ಹಾಸನದ ಪ್ರತಿಭಾವಂತ ಬರಹಗಾರನೊಬ್ಬನ ರೋಚಕ ಕಥೆ

0

ಕರೋನ ಘನಘೋರ
ರಂಗಸ್ಥಳ ಎಂಬ ಊರಿನಲ್ಲಿ ಒಂದು ಬಡತನ ಕುಟುಂಬ ವಿತ್ತು . ಆ ಕುಟುಂಬದಲ್ಲಿ ತಂದೆ ತಾಯಿ ಮಗ ಇದ್ದರು ಆ ಮಗನ ಹೆಸರು ಹರೀಶ್. ಹರೀಶ್ ತಂದೆ ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿರುವಾಗ ಹರೀಶ್ ಕೂಡ ಕರೆದುಕೊಂಡು ಹೋಗುತ್ತಿದ್ದರು. ಹರೀಶ್ ತಂದೆ ತಾಯಿಗೆ ಒಂದು ಆಸೆ ಇತ್ತು ಅದು ಸ್ವಂತ ಮನೆಯನ್ನು ಕಟ್ಟಬೇಕು ಎಂಬುದು ಅವರ ಆಸೆಯಾಗಿತ್ತು‌. ಹರೀಶ್ ತಂದೆ ಕೂಲಿ ಕೆಲಸ ಮಾಡಿದ ಹಣವನ್ನು ಬ್ಯಾಂಕ್ ಉಳಿತಾಯ ಖಾತೆಗೆ ಹಾಕುತ್ತಿದ್ದರು. ನಂತರ ಹರೀಶ್ ತಂದೆ ಒಂದು ಮನೆ ಕಟ್ಟುವುದಕ್ಕೆ ಒಂದು ಜಾಗ ತೆಗೆದುಕೊಳ್ಳುತ್ತಾರೆ. ದಿನ ಕಳೆದಂತೆ ಹರೀಶ್ ತಂದೆ ಕನಸು ನನಸು ಆಗುತ್ತಿತ್ತು . ಆದರೆ ಹರೀಶ್ ತಂದೆ ಬೆಳಗ್ಗೆ ರಾತ್ರಿ ದುಡಿಯುವುದರಿಂದ ಅನಾರೋಗ್ಯಕ್ಕೆ ತುತ್ತಾದರು. ಆದರೆ ಅವರು ಹೋರಾಟ ಬಿಡುವುದಿಲ್ಲ ಮನೆಗೆ ಅಡಿಪಾಯ ಹಾಕಿಸಿದರು. ಆದರೆ ಮನೆಗೆ ಗೋಡೆ ಹಾಕುವಾಗ ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದರು. ಆಗ ಹರೀಶ್ ಗೆ ಎಂಟು ವರ್ಷ ಆಗಿತ್ತು.ನಂತರ ಹರೀಶ್ ತಾಯಿ ಕೂಲಿ ಕೆಲಸಕ್ಕೆ ಹೋದರು. ದಿನ ಕಳೆದಂತೆ ಹರೀಶ್ ವಿದ್ಯಾಬ್ಯಾಸ ಹತ್ತನೇ ತರಗತಿಗೆ ಹೋಗುತ್ತಾನೆ .

