಹಾಗೂ ಅನುಮತಿ ಪ್ರಾಧಿಕಾರವು ನಿಬಂಧನೆಗಳೊಂದಿಗೆ ಅನುಮತಿ ನೀಡುವ ಬಗ್ಗೆ.

0

ಹಾಸನ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ವಿವಿಧ ಕಾರಣಗಳಿಂದ ಸಮರ್ಪಕವಾದ ಮುಂಜಾಗೃತಾ ಕ್ರಮಗಳಲ್ಲದೆ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದು ಸದರಿ ಬ್ಯಾನರ್/ಫ್ಲಕ್ಸ್ ಗಳನ್ನು ಹಾಕುವ ವಿಚಾರದಲ್ಲಿ ತಕರಾರು ಉಂಟಾಗಿರುವುದು ಕಂಡು ಬಂದಿರುತ್ತದೆ. ಈ ಸನ್ನಿವೇಶವನ್ನು ಸಮಾಜಘಾತುಕ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದ್ದು ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡಿ ಸಾರ್ವಜನಿಕರ ಶಾಂತಿಗೆ ಭಂಗ ತರುವ ಸಾಧ್ಯತೆ ಇರುತ್ತದೆ.

ಕೆಲವು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಈಗಾಗಲೇ ಜನ್ಮದಿನದ ಶುಭಾಶಯಗಳು, ದಿನಗಳ ಶುಭಾಶಯಗಳು ಹಾಗೂ ಇತ್ಯಾದಿಯಾಗಿ ರಸ್ತೆಯ ಮಧ್ಯಭಾಗದಲ್ಲಿ ಮತ್ತು ರಸ್ತೆ ಬದಿಯಲ್ಲಿ ಅಳವಡಿಸಿ ತೆರವುಗೊಳಿಸದೆ ಇರುವುದು ಕಂಡುಬರುತ್ತದೆ ಇದರಿಂದ ಯಾವುದಾದರೂ ಕಾರ್ಯಕ್ರಮಗಳು ನಡೆದರೆ ಬ್ಯಾನರ್/ ಫ್ಲೆಕ್ಸ್ ಗಳ ನ್ನು ಅಳವಡಿಸುವ ಸಾಧ್ಯತೆಯಿರುವುದರಿಂದ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಯಾವುದೇ ತರಹದ ಬ್ಯಾನರ್/ಫಕ್ಸ್‌ಗಳನ್ನು ಅಳವಡಿಸಲು ಅನುಮತಿ ನೀಡುವ ಸಂಬಂಧ ಕೆಲವು ನಿಯಮಗಳೊಂದಿಗೆ ಅಳವಡಿಸಲು ಅನುಮತಿ ನೀಡಬೇಕೆಂದು ಸಂಬಂಧಪಟ್ಟ ಅನುಮತಿ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡಲು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ರವರು ಉಲ್ಲೇಖದ ಅನ್ವಯ ಕೋರಿರುತ್ತಾರೆ.

ಕೋರಿಕೆಯನ್ನು ಪರಿಶೀಲಿಸಲಾಗಿ ಮೇಲೆ ವಿವರಿಸಿರುವ ಕಾರಣಗಳಿಂದ ಹಾಸನ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕೆಳಕಂಡಂತೆ ಆದೇಶಿಸಿದೆ.

LEAVE A REPLY

Please enter your comment!
Please enter your name here