ದೆಹಲಿ/ಹಾಸನ : (ಹಾಸನ್_ನ್ಯೂಸ್) !, ದೇಶದಲ್ಲಿ ಮತ್ತೆ ನೋಟ್ ಬ್ಯಾನ್ ಆಗುತ್ತಂತೆ. ಈಗ ಚಾಲ್ತಿಯಲ್ಲಿರೋ ಹಳೆಯ 100 ರೂಪಾಯಿ, 10 ರೂಪಾಯಿ, 5 ರೂಪಾಯಿ ನೋಟುಗಳು ಬ್ಯಾನ್ ಆಗುತ್ವಂತೆ. ಶೀಘ್ರದಲ್ಲೇ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡ್ತಾರಂತೆ. ಆರ್‌ಬಿಐ ಕೂಡ ಈ ಬಗ್ಗೆ ನೋಟಿಸ್ ಹೊರಡಿಸುತ್ತಂತೆ. ಹೀಗೆ ಹಸಿ ಕಥೆಗಳು ಸುದ್ದಿಗಳು ದೇಶದಲ್ಲಿ ಓಡಾಡ್ತಿವೆ. ಆದ್ರೆ, ಇದ್ಯಾವುದಕ್ಕೂ ನೀವು ಚಿಂತೆ ಮಾಡಬೇಡಿ , ಅಂತಾ ಸುದ್ದಿಗಳಿದ್ದರೆ ಸ್ಪಷ್ಟವಾಗಿ RBI ನಿಮ್ಮ ಮುಂದೆ ಇಡಲಿದೆ ., ಆರ್‌ಬಿಐ ಹೇಳಿದೆ
ಕೆಲವು ಮಾಧ್ಯಮಗಳು ಸುದ್ದಿ ತಿರುಚಿದ್ದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗರಂ
ಹಳೆಯ 100 ರೂಪಾಯಿ, 10 ರೂಪಾಯಿ, 5 ರೂಪಾಯಿಗಳನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾನ್ ಮಾಡುತ್ತೆ ಅನ್ನೋ ಸುದ್ದಿ ಸಾರ್ವಜನಿಕ ವಲಯದಲ್ಲಿ ಓಡಾಡುತ್ತಿತ್ತು. ಇದಕ್ಕೆ ಆರ್‌ಬಿಐ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಯಾವುದೇ ನೋಟ್ ಬ್ಯಾನ್ ಬಗ್ಗೆ ಈ ಸಾಲಿನಲ್ಲಿ ನೊಟೀಸ್ ಹೊರಡಿಸಿಲ್ಲ ಆಗಲ್ಲ.