ಒಂದು ದಿನ ಹರೀಶ್ ತಾಯಿ ಹರೀಶ್ ಗೆ ಹೇಳುತ್ತಾರೆ” ನೋಡು ಹರೀಶ್ ನೀನು ಎಂದಿಗೂ ಬಡವನಾಗಿ ಸಾಯಬಾರದು ಇಡೀ ಜಗತ್ತಿಗೆ ನೀನು ಯಾರು ಎಂದು ಗೊತ್ತಾಗಬೇಕು ಹಾಗೆ ನೀನು ಸರ್ಕಾರಿ ಕೆಲಸ ಮಾಡಬೇಕು” ಎಂದು ಹೇಳಿದರು . ಮೂರು ತಿಂಗಳ ನಂತರ ಹರೀಶ್ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ಹೋಗುತ್ತಾನೆ ಆದರೆ ಹರೀಶ್ ತನ್ನ ಹಳ್ಳಿಯಿಂದ ಪಟ್ಟಣಕ್ಕೆ ಹೋಗಬೇಕು ಆದರೆ ಬಸ್ಸಿನಲ್ಲಿ ದುಬಾರಿ ಬೆಲೆ ಇರುತ್ತದೆ ಅದಕ್ಕಾಗಿ ಹರೀಶ್ ತಾಯಿ ತನ್ನ ಬಂಗಾರದ ಒಡವೆಗಳನ್ನು ಗಿರವಿಗೆ ಇಟ್ಟು ಹರೀಶ್ ಪರೀಕ್ಷೆಗೆ ಕಳುಹಿಸಿದರು.ಆದರೆ ಹರೀಶ್ ಪರೀಕ್ಷೆ ಕೊನೆಗೆ ಎಲ್ಲಿ ಕೂರುವುದು. ಅದೇ ಸಮಯಕ್ಕೆ ಅಲ್ಲಿಯ ಒಬ್ಬ ಶಿಕ್ಷಕರು ಹರೀಶ್ ನನ್ನ ಕರೆದುಕೊಂಡು ಪರೀಕ್ಷೆ ಕೋಣೆಗೆ ತೋರಿಸುತ್ತಾರೆ . ನಂತರ ಹರೀಶ್ ಪರೀಕ್ಷೆ ಬರೆದು ಹೊರಗೆ ಬರುತ್ತಾನೆ. ಹರೀಶ್ ಪರೀಕ್ಷೆ ಅಂಕ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದ. ಎರಡು ತಿಂಗಳ ನಂತರ ಹರೀಶ್ ಪರೀಕ್ಷೆ ಫಲಿತಾಂಶ ಪ್ರಕಟವಾಯಿತು. ಅದರಲ್ಲಿ ಹರೀಶ್ ೮೬% ಅಂಕವನ್ನು ತೆಗೆದುಕೊಂಡ. ನಂತರ ಹರೀಶ್ ಮೆಕಾನಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಾನೆ. ಅಲ್ಲಿ ಹರೀಶನಿಗೆ ತುಂಬಾ ಜನ ಸ್ನೇಹಿತರು ಸಿಗುತ್ತಾರೆ. ಹರೀಶನಿಗೆ ಅವರು ಬೆನ್ನೆಲುಬು ಆಗಿರುತ್ತಾರೆ.ಒಂದು ದಿನ ಹರೀಶನಿಗೆ ಒಂದು ಪರೀಕ್ಷೆ ಕೊಡುತ್ತಾರೆ. ಆದರೆ ಹರೀಶ ಸೋತು ಹೋದನು . ನಂತರ ಹರೀಶ ವಿಷ ಸೇವಿಸಲು ಹೋದನು. ಅದನ್ನು ನೋಡಿದ ಹರೀಶ ಸ್ನೇಹಿತರು ಓಡಿಬಂದು ಹರೀಶ ಕೆನ್ನೆಗೆ ಹೊಡೆದು ಬುದ್ಧಿವಾದ ಹೇಳುತ್ತಾರೆ. ಒಬ್ಬ ಸ್ನೇಹಿತ ಹೇಳುತ್ತಾನೆ “ಹರೀಶ್ ಯಾವತ್ತು ಮನುಷ್ಯನಿಗೆ ಅಂಕಗಳು ರೂಪಿಸುವುದಿಲ್ಲ ” ಎಂದನು.

