ಹಿರಿಸಾವೆ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಯ ಕಾಮಗಾರಿಗೆ ಬಳಕೆಯಾಗುವ ಅರಣ್ಯ ಜಾಗಕ್ಕೆ ಪರ್ಯಾಯವಾಗಿ ಬದಲಿ ಜಾಗ ಹಸ್ತಾಂತರ ಮಾಡಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯು ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಸಮ್ಮತಿ ನೀಡಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಏತ ನೀರಾವರಿ ಯೋಜನೆಗಾಗಿ ಕಾಮಗಾರಿ ಕೈಗೊಳ್ಳಲಿರುವ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಚಲ್ಯ, ಬೀರನಹಳ್ಳಿ ಅರಣ್ಯ ಪ್ರದೇಶಕ್ಕೆ ಶುಕ್ರವಾರದಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಹಾಜರಿದ್ದ ಶಾಸಕರು ಅಧಿಕಾರಿಗಳಿಗೆ ವಸ್ತುಸ್ಥಿತಿ ವಿವರಿಸಿ ನಂತರ ಮಾತನಾಡಿದರು.
ಯೋಜನೆಗೆ ಬಳಕೆ ಮಾಡಿಕೊಳ್ಳಲಿರುವ ಅರಣ್ಯಪ್ರದೇಶಕ್ಕೆ ಬದಲಿಯಾಗಿ ಅರಸೀಕೆರೆ ತಾಲೂಕಿನ ಬಾಗೇಶಪುರದಲ್ಲಿ ೯ ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ, ಮರ‍್ನಾಲ್ಕು ದಿನದಲ್ಲಿ ದಾಖಲೆಗಳನ್ನು ಆನ್‌ಲೇನ್‌ನಲ್ಲಿ ಸಲ್ಲಿಕೆಯಾಗಲಿವೆ. ತದನಂತರ ಕಾಮಗಾರಿ ಪ್ರಾರಂಭಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದರು.
ಇದರಿAದ ಚಲ್ಯ, ಸುಂಡಹಳ್ಳಿ ಕಡೆಗೆ ತೆರಳುವ ಬಲಭಾಗದ ಕಾಲುವೆ ಕೆಲಸ ಈ ಮೂಲಕ ಪ್ರಾರಂಭವಾಗಲಿದೆ. ಇನ್ನೂ ಎಡಭಾಗದ ಕಾಮಗಾರಿ ಕೆಲಸ ಮುಂದಿನ ೨೦ ದಿನಗಳಲ್ಲಿ ಸಂಪೂರ್ಣ ಮುಗಿದು ನೀರು ಹರಿಸಲಾಗುವುದು. ಸದ್ಯವೀಗ ಹುಳಿಗೆರೆ ಕೆರೆಗೆ ನೀರು ಹರಿಯುತ್ತಿದ್ದು, ಮರಿಶೆಟ್ಟಿಹಳ್ಳಿ ಕೆರೆ ತುಂಬಿದ ನಂತರ ಮತ್ತೀಘಟ್ಟ ಕೆರೆಗೆ ನೀರು ಹರಿಸಲಾಗುವುದೆಂದರು.
ಅರಣ್ಯ ಇಲಾಖೆ ಉಪ ಅರಣ್ಯಸಂರಕ್ಷಣಾಧಿಕಾರಿ ಶಿವರಾಮುಬಾಬು, ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್, ಯೋಜನೆ ಇಂಜಿನಿಯರ್ ಅಮೃತ್, ಮುಖಂಡ ದೇವರಾಜೇಗೌಡ ಸೇರಿ ಇತರರು ಇದ್ದರು.
ಹಿರಿಸಾವೆ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಗಾಗಿ ಬಳಕೆಯಾಗಲಿರುವ ಅರಣ್ಯಪ್ರದೇಶದ ಜಾಗದಲ್ಲಿ ಕಾಮಗಾರಿ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರದಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.