ನಂತರ ಹರೀಶ ಕುಗ್ಗಲಿಲ್ಲ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣನಾದ. ಎರಡು ವಾರಗಳ ನಂತರ ಹರೀಶ ಕೆಲಸಕ್ಕೆ ತಿರುಗಾಡುತ್ತಾನೆ . ಆದರೆ ಒಂದು ದಿನಸಿ ಅಂಗಡಿಯಲ್ಲಿ ಕೆಲಸ ಮಾಡಲು ಸಿಗುತ್ತದೆ . ಹರೀಶ್ ಕೆಲಸಕ್ಕೆ ಹೋಗುತ್ತಿರುವಾಗ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುತ್ತಾನೆ ಜೊತೆಗೆ ದಿನಸಿ ಅಂಗಡಿಗೆ ಹೋಗುತ್ತಿರುತ್ತಾನೆ . ಹರೀಶ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಇಬಿ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಪರೀಕ್ಷೆ ಬರೆಯುತ್ತಾನೆ ಆದರೆ ಉತ್ತೀರ್ಣ ಆಗುವುದಿಲ್ಲ . ಹರೀಶಗೆ ಇನ್ನೊಂದು ಪರೀಕ್ಷೆ ಇರುತ್ತದೆ ಅದು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ರೈಲ್ವೆ ಇಲಾಖೆಯಲ್ಲಿ ಕೆಲಸಮಾಡುವುದು ಹರೀಶ ಪರೀಕ್ಷೆ ಬರೆದು ಉತ್ತೀರ್ಣನಾದ ಒಂದು ವಾರದ ಇಂಟರ್ ವ್ಯೂ ಹೋಗುತ್ತಾನೆ . ಅಲ್ಲಿಯ ಮ್ಯಾನೇಜರ್ ಹರೀಶ್ ಗೆ ಕರೆಯುತ್ತಾರೆ ನಂತರ ಅಲ್ಲಿಯ ಮ್ಯಾನೇಜರ್ ಪ್ರಶ್ನೆ ಕೇಳಿ “ಹರೀಶ್ ನೀವು ಸೆಲೆಕ್ಟ್ ಆಗಿದ್ದರಿಂದ ನೀವು ಮುಂದಿನ ವಾರದಿಂದ ಕೆಲಸಕ್ಕೆ ಬರಬೇಕು” ಎಂದರು. ಹರೀಶ್ ಮನೆಗೆ ಸಿಹಿಯನ್ನು ತೆಗೆದುಕೊಂಡು ತನ್ನ ತಾಯಿಗೆ ಸಿಹಿಸುದ್ದಿ ಕೊಟ್ಟು ಸಂತೋಷ ಪಡಿಸುತ್ತಾನೆ.ನಂತರ ಹರೀಶ್ ತಾಯಿ ಒಂದು ಮಾತು ಹೇಳುತ್ತಾರೆ” ಹರೀಶ್ ನಿನ್ನ ಕೆಲಸ ಇನ್ನೂ ಮುಗಿದಿಲ್ಲ ನಿಮ್ಮ ತಂದೆ ಅರ್ಧಕ್ಕೆ ಬಿಟ್ಟಿರುವ ಮನೆಯನ್ನು ನೀನು ಕಟ್ಟಿಸಬೇಕು “ಎಂದು ಹೇಳಿದರು .ನಂತರ ಹರೀಶ್ ಕೆಲಸಕ್ಕೆ ಹೋಗುವುದಕ್ಕೆ ವಾಹನ ಬೇಕಾಗಿತ್ತು. ಒಂದು ತಿಂಗಳ ನಂತರ ಒಂದು ಕಾರ್ ತೆಗೆದುಕೊಂಡು ಪ್ರತಿ ತಿಂಗಳು ಕಂತಿನಂತೆ ಹಣ ಕಟ್ಟುತ್ತಿದ್ದನು.ಒಂದುವರೆ ವರ್ಷದ ನಂತರ ಹರೀಶ್ ಮನೆಕೆಲಸಕ್ಕೆ ಕೈ ಹಾಕಿ ನಿಧಾನಕ್ಕೆ ಮನೆ ಕಟ್ಟುತ್ತಿದ್ದನು. ಹರೀಶ್ ಗೆ ಇಪ್ಪತ್ತೆಂಟು ವರ್ಷ ಮದುವೆ ವಯಸ್ಸು ಆಗಿತ್ತು. ಒಂದು ದಿನ ಹರೀಶ್ ತಾಯಿ ಹರೀಶ್ ಗೆ ಹೇಳುತ್ತಾರೆ” ಹರೀಶ್ ನಿನಗೆ ಮದುವೆ ವಯಸ್ಸು ಬಂದಿದೆ ನೀನು ಮದುವೆ ಮಾಡಿಕೊಳ್ಳಬೇಕು” ಎಂದರು.

ಹರೀಶ್ ಹೇಳುತ್ತಾನೆ” ಅಮ್ಮ ನನ್ನ ಜವಾಬ್ದಾರಿ ಇನ್ನು ಮುಗಿದಿಲ್ಲ ನನ್ನ ಜವಾಬ್ದಾರಿ ಮುಗಿದ ನಂತರ ನನ್ನ ಮದುವೆ ಅಮ್ಮ” ಎಂದನು. ನಂತರ ಹರೀಶ್ ತಾಯಿ ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಆದರೆ ಹರೀಶ್ ಯಾವ ಹುಡುಗಿಯೂ ಒಪ್ಪುವುದಿಲ್ಲ. ಒಂದು ದಿನ ಹರೀಶ್ ತನ್ನ ತಾಯಿ ಹೇಳುತ್ತಾನೆ ” ಅಮ್ಮ ನನಗೆ ಮಲೆನಾಡಿನ ಹುಡುಗಿ ಇಷ್ಟ ನೀವು ಆ ಜಾಗದಲ್ಲಿ ಹುಡುಕಿ ಅಮ್ಮ” ಎಂದು ಹೇಳಿದನು. ಎರಡು ವಾರಗಳ ನಂತರ ಹರೀಶ ಒಂದು ಹುಡುಗಿ ಫೋಟೋ ನೋಡಿ ಒಪ್ಪುತ್ತಾನೆ . ಆ ಹುಡುಗಿ ಹೆಸರು ಸೌಜನ್ಯ. ಅವಳು ಐಎಸ್ ಓದಿ ಕೆಲಸದಲ್ಲಿ ಇದ್ದಳು . ಎರಡು ದಿನಗಳ ನಂತರ ಹರೀಶ್ ಮತ್ತು ಅವನ ತಾಯಿ ಸೌಜನ್ಯ ಮನೆಗೆ ಹೋದರು . ಅಲ್ಲಿ ಮಾತುಕತೆ ನಡೆಯಿತು. ಹರೀಶ್ ಎಲ್ಲರಿಗೂ ಹೇಳುತ್ತಾನೆ” ಎಲ್ಲರೂ ನನ್ನ ಕಡೆ ನೋಡಿ ನನಗೆ ಸೌಜನ್ಯ ಇಷ್ಟವಾಗಿದ್ದಾಳೆ ನಾನು ಖಂಡಿತ ಮದುವೆ ಆಗುವೆ ಆದರೆ ನಾನು ಒಂದು ಮನೆ ಕಟ್ಟುತ್ತಿದ್ದೇನೆ ಆ ಮನೆ ಮುಗಿದ ತಕ್ಷಣ ನನ್ನ ಮದುವೆ” ಎಂದನು. ಎಲ್ಲರೂ ಸೌಜನ್ಯಳಿಗೆ ಕೇಳುತ್ತಾರೆ” ಸೌಜನ್ಯ ಹರೀಶ್ ಮಾತು ನಿನಗೆ ಒಪ್ಪುವೆಯ” ಎಂದು ಹಿರಿಯರು ಕೇಳುತ್ತಾರೆ. ಸೌಜನ್ಯ ಹೇಳುತ್ತಾಳೆ” ನನಗೆ ಹರೀಶ್ ಮಾತು ಒಪ್ಪಿಗೆ ಇದೆ” ಎಂದು ಹೇಳಿದಳು.ಹರೀಶ್ ಗೆ ತುಂಬಾ ಖುಷಿಯಾಗುತ್ತದೆ. ಹರೀಶ್ ಮತ್ತು ಸೌಜನ್ಯ ಇಬ್ಬರು ಒಟ್ಟಿಗೆ ತಿರುಗಾಡುತ್ತಿದ್ದರು. ಒಂದು ವಾರದ ನಂತರ ಕರೋನ ಎಂಬ ಮಹಾಮಾರಿ ಇಡೀ ಜಗತ್ತಿಗೆ ಹಾವರಿಸುತ್ತದೆ . ನರೇಂದ್ರ ಮೋದಿ ಅವರು ಭಾರತವನ್ನು ಲಾಕ್ ಡೌನ್ ಎಂಬ ಅಸ್ತ್ರವನ್ನು ಬಳಸುತ್ತಾರೆ . ಇದೊಂದು ಸುದರ್ಶನ ಚಕ್ರದ ರೀತಿ ಇರುತ್ತದೆ. ರಸ್ತೆಯಲ್ಲಿ ಜನರು ಅಥವಾ ವಾಹನ ಬಂದರೆ ಲಾಠಿಯಿಂದ ಏಟು ಕೊಡುತ್ತಿದ್ದರು. ಎಲ್ಲರೂ ಬಾಯಿಗೆ ಮಾಕ್ಸ್ ಮತ್ತು ಕೈಗೆ ಸ್ಯಾನಿಟೈಜರ್ ಬಳಸುತ್ತಿದ್ದರು. ಹರೀಶ್ ಮತ್ತು ಅವನ ತಾಯಿ ಇಬ್ಬರೂ ಸೌಜನ್ಯಳ ಮನೆಗೆ ಹೋಗುತ್ತಾರೆ. ಹರೀಶ್ ಗೆ ಕುಟುಂಬದ ಅರ್ಥ ಗೊತ್ತಿರುವುದಿಲ್ಲ ಅದನ್ನು ಸೌಜನ್ಯಳ ಮನೆಯವರು ತಿಳಿಸುಕೊಡುತ್ತಾರೆ. ಹರೀಶ್ ಮಕ್ಕಳ ಜೋತೆ ಆಟವಾಡುತ್ತಾನೆ. ಆದರೆ ಹರೀಶ್ ಗೆ ಕೆಲಸದಿಂದ ಕರೆ ಬರುತ್ತದೆ . ಹರೀಶ್ ಎಲ್ಲರಿಗೂ ಹೇಳುತ್ತಾನೆ “ನನಗೆ ಕೆಲಸಕ್ಕೆ ಕರೆದಿದ್ದಾರೆ ನಾನು ನಾಳೆ ಹೋಗುವೆ “ಎಂದನು . ಆದರೆ ಎಲ್ಲರಿಗೂ ಬೇಜಾರಾಯಿತು. ಹರೀಶ್ ಎಲ್ಲರಿಗೂ ನಮಸ್ಕಾರ ಮಾಡಿ ಹೋಗುತ್ತಾನೆ . ಆದರೆ ಹರೀಶ್ ತನ್ನ ತಾಯಿಯನ್ನು ಸೌಜನ್ಯಳ ಮನೆಯಲ್ಲಿ ಬಿಟ್ಟು ಹೋದನು. ಎರಡು ತಿಂಗಳ ನಂತರ ಸರ್ಕಾರ ಕಾರ್ಮಿಕರಿಗೆ ವಿನಾಯ್ತಿ ಕೊಡುತ್ತಾರೆ. ನಂತರ ಬಸ್ ಬಿಡುತ್ತಾರೆ. ಹರೀಶ್ ಮನೆಯನ್ನು ಬೇಗ ಕಟ್ಟಿಸಿ ಮನೆಗೆ ಬಣ್ಣ ಹೋಡಿಸಿ ಸೌಜನ್ಯಳ ಮನೆಗೆ ಹೋದನು. ನಂತರ ಎಲ್ಲರನ್ನೂ ಗೃಹ ಪ್ರವೇಶಕ್ಕೆ ಕರೆದುಕೊಂಡು ಬಂದನು. ಆ ಗೃಹ ಪ್ರವೇಶದಲ್ಲಿ ಹರೀಶ್ ಮತ್ತು ಸೌಜನ್ಯಳ ನಿಶ್ಚಿತಾರ್ಥ ನಡೆದಿತ್ತು. ಆದರೆ ಮದುವೆ ಮಾಡಲು ಹೋದಾಗ ಸೌಜನ್ಯಳ ಚಿಕ್ಕಪ್ಪನ ಮಗ ತೀರಿಕೊಂಡರು ಆದರಿಂದ ಮದುವೆ ನಡೆಯಲಿಲ್ಲ.

ಆದರೆ ಮತ್ತೆ ಕರೋನ ಎಂಬ ಮಹಾಮಾರಿ ಎರಡನೇ ಅಲೆ ಅಲೆಯಾಗಿ ಬಂದಿತು ಸರ್ಕಾರ ಎಲ್ಲಾ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಘೋಷಿಸಿತ್ತು. ಹರೀಶ್ ಕೆಲಸಕ್ಕೆ ಹೋಗುತ್ತಿರುವಾಗ ಅವನಿಗೆ ಕರೋನ ಬರುತ್ತದೆ. ಆದರೆ ಹರೀಶ್ ಹೋಂಐಸೋಲೇಸನ್ ನಲ್ಲಿ ಇರುವುದಿಲ್ಲ ಆಸ್ಪತ್ರೆಗೆ ಸೇರಿದ. ಸೌಜನ್ಯ ಎಲ್ಲರಿಗೂ ಹೇಳುತ್ತಾಳೆ” ನಾನು ಪಿಪಿಇ ಕೀಟ್ ಹಾಕಿಕೊಂಡು ಮದುವೆ ಮಾಡಿಕೊಳ್ಳುವೆ” ಎಂದು ಹೇಳಿದಳು .೩೪-೪-೨೦೨೧ ಮದುವೆಯ ದಿನಾಂಕ ನಿಗದಿ ಮಾಡಿದ್ದರು. ಸೌಜನ್ಯ ಪಿಪಿಇ ಕೀಟ್ ಹಾಕಿಕೊಂಡು ಸಿದ್ಧ ಹಾಗಿದ್ದಳು. ಆದರೆ ಆಸ್ಪತ್ರೆ ವೈದ್ಯರಿಂದ ಒಂದು ಕಹಿ ಸುದ್ದಿ ಬರುತ್ತದೆ . ಅದು ಹರೀಶ್ ಸಾವಿನ ಸುದ್ದಿ . ಆ ಸುದ್ದಿ ಕೇಳಿದ ಸೌಜನ್ಯ ಮತ್ತು ಹರೀಶ್ ತಾಯಿ ತಲೆ ಸುತ್ತಿ ಕಳಗೆ ಬಿದ್ದರು. ನಂತರ ಆಸ್ಪತ್ರೆಗೆ ಹಣ ಕಟ್ಟಿ ಹರೀಶ್ ದೇಹವನ್ನು ಸುಡುಲು ಹೋದರು ಆದರೆ ಅಲ್ಲಿ ತುಂಬಾ ಮನುಷ್ಯರ ದೇಹ ಸುಡಬೇಕಿತ್ತು. ಹರೀಶ್ ದೇಹ ಸುಡಲು ಎರಡು ದಿನಗಳ ಕಾಲ ಬೇಕಾಗಿತ್ತು. ನಂತರ ಹರೀಶ್ ತಾಯಿಯನ್ನು ಸೌಜನ್ಯಳ ಮನೆಗೆ ಕರೆಸಿಕೊಂಡು ಹೋದರು.

– ಪಿ.ಕೆ.ಗೌತಮ್ , ಹಾಸನ

LEAVE A REPLY

Please enter your comment!
Please enter your name here